Advertisement

ಟಿ20 ಪಂದ್ಯ: ಪಾಕಿಸ್ಥಾನಕ್ಕೆ ಆಘಾತವಿಕ್ಕಿದ ಇಂಗ್ಲೆಂಡ್‌ 

11:19 PM Sep 21, 2022 | Team Udayavani |

ಕರಾಚಿ: ಬರೋಬ್ಬರಿ ಹದಿನೇಳು ವರ್ಷಗಳ ಬಳಿಕ ಪಾಕಿಸ್ಥಾನ ನೆಲದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯವಾಡಿದ ಇಂಗ್ಲೆಂಡ್‌ ಗೆಲುವಿನ ಆರಂಭ ಕಂಡಿದೆ. ಕರಾಚಿಯ ಮೊದಲ ಟಿ20 ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದು ಮುನ್ನಡೆ ಸಾಧಿಸಿದೆ.

Advertisement

ಪಾಕಿಸ್ಥಾನ 7 ವಿಕೆಟಿಗೆ 158 ರನ್‌ ಗಳಿಸಿದರೆ, ಇಂಗ್ಲೆಂಡ್‌ 19.2 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 160 ರನ್‌ ಬಾರಿಸಿತು. ಮೂರೂವರೆ ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಪಂದ್ಯವಾಡಿದ ಆರಂಭಕಾರ ಅಲೆಕ್ಸ್‌ ಹೇಲ್ಸ್‌ 53, ಮಧ್ಯಮ ಕ್ರಮಾಂಕದ ಬ್ಯಾಟರ್‌ ಹ್ಯಾರಿ ಬ್ರೂಕ್‌ ಅಜೇಯ 42 ರನ್‌ ಹೊಡೆದು ಇಂಗ್ಲೆಂಡ್‌ ಗೆಲುವನ್ನು ಸಾರಿದರು.

ಮೊದಲ ಪಂದ್ಯವಾಡಿದ ಪೇಸ್‌ ಬೌಲರ್‌ ಲ್ಯೂಕ್‌ ವುಡ್‌ 24ಕ್ಕೆ 3 ವಿಕೆಟ್‌ ಕಿತ್ತು ಪಾಕ್‌ಗೆ ಕಡಿವಾಣ ಹಾಕಿದರು. ಜತೆಗೆ ಪದಾರ್ಪಣ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದ ಇಂಗ್ಲೆಂಡಿನ 3ನೇ ಕ್ರಿಕೆಟಿಗನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಉಳಿದಿಬ್ಬರೆಂದರೆ ಕೆವಿನ್‌ ಪೀಟರ್‌ಸನ್‌ ಮತ್ತು ಡೇವಿಡ್‌ ಮಲಾನ್‌.

ಪಾಕ್‌ ಪರ ಮೊಹಮ್ಮದ್‌ ರಿಜ್ವಾನ್‌ 68 ರನ್‌ ಮಾಡಿದರು. ಇದು ಅವರ 17ನೇ 50 ಪ್ಲಸ್‌ ರನ್‌ ಸಾಧನೆ. ವಿಕೆಟ್‌ ಕೀಪರ್‌ ಓರ್ವನ ದಾಖಲೆಯೂ ಆಗಿದೆ. ಈ ಇನ್ನಿಂಗ್ಸ್‌ ವೇಳೆ ಅತೀ ಕಡಿಮೆ 52 ಇನ್ನಿಂಗ್ಸ್‌ಗಳಲ್ಲಿ ಎರಡು ಸಾವಿರ ರನ್‌ ಬಾರಿಸಿದ ನಾಯಕ ಬಾಬರ್‌ ಆಜಂ ದಾಖಲೆಯನ್ನೂ ರಿಜ್ವಾನ್‌ ಸರಿದೂಗಿಸಿದರು.

ಉಳಿದೆರಡು ಪಂದ್ಯಗಳನ್ನು ಗುರುವಾರ ಹಾಗೂ ಶುಕ್ರವಾರ ಇದೇ ಅಂಗಳದಲ್ಲಿ ಆಡಲಾಗುವುದು.
ಇಂಗ್ಲೆಂಡ್‌ 2005ರಲ್ಲಿ ಕೊನೆಯ ಸಲ ಪಾಕಿಸ್ಥಾನ ಪ್ರವಾಸ ಕೈಗೊಂಡಿತ್ತು. ಅಂದಿನ ಸರಣಿ 3 ಟೆಸ್ಟ್‌ ಹಾಗೂ 5 ಏಕದಿನ ಪಂದ್ಯಗಳನ್ನು ಒಳಗೊಂಡಿತ್ತು.

Advertisement

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ಥಾನ-7 ವಿಕೆಟಿಗೆ 158 (ರಿಜ್ವಾನ್‌ 68, ಬಾಬರ್‌ 31, ಇಫ್ತಿಕಾರ್‌ 28, ಲ್ಯೂಕ್‌ ವುಡ್‌ 24ಕ್ಕೆ 3, ರಶೀದ್‌ 27ಕ್ಕೆ 2). ಇಂಗ್ಲೆಂಡ್‌-19.2 ಓವರ್‌ಗಳಲ್ಲಿ 4 ವಿಕೆಟಿಗೆ 160 (ಹೇಲ್ಸ್‌ 53, ಬ್ರೂಕ್ಸ್‌ ಅಜೇಯ 42, ಖಾದಿರ್‌ 36ಕ್ಕೆ 2).

ಪಂದ್ಯಶ್ರೇಷ್ಠ: ಲ್ಯೂಕ್‌ ವುಡ್‌.

Advertisement

Udayavani is now on Telegram. Click here to join our channel and stay updated with the latest news.

Next