Advertisement

ಟಿ.ಎನ್. ಸೀತಾರಾಮ್ ಹೇಳಿದ ರಾಜ್ ಕುಮಾರ್ ಕಥೆ

02:35 PM May 31, 2019 | keerthan |

ಬೆಂಗಳೂರು: ಟಿ.ಎನ್. ಸೀತಾರಾಮ್ ಎಂದರೆ ಸಾಕು ವಿಭಿನ್ನ ಶೈಲಿಯ, ಗಟ್ಟಿ ಕಥಾ ಹಂದರದ ಧಾರವಾಹಿಗಳು, ಸಿನಿಮಾಗಳು ಕಣ್ಣ ಮುಂದೆ ಬರುತ್ತವೆ. “ಮಾಯಾಮೃಗ, ಮುಕ್ತ ಮುಕ್ತ” ಮತ್ತು ಈಗ ಪ್ರಸಾರವಾಗುತ್ತಿರುವ ‘ಮಗಳು ಜಾನಕಿ’ ಧಾರವಾಹಿಗಳಿಂದ ಸೀತಾರಾಮ್ ಮನೆ ಮಾತಾಗಿದ್ದಾರೆ.

Advertisement

ಟಿ.ಎನ್.ಸೀತಾರಮ್ ಅವರು ಗುರುವಾರ ತನ್ನ ಫೇಸ್ ಬುಕ್ ಖಾತೆಯಲ್ಲಿ ಕನ್ನಡದ ವರನಟ ಡಾ.ರಾಜ್ ಕುಮಾರ್ ಅವರ ಜೊತೆಗಿನ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ. ಟಿ.ಎನ್. ಸೀತಾರಾಮ್ ಅವರು ನೆನಪು ಮಾಡಿಕೊಂಡ ಆ ಕಥೆ ಯಥಾವತ್ತಾಗಿ ಇಲ್ಲಿದೆ ನೋಡಿ.

ಆ ದಿನಗಳಲ್ಲಿ ರಾಜಕುಮಾರ್ ರವರು ಕನ್ನಡದ ಮನಸ್ಸು ಗಳನ್ನು ಅಕ್ಷರಶಃ ಆಳುತ್ತಿದ್ದರು.. ನನಗೆ ಅವರನ್ನು ಮಾತನಾಡಿಸಿ ಸಾಧ್ಯ ವಾದರೆ ಅವರ ಜತೆ ಒಂದು photo ತೆಗೆಸಿಕೊಳ್ಳ ಬೇಕೆಂಬ ಆಸೆ ನನ್ನ ಹೈಸ್ಕೂಲ್ ದಿನಗಳಿಂದ ಇದ್ದು , ಆ ಆಸೆ ಈಡೇರದೆ ಕಮರಿ ಹೋಗಿತ್ತು..

ಆ ದಿನಗಳಲ್ಲಿ ನನ್ನ ಮಾಯಾಮೃಗ ಮುಗಿದಿತ್ತು..ನಾನು ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದೆ….ಆ ಅವಮಾನ ಕಾಡುತ್ತಿತ್ತು..

. ನಂತರ ಕೆಲವು ದಿನಕ್ಕೆ ಈಟಿವಿ ಶುರುವಾಯಿತು…. ಆ ಸಮಯದಲ್ಲಿ ಒಂದು ರಾತ್ರಿ 9 ಗಂಟೆ ಸಮಯದಲ್ಲಿ ಚೆನ್ನ phone ಮಾಡಿದರು.ಚೆನ್ನ ರಾಜ್ ಕುಮಾರ್ ರವರ ಅತ್ಯಂತ ಆತ್ಮೀಯ ವ್ಯಕ್ತಿ, ಸೆಕ್ರೆಟರಿ, ಎಲ್ಲಾ.. ನನಗೆ ಗೊತ್ತಿದ್ದ ಮನುಷ್ಯ..

