ದುಬಾೖ: ಪ್ರವಾಸಿ ಆಸ್ಟ್ರೇಲಿಯ ಎದುರಿನ 3 ಪಂದ್ಯಗಳ ಸರಣಿಯನ್ನು 2-1ರಿಂದ ತನ್ನದಾಗಿಸಿಕೊಂಡ ಭಾರತ, ಐಸಿಸಿ ಟೀಮ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಈ ಗೆಲುವಿನಿಂದ ಭಾರತಕ್ಕೆ ಒಂದು ರೇಟಿಂಗ್ ಅಂಕ ಲಭಿಸಿದ್ದು, ಇದೀಗ 268ಕ್ಕೆ ಏರಿದೆ. ಸದ್ಯ ಪಾಕಿಸ್ಥಾನ ಪ್ರವಾಸದಲ್ಲಿ 7 ಪಂದ್ಯಗಳ ಸುದೀರ್ಘ ಸರಣಿಯನ್ನು ಆಡುತ್ತಿರುವ ಇಂಗ್ಲೆಂಡ್ 261 ಅಂಕಗಳೊಂದಿಗೆ ದ್ವಿತೀಯ ಸ್ಥಾನಲ್ಲಿದೆ. ಅದು 4ನೇ ಪಂದ್ಯವನ್ನು ಸೋತಿ ದ್ದರಿಂದಲೂ ಭಾರತಕ್ಕೆ ಲಾಭವಾಯಿತು.
ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ಥಾನ ಸಮಾನ 258 ಅಂಕಗಳನ್ನು ಹೊಂದಿದೆ. ದಶಮಾಂಶ ಲೆಕ್ಕಾಚಾರದಲ್ಲಿ ಮುಂದಿರುವ ದಕ್ಷಿಣ ಆಫ್ರಿಕಾಕ್ಕೆ 3ನೇ ಸ್ಥಾನ ಲಭಿಸಿದೆ. ಇಂಗ್ಲೆಂಡ್ ಎದುರಿನ ಉಳಿದ ಮೂರೂ ಪಂದ್ಯ ಗೆದ್ದರೆ ಪಾಕಿಸ್ಥಾನ ಮೇಲೇರಲಿದೆ.
ಭಾರತದ ವಿರುದ್ಧ ಸರಣಿ ಸೋತ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಕ್ಕೆ ಒಂದು ಅಂಕ ನಷ್ಟವಾಗಿದ್ದು, ಅದು 6ನೇ ಸ್ಥಾನದಲ್ಲಿದೆ. ವಿಶ್ವಕಪ್ ಮುನ್ನ ಅದು ವೆಸ್ಟ್ ಇಂಡೀಸ್, ಇಂಗ್ಲೆಂಡ್ ಮತ್ತು ಭಾರತ ವಿರುದ್ಧ ಸರಣಿ ಆಡಲಿದ್ದು, ರ್‍ಯಾಂಕಿಂಗ್ ಪ್ರಗತಿಯ ನಿರೀಕ್ಷೆಯಲ್ಲಿದೆ.
ನ್ಯೂಜಿಲ್ಯಾಂಡ್ 5ನೇ ಸ್ಥಾನದಲ್ಲಿದ್ದು, ಟಿ20 ವಿಶ್ವಕಪ್‌ಗ್ೂ ಮುನ್ನ ಪಾಕಿಸ್ಥಾನ ಮತ್ತು ಬಾಂಗ್ಲಾದೇಶ ತಂಡಗಳ ತ್ರಿಕೋನ ಸರಣಿಯಲ್ಲಿ ಪಾಲ್ಗೊಳ್ಳಲಿದೆ.