Advertisement

T20 match: ಅಫ್ಘಾನಿಸ್ಥಾನ ತಂಡದೆದು ಐರ್ಲೆಂಡ್‌ ಜಯಭೇರಿ

11:48 PM Mar 16, 2024 | Team Udayavani |

ಶಾರ್ಜಾ: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಐರ್ಲೆಂಡ್‌ ತಂಡವು ಶಾರ್ಜಾದಲ್ಲಿ ನಡೆಯುತ್ತಿರುವ ಅಫ್ಘಾನಿಸ್ಥಾನ ತಂಡದೆದುರಿನ ಮೊದಲ ಟಿ20 ಪಂದ್ಯದಲ್ಲಿ 38 ರನ್ನುಗಳ ಜಯ ಸಾಧಿಸಿದೆ. ಈ ಜಯದ ಐರ್ಲೆಂಡ್‌ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ ಇನ್ನೆರಡು ಪಂದ್ಯಗಳು ಮಾ. 17 ಮತ್ತು 18 ರಂದು ನಡೆಯಲಿವೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಐರ್ಲೆಂಡ್‌ ತಂಡವು 6 ವಿಕೆಟಿಗೆ 149 ರನ್ನುಗಳ ಸಾಧಾರಣ ಮೊತ್ತ ಪೇರಿಸಿತು. ಹ್ಯಾರಿ ಟೆಕ್ಟರ್‌ 56 ರನ್‌ ಗಳಿಸಿ ಅಜೇಯರಾಗಿ ಉಳಿದರು. ಇದಕ್ಕುತ್ತರವಾಗಿ ಬೆನ್‌ ವೈಟ್‌ ಅವರ ದಾಳಿಗೆ ಕುಸಿದ ಅಫ್ಘಾನಿಸ್ಥಾನ ತಂಡವು 18.4 ಓವರ್‌ಗಳಲ್ಲಿ 111 ರನ್ನಿಗೆ ಆಲೌಟಾಗಿ ಶರಣಾಯಿತು. ಬೆನ್‌ ವೈಟ್‌ 20 ರನ್ನಿಗೆ 4 ವಿಕೆಟ್‌ ಉರುಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next