Advertisement
ಬ್ರಿಸ್ಬೇನ್‌ನಲ್ಲಿ ನಡೆದ ಮೊದಲ ಪಂದ್ಯದ ವೇಳೆಯೂ ಮಳೆ ಆಟವಾಡಿತ್ತು. ಅಲ್ಲಿ ಡಿ-ಎಲ್ ನಿಯಮದಂತೆ ಆಸ್ಟ್ರೇಲಿಯಕ್ಕಿಂತ ಜಾಸ್ತಿ ರನ್ ಪೇರಿಸಿಯೂ ಭಾರತ ಸೋಲನುಭವಿಸಿತ್ತು. ಆದರೆ ಮೆಲ್ಬರ್ನ್ ಪಂದ್ಯ ಆಸ್ಟ್ರೇಲಿಯದ 19 ಓವರ್‌ಗಳ ಆಟಕ್ಕೆ ಸೀಮಿತಗೊಂಡಿತು. ಆಗ ಆಸೀಸ್ 7 ವಿಕೆಟಿಗೆ 132 ರನ್ ಮಾಡಿತ್ತು.
Related Articles
ಬ್ರಿಸ್ಬೇನ್ ಪಂದ್ಯಕ್ಕೆ ಹೋಲಿಸಿದರೆ ಮೆಲ್ಬರ್ನ್ನಲ್ಲಿ ಭಾರತದ ಬೌಲಿಂಗ್ ನಿರ್ವಹಣೆ ಚೇತೋಹಾರಿಯಾಗಿತ್ತು. ಕಳೆದ ಮುಖಾಮುಖೀಯ ತಂಡವನ್ನೇ ಕಣಕ್ಕಿಳಿಸಿದ ಭಾರತ, ದ್ವಿತೀಯ ಎಸೆತದಿಂದಲೇ ಕಾಂಗರೂ ವಿಕೆಟ್ ಬೇಟೆಯಾಡುತ್ತ ಹೋಯಿತು. ಭುವನೇಶ್ವರ್ ಮತ್ತು ಖಲೀಲ್ ಅಹ್ಮದ್ ಅವರ ಆರಂಭಿಕ ಸ್ಪೆಲ್ ಘಾತಕವಾಗಿತ್ತು. ಬಳಿಕ ಬುಮ್ರಾ ಕೂಡ ಇದೇ ಲಯದಲ್ಲಿ ಸಾಗಿದರು. ಈ ಮೂವರು ಸೇರಿಕೊಂಡು 41 ರನ್ ಆಗುವಷ್ಟರಲ್ಲಿ ಆತಿಥೇಯರ 4 ವಿಕೆಟ್ ಹಾರಿಸಿದರು.
Advertisement
ಕುಲದೀಪ್, ಕೃಣಾಲ್ ಪಾಂಡ್ಯ ಅವರಿಂದಲೂ ಉತ್ತಮ ಪ್ರದರ್ಶನ ಕಂಡುಬಂತು. 14ನೇ ಓವರ್ ಆರಂಭಕ್ಕೆ 74 ರನ್ನಿಗೆ 6 ವಿಕೆಟ್ ಬಿತ್ತು. ಬಳಿಕ ಬೆನ್ ಮೆಕ್‌ಡರ್ಮಟ್, ನಥನ್ ಕೋಲ್ಟರ್ ನೈಲ್ ಸೇರಿಕೊಂಡು ತಂಡದ ಕುಸಿತಕ್ಕೆ ತಡೆಯೊಡ್ಡಿದರು. ಔಟಾಗದೆ 32 ರನ್ ಮಾಡಿದ ಮೆಕ್‌ಡರ್ಮಟ್ ಅವರದು ಆಸೀಸ್ ಸರದಿಯ ಗರಿಷ್ಠ ಗಳಿಕೆ (2 ಬೌಂಡರಿ, 1 ಸಿಕ್ಸರ್). ಕೋಲ್ಟರ್ ನೈಲ್ 9 ಎಸೆತ ಎದುರಿಸಿ 18 ರನ್ ಮಾಡಿದರು. ಕೋಲ್ಟರ್ ನೈಲ್, ಬಿಲ್ಲಿ ಸ್ಟಾನ್‌ಲೇಕ್ ಬದಲು ಅವಕಾಶ ಪಡೆದಿದ್ದರು.ಭಾರತದ ಎಲ್ಲ 5 ಮಂದಿ ಬೌಲರ್‌ಗಳೂ ವಿಕೆಟ್ ಸಂಪಾದಿಸುವಲ್ಲಿ ಯಶಸ್ವಿಯಾದರು. ಸ್ಕೋರ್ ಪಟ್ಟಿ
ಆಸ್ಟ್ರೇಲಿಯ
ಡಿ’ಆರ್ಸಿ ಶಾರ್ಟ್ ಬಿ ಅಹ್ಮದ್ 14
ಆರನ್ ಫಿಂಚ್ ಸಿ ಪಂತ್ ಬಿ ಭುವನೇಶ್ವರ್ 0
ಕ್ರಿಸ್ ಲಿನ್ ಸಿ ಪಾಂಡ್ಯ ಬಿ ಅಹ್ಮದ್ 13
ಗ್ಲೆನ್ ಮ್ಯಾಕ್ಸ್‌ವೆಲ್ ಬಿ ಪಾಂಡ್ಯ 19
ಮಾರ್ಕಸ್ ಸ್ಟೋಯಿನಿಸ್ ಸಿ ಕಾರ್ತಿಕ್ ಬಿ ಬುಮ್ರಾ 4
ಬೆನ್ ಮೆಕ್‌ಡರ್ಮಟ್ ಔಟಾಗದೆ 32
ಅಲೆಕ್ಸ್ ಕ್ಯಾರಿ ಸಿ ಪಾಂಡ್ಯ ಬಿ ಕುಲದೀಪ್ 4
ಕೋಲ್ಟರ್ ನೈಲ್ ಸಿ ಪಾಂಡೆ (ಬದಲಿ) ಬಿ ಭುವನೇಶ್ವರ್ 18
ಆ್ಯಂಡ್ರೂé ಟೈ ಔಟಾಗದೆ 12 ಇತರ 16
ಒಟ್ಟು (19 ಓವರ್‌ಗಳಲ್ಲಿ 7 ವಿಕೆಟಿಗೆ) 132
ವಿಕೆಟ್ ಪತನ: 1-1, 2-27, 3-35, 4-41, 5-62, 6-74, 7-101. ಬೌಲಿಂಗ್:
ಭುವನೇಶ್ವರ್ ಕುಮಾರ್ 3-0-20-2
ಖಲೀಲ್ ಅಹ್ಮದ್ 4-0-39-2
ಜಸ್‌ಪ್ರೀತ್ ಬುಮ್ರಾ 4-0-20-1
ಕುಲದೀಪ್ ಯಾದವ್ 4-0-23-1
ಕೃಣಾಲ್ ಪಾಂಡ್ಯ 4-0-20-1 3ನೇ ಪಂದ್ಯ: ರವಿವಾರ (ಸಿಡ್ನಿ)