ಬರ್ಮಿಂಗ್‌ಹ್ಯಾಮ್: ನಾಯಕ ಜಾಸ್ ಬಟ್ಲರ್ ಹಾಗೂ ಬೌಲರ್‌ಗಳ ಅಮೋಘ ಪ್ರದರ್ಶನದಿಂದ 2ನೇ ಟಿ20 ಪಂದ್ಯದಲ್ಲಿ ಪಾಕಿಸ್ಥಾನವನ್ನು 23 ರನ್ನುಗಳಿಂದ ಮಣಿಸಿದ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿದೆ. ಲೀಡ್ಸ್‌ನಲ್ಲಿ ನಡೆಯಬೇಕಿದ್ದ ಮೊದಲ ಪಂದ್ಯ ಭಾರೀ ಮಳೆಯಿಂದ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ 7 ವಿಕೆಟಿಗೆ 183 ರನ್ ಪೇರಿಸಿದರೆ, ಪಾಕಿಸ್ಥಾನ 19.2 ಓವರ್‌ಗಳಲ್ಲಿ 160ಕ್ಕೆ ಆಲೌಟ್ ಆಯಿತು.
ಇಂಗ್ಲೆಂಡ್ ಬ್ಯಾಟಿಂಗ್ ಸರದಿಯಲ್ಲಿ ಆರಂಭಕಾರ ಜಾಸ್ ಬಟ್ಲರ್ 84 ರನ್ ಬಾರಿಸಿ ಮಿಂಚಿದರು (51 ಎಸೆತ, 8 ಬೌಂಡರಿ, 3 ಸಿಕ್ಸರ್). ವಿಲ್ ಜಾಕ್ಸ್ 37 ರನ್ ಮಾಡಿದರು (24 ಎಸೆತ, 4 ಬೌಂಡರಿ, 2 ಸಿಕ್ಸರ್).
ಚೇಸಿಂಗ್ ವೇಳೆ ಪಾಕ್ ತೀವ್ರ ಕುಸಿತಕ್ಕೆ ಸಿಲುಕಿತು. ನಾಯಕ ಬಾಬರ್ ಆಜಂ (32) ಮತ್ತು ಫಖಾರ್ ಜಮಾನ್ (45) 3ನೇ ವಿಕೆಟಿಗೆ 53 ರನ್ ಪೇರಿಸಿ ಹೋರಾಟ ನಡೆಸಿದರೂ ಈ ಜೋಡಿ ಬೇರ್ಪಟ್ಟ ಬಳಿಕ ಮತ್ತೆ ಕುಸಿಯಿತು.
ಇಂಗ್ಲೆಂಡ್‌ನ ಆರೂ ಬೌಲರ್ ವಿಕೆಟ್ ಕೀಳುವಲ್ಲಿ ಯಶಸ್ವಿಯಾದರು. ರೀಸ್ ಟಾಪ್ಲಿ 3, ಮೊಯಿನ್ ಅಲಿ ಮತ್ತು ಜೋಫÅ ಆರ್ಚರ್ ತಲಾ 2 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-7 ವಿಕೆಟಿಗೆ 183 (ಬಟ್ಲರ್ 84, ಜಾಕ್ಸ್ 37, ಬೇರ್‌ಸ್ಟೊ 21, ಅಫ್ರಿದಿ 36ಕ್ಕೆ 3, ಇಮಾದ್ 19ಕ್ಕೆ 2, ರೌಫ್ 34ಕ್ಕೆ 2). ಪಾಕಿಸ್ಥಾನ-19.2 ಓವರ್‌ಗಳಲ್ಲಿ 160 (ಫಖಾರ್ 45, ಬಾಬರ್ 32, ಇಫ್ತಿಕಾರ್ 23, ಟಾಪ್ಲಿ 41ಕ್ಕೆ 3, ಅಲಿ 26ಕ್ಕೆ 2, ಆರ್ಚರ್ 28ಕ್ಕೆ 2). ಪಂದ್ಯಶ್ರೇಷ್ಠ: ಜಾಸ್ ಬಟ್ಲರ್.