Advertisement

“ಅಣ್ಣ ಇಲ್ಲೊಬ್ಬರು ನಿಮ್ಮ ಹತ್ತಿರ ಮಾತನಾಡಬೇಕಂತೆ” ಎಂದರು
“ಯಾರು” ಎಂದೆ.
ನೋಡಿದರೆ ಮಾತನಾಡುತ್ತಿದ್ದುದು ಸ್ವತಹ ರಾಜಕುಮಾರ್ ರವರು.
“ನಮಸ್ಕಾರ… …ನಿಮ್ಮ ಧಾರಾವಾಹಿಗಳ ಅಭಿಮಾನಿ…ನಿಮ್ಮ ಮಾಯಾಮೃಗವಂತೂ ನಾವು ಒಂದು ದಿನ ಬಿಟ್ಟಿಲ್ಲ…” ಎಂದು ಹೇಳುತ್ತಿದ್ದಂತೆ ನನ್ನ ಗಂಟಲು ಒಣಗಿ, ಎದೆ ಹೊಡೆದು ಕೊಳ್ಳಲು ಆರಂಭಿಸಿತು…
‘ಈಗ ನಾವು ನಮ್ಮ ಬ್ಯಾನರ್ ನ ಅಡಿಯಲ್ಲಿ ಒಂದು ಧಾರಾವಾಹಿ ಈಟಿವಿ ಗೆ ಮಾಡಬೇಕೆಂದು ತೀರ್ಮಾನವಾಗಿದೆ… ನಾಳೆ ಭಾನುವಾರ ಚಿತ್ರೀಕರಣ ಆರಂಭ…. ತಾವು ಮುಖ್ಯ ಅತಿಥಿಗಳಾಗಿ ಬಂದು ಕ್ಯಾಮರಾ ಆನ್ ಮಾಡಬೇಕು.” ಎಂದರು. ಅನಿರೀಕ್ಷಿತವಾಗಿ ಬಂದ ಈ ಸಂತೋಷದಿಂದಾಗಿ ನನಗೆ ಮಾತೇ ಹೊರಡಲಿಲ್ಲ. ಅದನ್ನು ಅವರು ತಪ್ಪು ತಿಳಿದರು.

” ನಿಮಗೆ ಅವತ್ತು ಬಿಡುವಿಲ್ಲ ಅಂದರೆ ಹೇಳಿ.ನಿಮಗೆ ಅನುಕೂಲವಾದ ದಿನಕ್ಕೆ ಚಿತ್ರೀಕರಣವನ್ನು ಮುಂದೂಡುತ್ತೇವೆ ” ಎಂದರು.ನನಗೆ ನಾಚಿಕೆ ಆಯಿತು.”ಇಲ್ಲ ಸಾರ್…( ಸಾರ್ ಅನ್ನಬೇಕೋ, ಅಣ್ಣಾವ್ರೇ ಅನ್ನಬೇಕೋ ಎಂಬ ಗೊಂದಲ)…ಬಿಡುವಾಗಿದ್ದೇನೆ ಬರುತ್ತೇನೆ” ಎಂದು ಹೇಳಿಬಿಟ್ಟೆ.ಅವತ್ತೆಲ್ಲ ನನಗೆ ಅನುಮಾನ.. ಬೇರೆಯವರಿಗೆ ಹೇಳಲುಹೋಗಿ ನನಗೆ ಹೇಳಿರಬಹುದೇ ಎಂದು.

ಭಾನುವಾರ ಗೀತಾ, ಅಶ್ವಿನಿ ಜತೆ ಹೋದೆ.ಅವರ ಮನೆಯ ಎಲ್ಲರೂ ಇದ್ದರು..ಅವರಂಥ ಸೌಜನ್ಯದ ಮೂರ್ತಿಯನ್ನು ನಾನು ನೋಡೇ ಇರಲಿಲ್ಲ..
ನಾನು ಹೋಗುವುದಕ್ಕೆ ಕಾಯುತ್ತಿದ್ದರು.ಹಾರ ಹಾಕಿದರು.ಅದೇ ಗೀತಾ ಕೈಲಿ ಚಿತ್ರದಲ್ಲಿ ಇರುವ ಹಾರ.

ನಾನು ಸೋತಿದ್ದರ ಅವಮಾನ ನಂತರ ಮಾಯವಾಯಿತು

Advertisement

Udayavani is now on Telegram. Click here to join our channel and stay updated with the latest news.

Next