Advertisement
ರವಿವಾರ ಇಲ್ಲಿನ “ವೆಸ್ಟ್‌ಪಾಕ್ ಸ್ಟೇಡಿಯಂ’ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ 8 ವಿಕೆಟ್ ಕಳೆದುಕೊಂಡು 176 ರನ್ನುಗಳ ಸವಾಲಿನ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ 19.5 ಓವರ್‌ಗಳಲ್ಲಿ 155ಕ್ಕೆ ಆಲೌಟ್ ಆಯಿತು. ಆಲ್‌ರೌಂಡರ್ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಅವರ ಅದ್ಭುತ ಫೀಲ್ಡಿಂಗ್ ಹಾಗೂ ಮಿಚೆಲ್ ಸ್ಯಾಂಟ್ನರ್ ಅವರ ಘಾತಕ ಬೌಲಿಂಗ್ ಕಿವೀಸ್ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿತು. ಗ್ರ್ಯಾಂಡ್‌ಹೋಮ್ 4 ಕ್ಯಾಚ್ ಪಡೆದರೆ, ಸ್ಯಾಂಟ್ನರ್ 25 ರನ್ನಿಗೆ 3 ವಿಕೆಟ್ ಕಿತ್ತು ಪಂದ್ಯಶ್ರೇಷ್ಠರೆನಿಸಿದರು.
ಫಾರ್ಮ್ನಲ್ಲಿಲ್ಲದೆ ಪರದಾಡುತ್ತಿದ್ದ ಕಿವೀಸ್ ಆರಂಭಕಾರ ಮಾರ್ಟಿನ್ ಗಪ್ಟಿಲ್ 28 ಎಸೆತಗಳಿಂದ 41 ರನ್ (3 ಬೌಂಡರಿ, 2 ಸಿಕ್ಸರ್)ಬಾರಿಸಿ ಗಮನ ಸೆಳೆದರು. ಕೊನೆಯ ಹಂತದಲ್ಲಿ ಆಲ್‌ರೌಂಡರ್ ಜಿಮ್ಮಿ ನೀಶಮ್ 22 ಎಸೆತಗಳಲ್ಲಿ 42 ರನ್ ಬಾರಿಸಿ ತಂಡದ ಮೊತ್ತವನ್ನು ಬೆಳೆಸಿದರು.
Related Articles
Advertisement
ಸಂಕ್ಷಿಪ್ತ ಸ್ಕೋರ್ ನ್ಯೂಜಿಲ್ಯಾಂಡ್-8 ವಿಕೆಟಿಗೆ 176 (ನೀಶಮ್ 42, ಗಪ್ಟಿಲ್ 41, ಜೋರ್ಡನ್ 23ಕ್ಕೆ 3, ಸ್ಯಾಮ್ ಕರನ್ 22ಕ್ಕೆ 2). ಇಂಗ್ಲೆಂಡ್-19.5 ಓವರ್‌ಗಳಲ್ಲಿ 155 (ಮಾಲನ್ 39, ಜೋರ್ಡನ್ 36, ಮಾರ್ಗನ್ 32, ಸ್ಯಾಂಟ್ನರ್ 25ಕ್ಕೆ 3, ಸೌಥಿ 25ಕ್ಕೆ 2, ಫರ್ಗ್ಯುಸನ್ 34ಕ್ಕೆ 2, ಸೋಧಿ 37ಕ್ಕೆ 2). ಪಂದ್ಯಶ್ರೇಷ್ಠ: ಮಿಚೆಲ್ ಸ್ಯಾಂಟ್ನರ್