Advertisement

ಟಿ20 ವಿಶ್ವಕಪ್‌ ಫೈನಲ್ : ಟಿ20 ಕಿರೀಟ ಮುಡಿಗೇರಿಸಿಕೊಂಡ ಆಸ್ಟ್ರೇಲಿಯ

01:10 AM Nov 15, 2021 | Team Udayavani |

ದುಬಾೖ: ಆಸ್ಟ್ರೇಲಿಯ ಮೊದಲ ಬಾರಿಗೆ ಟಿ20 ವಿಶ್ವಕಪ್‌ ಕಿರೀಟ ಏರಿಸಿಕೊಂಡಿ ವಿಜೃಂಭಿಸಿದೆ. ರವಿವಾರ ದುಬಾೖ ಫೈನಲ್‌ನಲ್ಲಿ ನೆರೆಯ ಎದುರಾಳಿ ನ್ಯೂಜಿಲ್ಯಾಂಡ್‌ ವಿರುದ್ಧ ಸರ್ವಾಂಗೀಣ ಪ್ರದರ್ಶನ ನೀಡಿದ ಕಾಂಗರೂ ಪಡೆ 8 ವಿಕೆಟ್‌ಗಳಿಂದ ಗೆದ್ದು ಅಧಿಕಾರಯುತವಾಗಿಯೇ ಕಪ್‌ ಎತ್ತಿತು.

Advertisement

ಬ್ಯಾಟಿಂಗಿಗೆ ಇಳಿಸಲ್ಪಟ್ಟ ನ್ಯೂಜಿಲ್ಯಾಂಡ್‌, ನಾಯಕ ಕೇನ್‌ ವಿಲಿಯಮ್ಸನ್‌ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 4 ವಿಕೆಟಿಗೆ 172 ರನ್‌ ಪೇರಿಸಿದರೆ, ಆಸ್ಟ್ರೇಲಿಯ 18.5 ಓವರ್‌ಗಳಲ್ಲಿ 2 ವಿಕೆಟಿಗೆ 173 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು.

ಕಿವೀಸ್‌ ಸವಾಲಿನ ಮೊತ್ತ ಪೇರಿಸಿದರೂ ಬೌಲಿಂಗ್‌ ಮ್ಯಾಜಿಕ್‌ ಮಾಡುವಲ್ಲಿ ಎಡವಿತು. ಆರನ್‌ ಫಿಂಚ್‌ ಐದೇ ರನ್‌ ಮಾಡಿ ಮತ್ತೊಮ್ಮೆ “ಆಡದ ನಾಯಕ’ನೆಂಬ ಅವಮಾನಕ್ಕೆ ಸಿಲುಕಿದರೂ ಡೇವಿಡ್‌ ವಾರ್ನರ್‌, ಮಿಚೆಲ್‌ ಮಾರ್ಷ್‌ ಅವರ ಅಮೋಘ ಜತೆಯಾಟದ ನೆರವಿನಿಂದ ಯಾವುದೇ ಒತ್ತಡವಿಲ್ಲದೆ ಗುರಿ ಮುಟ್ಟಿತು. ಇಬ್ಬರೂ ಅರ್ಧ ಶತಕ ದಾಖಲಿಸುವ ಜತೆಗೆ ದ್ವಿತೀಯ ವಿಕೆಟಿಗೆ 92 ರನ್‌ ಪೇರಿಸಿ ಕಿವೀಸ್‌ಗೆ ಯಾವುದೇ ಅವಕಾಶ ಸಿಗದಂತೆ ಮಾಡಿದರು.

ಸರಿಯಾದ ಹೊತ್ತಿಗೆ ಫಾರ್ಮ್ ಕಂಡುಕೊಂಡ ವಾರ್ನರ್‌ 38 ಎಸೆತಗಳಿಂದ 53 ರನ್‌ (4 ಬೌಂಡರಿ, 3 ಸಿಕ್ಸರ್‌) ಮಾಡಿದರೆ, ಮಾರ್ಷ್‌ ಅಜೇಯ 77 ರನ್‌ ಬಾರಿಸಿದರು. ಈ ಅಮೋಘ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ, 4 ಸಿಕ್ಸರ್‌ ಸಿಡಿಸಿದರು.

