Advertisement
ಇಡೀ ತಾಲೂಕಿನ ಗ್ರಾ.ಪಂ.ಗಳ ಹೊಣೆಗಾರಿಕೆ ಇ.ಒ.ಗಳ ಮೇಲಿರುತ್ತದೆ. ಈ ಹುದ್ದೆಗಳು ಖಾಲಿ ಬಿದ್ದರೆ ಗ್ರಾಮೀಣ ಭಾಗದ ಅಭಿವೃದ್ಧಿಗೆ ತೊಡಕಾಗುವುದು ಸಹಜ. ಹೊಸ ತಾಲೂಕುಗಳಲ್ಲಿ ಇ.ಒ.ಗಳ ನೇಮಕ ಆಗಿಲ್ಲ; ಜತೆಗೆ ಇರುವ ಇ.ಒ. ಗಳನ್ನು ವರ್ಗಾವಣೆ ಮಾಡಿದ ಬಳಿಕ ಹೊಸ ನಿಯೋಜನೆ ಆಗಿಲ್ಲ. ಹೀಗಾಗಿ ಅವು ಗಳ ಜವಾಬ್ದಾರಿಯನ್ನೂ ಮತ್ತೂಬ್ಬರಿಗೆ ನೀಡ ಲಾಗುತ್ತಿದೆ.ಸಣ್ಣ ಹುದ್ದೆಗಳಾದರೆ 2-3 ಜವಾಬ್ದಾರಿಗಳನ್ನು ಒಬ್ಬರೇ ನಿರ್ವಹಿಸುವುದು ಕಷ್ಟವಲ್ಲ. ಆದರೆ ಒಂದು ತಾಲೂಕಿನ ಎಲ್ಲ ಗ್ರಾ.ಪಂ.ಗಳ ಮುಖ್ಯಸ್ಥನಂತಿರುವ ಇ.ಒ. ಮತ್ತೂಂದು ತಾಲೂಕಿನ ಅದೇ ಜವಾಬ್ದಾರಿ ಯನ್ನು ನಿರ್ವಹಿಸುವುದು ಸವಾಲು.
ಪ್ರಸ್ತುತ ದ.ಕ. ಜಿಲ್ಲೆಯಲ್ಲಿ ಬಂಟ್ವಾಳ ತಾ.ಪಂ. ನಿಂದ ಸುಳ್ಯಕ್ಕೆ ವರ್ಗಾವಣೆಗೊಂಡಿರುವ ಇ.ಒ. ಹಿಂದೆ ಬಂಟ್ವಾಳದ ಜತೆಗೆ ಉಳ್ಳಾಲ ತಾ.ಪಂ. ಜವಾ ಬ್ದಾರಿಯನ್ನೂ ಹೊಂದಿದ್ದರು. ಪ್ರಸ್ತುತ ಅವರು ವರ್ಗಾವಣೆಗೊಂಡ ಬಳಿಕ ಸುಳ್ಯ, ಬಂಟ್ವಾಳ, ಉಳ್ಳಾಲ -ಈ ಮೂರೂ ತಾ.ಪಂ.ಗಳ ಜವಾಬ್ದಾರಿ ಅವರ ಹೆಗಲ ಮೇಲಿದೆ. ಮೂಡುಬಿದಿರೆಯ ಇ.ಒ. ಹುದ್ದೆ ತೆರವಾದ ಬಳಿಕ ಬೆಳ್ತಂಗಡಿ ಇ.ಒ.ಗೆ ಹೆಚ್ಚುವರಿಯಾಗಿ ಈ ಜವಾಬ್ದಾರಿ ನೀಡಲಾಗಿದೆ. ಪುತ್ತೂರಿನ ಇ.ಒ. ಈ ಹಿಂದಿನಿಂದಲೂ ಕಡಬ ತಾ.ಪಂ. ಕೂಡ ನೋಡಿಕೊಳ್ಳುತ್ತಿದ್ದಾರೆ.
ಮೂಲ್ಕಿಯಲ್ಲಿ ಬೇರೆ ಇಲಾಖೆಯವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಉಡುಪಿ ಯಲ್ಲಿ ಕುಂದಾಪುರ ಹಾಗೂ ಬೈಂದೂರು ತಾ.ಪಂ.ಗಳನ್ನು ಒಬ್ಬರೇ ನೋಡಿಕೊಳ್ಳುತ್ತಿದ್ದು, ಉಡುಪಿ ಹಾಗೂ ಕಾಪು ತಾ.ಪಂ.ಗಳ ಜವಾಬ್ದಾರಿ ಒಬ್ಬರೇ ನಿರ್ವಹಿಸುತ್ತಿದ್ದಾರೆ. ಹಳ್ಳಿ ರಾಜಕೀಯ ನಿರ್ವಹಣೆ ಸವಾಲು
ಹಳ್ಳಿ ರಾಜಕೀಯದ ನಿರ್ವಹಣೆ ದೊಡ್ಡ ಸವಾ ಲಾಗಿದ್ದು, ಗ್ರಾ.ಪಂ.ಗಳಲ್ಲಿ ಒಂದಲ್ಲ ಒಂದು ಸಮಸ್ಯೆ ತಲೆದೋರುತ್ತಲೇ ಇರುತ್ತವೆ. ಪ್ರಸ್ತುತ ಬಹುತೇಕ ಎಲ್ಲ ಗ್ರಾ.ಪಂ.ಗಳ 2ನೇ ಅವಧಿಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದಿದ್ದು, ಪ್ರಾರಂಭದಲ್ಲಿ ಸಮಸ್ಯೆಗಳು ಹೆಚ್ಚಿರುತ್ತವೆ. ಇವೆಲ್ಲ ವನ್ನೂ ನಿರ್ವಹಿಸುವ ಜವಾಬ್ದಾರಿ ಇ.ಒ.ಗಳದ್ದು.
ದೊಡ್ಡ ತಾಲೂಕುಗಳಲ್ಲಿ ಗ್ರಾ.ಪಂ.ಗಳ ಸಂಖ್ಯೆಯೂ ಹೆಚ್ಚಿರುತ್ತದೆ. ಜತೆಗೆ ಒಂದಷ್ಟು ಇಲಾಖೆಗಳಿಗೆ ಕೆ2 ಮೂಲಕ ಅನುದಾನ, ವೇತನ ಪಾವತಿಯ ಜವಾಬ್ದಾರಿಯೂ ಇ.ಒ.ಗಳದ್ದಾಗಿದೆ. ಈ ನಡುವೆ ಇಡೀ ತಾಲೂಕನ್ನು ಸುತ್ತಬೇಕಿದೆ. ಹೀಗೆ ಒಂದು ತಾಲೂಕಿನಲ್ಲೇ ಹತ್ತಾರು ಜವಾಬ್ದಾರಿ ಗಳಿರುವಾಗ ಮತ್ತೂಂದು ತಾಲೂಕಿನ ನಿರ್ವಹಣೆ ಸವಾಲು.
Related Articles
ಡಾ| ಆನಂದ್ ಕೆ. ಮುಖ್ಯಕಾರ್ಯನಿರ್ವಹಣಾಧಿಕಾರಿ, ದ.ಕ. ಜಿ.ಪಂ.
Advertisement
ಕಿರಣ್ ಸರಪಾಡಿ