Advertisement
ಉಡುಪಿ: ಮಾಧ್ಯಮ ಮತ್ತು ಮುದ್ರಣ ಕ್ಷೇತ್ರದಲ್ಲಿ ಮಣಿಪಾಲವನ್ನು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧವಾಗುವಂತೆ ಮಾಡಿದ ಟಿ. ಮೋಹನದಾಸ್ ಪೈ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಸೋಮವಾರ ಸಾರ್ವಜನಿಕರು ಪಡೆದರು.
Related Articles
Advertisement
ಅಂತಿಮ ದರ್ಶನ ಪಡೆದ ಗಣ್ಯರುಮೋಹನದಾಸ್ ಪೈ ಅವರ ಸಹೋದರಿಯರಾದ ಡಾ| ಇಂದುಮತಿ ಪೈ, ಡಾ| ಆಶಾ ಪೈ, ಮಣಿ ಪಾಲ ಮೀಡಿಯಾ ನೆಟ್‌ವರ್ಕ್ ಲಿ. ನ ಕಾರ್ಯ ನಿರ್ವಾಹಕ ಅಧ್ಯಕ್ಷ ಟಿ. ಸತೀಶ್ ಪೈ, ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಪೈ, ಮಣಿಪಾಲ್ ಟೆಕ್ನಾಲಜಿಸ್‌ನ ಕಾರ್ಯ ನಿರ್ವಾಹಕ ಅಧ್ಯಕ್ಷ ಗೌತಮ್ ಪೈ, ವನಿತಾ ಪೈ, ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ರಿಜಿಸ್ಟ್ರಾರ್ ಡಾ| ರಂಜನ್ ಪೈ, ಮಾಹೆ ವಿ.ವಿ. ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್, ರಿಜಿಸ್ಟ್ರಾರ್ ಡಾ| ನಾರಾಯಣ ಸಭಾಹಿತ್, ಮಣಿಪಾಲ್ ಮೀಡಿಯಾ ನೆಟ್ ವರ್ಕ್ ಲಿ. ನ ಸಿಇಒ ಮತ್ತು ಎಂಡಿ ವಿನೋದ್‌ಕುಮಾರ್, ಅಂಕಣಕಾರ ಬಿ. ಭಾಸ್ಕರ ರಾವ್, ಎಂಐಟಿ ನಿರ್ದೇಶಕ ಕ| ಡಾ| ಅನಿಲ್ ರಾಣಾ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಶಾರದಾ ರೆಸಿಡೆನ್ಶಿಯಲ್ ