Advertisement
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಸಂಜು ಸ್ಯಾಮ್ಸನ್ ಅವರನ್ನು ಬೇಗನೇ ಕಳೆದುಕೊಂಡರೂ ಅಭಿಷೇಕ್ ಶರ್ಮ ಮತ್ತು ತಿಲಕ್ ವರ್ಮ ತಂಡವನ್ನು ಆಧರಿಸಿದರು. ಅವರಿಬ್ಬರು ದ್ವಿತೀಯ ವಿಕೆಟಿಗೆ ತಾಳ್ಮೆಯ ಆಟವಾಡಿ ಕೇವಲ 8.4 ಓವರ್‌ಗಳಲ್ಲಿ 107 ರನ್ ಪೇರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು.
ವಿಕೆಟ್‌ನ ಒಂದು ಕಡೆ ತಿಲಕ್ ವರ್ಮ ಬಿರುಸಿನ ಆಟವಾಡಿದರೆ ಇನ್ನೊಂದು ಕಡೆ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಉತ್ತಮವಾಗಿ ಆಡಲು ವಿಫಲರಾದರು. ಇವರಿಬ್ಬರ ಪತನದ ಬಳಿಕ ತಿಲಕ್ ಸ್ಫೋಟಕವಾಗಿ ಆಡಿದರು. ರಿಂಕು ಜತೆ 5ನೇ ವಿಕೆಟಿಗೆ 58 ರನ್ ಪೇರಿಸಿದರು. ಇದರಲ್ಲಿ ರಿಂಕು ಪಾಲು 8 ರನ್ ಮಾತ್ರ. ರಿಂಕು ಔಟಾದ ಬಳಿಕವೂ ಬಿರುಸಿನ ಆಟವಾಡಿದ ತಿಲಕ್ ವರ್ಮ ಶತಕ ಪೂರ್ತಿಗೊಳಿಸಿ ಸಂಭ್ರಮಿಸಿದರು. ಇದು ಟಿ20ಯಲ್ಲಿ ಅವರ ಚೊಚ್ಚಲ ಶತಕವಾಗಿದೆ. ಭಾರತದ ಇನ್ನಿಂಗ್ಸ್ ಮುಗಿದಾಗ ತಿಲಕ್ 107 ರನ್ ಗಳಿಸಿ ಆಡುತ್ತಿದ್ದರು. 56 ಎಸೆತ ಎದುರಿಸಿದ ಅವರು 8 ಬೌಂಡರಿ ಮತ್ತು 7 ಸಿಕ್ಸರ್ ಬಾರಿಸಿದ್ದರು. ಸಂಕ್ಷಿಪ್ತ ಸ್ಕೋರು: ಭಾರತ ಆರು ವಿಕೆಟಿಗೆ 219 (ಅಭಿಷೇಕ್ ಶರ್ಮ 50, ತಿಲಕ್ ವರ್ಮ 107 ಔಟಾಗದೆ, ಆ್ಯಂಡಿಲ್ ಸಿಮೆಲೆನ್34ಕ್ಕೆ 2, ಕೇಶವ ಮಹಾರಾಜ್ 36ಕ್ಕೆ 2).