Advertisement

T20; ಬಾಂಗ್ಲಾದೇಶಕ್ಕೆ 10 ವಿಕೆಟ್‌ ಜಯ : ಸರಣಿ ಗೆದ್ದ ಅಮೆರಿಕ 

12:16 AM May 27, 2024 | Team Udayavani |

ಹ್ಯೂಸ್ಟನ್‌: ಅಮೆರಿಕ ವಿರುದ್ಧ ಸರಣಿ ಸೋತ ಬಳಿಕ ಲಯಕ್ಕೆ ಮರಳಿದ ಬಾಂಗ್ಲಾದೇಶ, 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ 10 ವಿಕೆಟ್‌ಗಳ ಸಮಾಧಾನಕರ ಗೆಲುವು ಸಾಧಿಸಿದೆ.

Advertisement

ಸರಣಿಯಲ್ಲಿ ಮೊದಲ ಸಲ ಬಾಂಗ್ಲಾ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ವಿಭಾಗಗಳೆ ರಡರಲ್ಲೂ ಮೇಲುಗೈ ಸಾಧಿಸಿತು. ಅಮೆರಿಕ 9 ವಿಕೆಟಿಗೆ ಕೇವಲ 104 ರನ್‌ ಮಾಡಿದರೆ, ಬಾಂಗ್ಲಾ 11.4 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 108 ರನ್‌ ಬಾರಿಸಿತು. ಅಮೆರಿಕದ ಸರಣಿ ಗೆಲುವಿನ ಅಂತರ 2-1ಕ್ಕೆ ಇಳಿಯಿತು.

ತಾಂಜಿದ್‌ ಹಸನ್‌ 58 ಮತ್ತು ಸೌಮ್ಯ ಸರ್ಕಾರ್‌ 43 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಮುಸ್ತಫಿಜುರ್‌ ರೆಹಮಾನ್‌ ಕೇವಲ 10 ರನ್ನಿಗೆ 6 ವಿಕೆಟ್‌ ಉಡಾಯಿಸಿ ಜೀವನಶ್ರೇಷ್ಠ ಸಾಧನೆಗೈದರು (4-1-10-6). ಇದು ಬಾಂಗ್ಲಾದ ಟಿ20 ಇತಿಹಾಸದ ಅತ್ಯುತ್ತಮ ಬೌಲಿಂಗ್‌ ಸಾಧನೆಯೂ ಆಗಿದೆ. 2012ರ ಐರ್ಲೆಂಡ್‌ ಎದುರಿನ ಪಂದ್ಯದಲ್ಲಿ ಇಲ್ಯಾಸ್‌ ಸನ್ನಿ 13ಕ್ಕೆ 5 ವಿಕೆಟ್‌ ಕೆಡವಿದ್ದು ಬಾಂಗ್ಲಾದ ಈವರೆಗಿನ ದಾಖಲೆ ಆಗಿತ್ತು.

ಅಮೆರಿಕ ಪರ ಆರಂಭಕಾರ ಆ್ಯಂಡ್ರೀಸ್‌ ಗೌಸ್‌ ಸರ್ವಾಧಿಕ 27 ರನ್‌ ಮಾಡಿದರು. ಮುಸ್ತಫಿಜುರ್‌ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಗಳೆರಡನ್ನೂ ತಮ್ಮದಾಗಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next