Advertisement

ನ್ಯೂಜಿಲ್ಯಾಂಡ್‌
ಮಾರ್ಟಿನ್‌ ಗಪ್ಟಿಲ್‌ ಸಿ ಸ್ಟೋಯಿನಿಸ್‌ ಬಿ ಝಂಪ 28
ಡ್ಯಾರಿಲ್‌ ಮಿಚೆಲ್‌ ಸಿ ವೇಡ್‌ ಬಿ ಹ್ಯಾಝಲ್‌ವುಡ್‌ 11
ವಿಲಿಯಮ್ಸನ್‌ ಸಿ ಸ್ಮಿತ್‌ ಬಿ ಹ್ಯಾಝಲ್‌ವುಡ್‌ 85
ಗ್ಲೆನ್‌ ಫಿಲಿಪ್ಸ್‌ ಸಿ ಮ್ಯಾಕ್ಸ್‌ವೆಲ್‌ ಬಿ ಹ್ಯಾಝಲ್‌ವುಡ್‌ 18
ಜೇಮ್ಸ್‌ ನೀಶಮ್‌ ಔಟಾಗದೆ 13
ಟಿಮ್‌ ಸೀಫ‌ರ್ಟ್‌ ಔಟಾಗದೆ 8
ಇತರ 9
ಒಟ್ಟು (4 ವಿಕೆಟಿಗೆ) 172
ವಿಕೆಟ್‌ ಪತನ: 1-28, 2-76, 3-144, 4-148.
ಬೌಲಿಂಗ್‌;
ಮಿಚೆಲ್‌ ಸ್ಟಾರ್ಕ್‌ 4-0-60-0
ಜೋಶ್‌ ಹ್ಯಾಝಲ್‌ವುಡ್‌ 4-0-16-3
ಗ್ಲೆನ್‌ ಮ್ಯಾಕ್ಸ್‌ವೆಲ್‌ 3-0-28-0
ಪಾಟ್‌ ಕಮಿನ್ಸ್‌ 4-0-27-0
ಆ್ಯಡಂ ಝಂಪ 4-0-26-1
ಮಿಚೆಲ್‌ ಮಾರ್ಷ್‌ 1-0-11-0

ಆಸ್ಟ್ರೇಲಿಯ
ಡೇವಿಡ್‌ ವಾರ್ನರ್‌ ಬಿ ಬೌಲ್ಟ್ 53
ಆರನ್‌ ಫಿಂಚ್‌ ಸಿ ಮಿಚೆಲ್‌ ಬಿ ಬೌಲ್ಟ್ 5
ಮಿಚೆಲ್‌ ಮಾರ್ಷ್‌ ಔಟಾಗದೆ 77
ಮ್ಯಾಕ್ಸ್‌ವೆಲ್‌ ಔಟಾಗದೆ 28
ಇತರ 10
ಒಟ್ಟು (18.5 ಓವರ್‌ಗಳಲ್ಲಿ 2 ವಿಕೆಟಿಗೆ) 173
ವಿಕೆಟ್‌ ಪತನ: 1-15, 2-107.
ಬೌಲಿಂಗ್‌;
ಟ್ರೆಂಟ್‌ ಬೌಲ್ಟ್ 4-0-18-2
ಟಿಮ್‌ ಸೌಥಿ 3.5-0-43-0
ಆ್ಯಡಂ ಮಿಲೆ° 4-0-30-0
ಐಶ್‌ ಸೋಧಿ 3-0-40-0
ಮಿಚೆಲ್‌ ಸ್ಯಾಂಟ್ನರ್‌ 3-0-23-0
ಜೇಮ್ಸ್‌ ನೀಶಮ್‌ 1-0-15-0

Advertisement

Udayavani is now on Telegram. Click here to join our channel and stay updated with the latest news.

Next