ಮೈಸೂರು : ತಿ ನರಸೀಪುರ ಬಳಿ ಕಾರು ಬಸ್ ನಡುವೆ ಭೀಕರ ರಸ್ತೆ ಅಪಘಾತ ಪ್ರಕರಣದ ಬಳಿಕ ಮೈಸೂರಿನ ಆಸ್ಪತ್ರೆಗೆ ಬಳ್ಳಾರಿ ಗ್ರಾಮಾಂತರ ಶಾಸಕ ಹಾಗು ಸಚಿವ ನಾಗೇಂದ್ರ ಅವರು ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಕುಟುಂಬಸ್ಥರ ಬಗ್ಗೆ ಮಾಹಿತಿ ನೀಡಿದ ಸಚಿವರು, ಮೃತಪಟ್ಟಿರುವ ಹತ್ತು ಜನರು ಒಂದೇ ಕುಟುಂಬದವರು.ಖಾನಾವಳಿಗಳಿಗೆ ರೊಟ್ಟಿ ಮಾಡಿಕೊಡುವುದು ಅವರ ವೃತ್ತಿ.ಮನೆಯವರೆಲ್ಲಾ ಸೇರಿ ರೊಟ್ಟಿ ಮಾರಿ ಜೀವನ ನಡೆಸುತ್ತಿದ್ದರು.ಎಲ್ಲರೂ ಲಿಂಗಾಯತ ಸಮುದಾಯದವರು.
ಚುನಾವಣೆಯಲ್ಲಿ ನನ್ನ ಪರವಾಗಿ ಈ ಕುಟಂಬದವರು ಕೆಲಸ ಮಾಡಿದ್ದರು.ನಾನು ಈ ಕುಟುಂಬವನ್ನು ಬಹಳ ಹತ್ತಿರದಿಂದ ಬಲ್ಲೆ.ಎಲ್ಲರಿಗೂ ಅನ್ನ ಹಾಕುತ್ತಿದ್ದವರೇ ಇಂದು ದುರ್ಮರಣಕ್ಕೆ ಒಳಗಾಗಿದ್ದಾರೆ.
ಇನ್ನೂ ಮೂವರ ಸ್ಥಿತಿ ಗಂಭೀರವಾಗಿದೆ.ಅದರಲ್ಲಿ ಒಂದು ಮಗುವಿನ ಸ್ಥಿತಿ ಮನಕಲುಕುತ್ತಿದೆ.ಗಾಯಾಳುವಾಗಿರುವ ಮಗು ತನ್ನ ತಂದೆಯನ್ನು ಕೇಳುತ್ತಿದೆ.ಇವರ ಜತೆಗೆ ಇದೇ ಕುಟುಂಬದ ಇನ್ನಷ್ಟು ಜನರು ಪ್ರವಾಸಕ್ಕೆ ಬರಬೇಕಿತ್ತು.ಅವರು ಕಾರಣಾಂತರದಿಂದ ಪ್ರವಾಸಕ್ಕೆ ಬಂದಿಲ್ಲ. ಈ ಸಾವು ನನಗೆ ವೈಯಕ್ತಿಕವಾಗಿ ಬಹಳ ನೋವು ಕೊಟ್ಟಿದೆ.ಅವರ ಅಂತ್ಯ ಸಂಸ್ಕಾರವನ್ನು ಅವರ ಊರಿನಲ್ಲಿ ಒಂದೇ ಕಡೆ ಮಾಡುತ್ತೇವೆ.ಅವರ ಮನೆಗಳಿಗೆ ಖುದ್ದು ಭೇಟಿ ಕೊಟ್ಟು ವೈಯಕ್ತಿಕವಾಗಿ ಪರಿಹಾರ ನೀಡುತ್ತೇನೆ ಎಂದು ಸಚಿವರು ತೀವ್ರ ನೋವು ಹೊರ ಹಾಕಿದರು.
ಬಳ್ಳಾರಿಯ ಬಿಳ್ಯಾಳ ಮಂಜುನಾಥ್(35) ಪತ್ನಿ ಪೂರ್ಣಿಮಾ(30) ಮಗ ಪವನ್ (10), ಕಾರ್ತಿಕ್ (08)ಸಂದೀಪ್( 24), ತಾಯಿ ಸುಜಾತ( 40), ತಂದೆ ಕೊಟ್ರೇಶ್( 45),ಜನಾರ್ದನ (40), ಪತ್ನಿ ಗಾಯತ್ರಿ(35), ಮಗ ಪುನೀತ್(04) , ಮಗಳು ಸ್ರಾವ್ಯ( 03)ಶಶಿಕುಮಾರ್(24 ) ಪ್ರವಾಸಕ್ಕೆ ಬಂದಿದ್ದರು.
ಖಾಸಗಿ ಬಸ್ ಹಾಗೂ ಇನ್ನೋವಾ ನಡುವೆ ನಡೆದ ರಣ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ 10 ಜನರು ನಜ್ಜುಗುಜ್ಜಾಗಿ ಸಾವನ್ನಪ್ಪಿದ್ದರು.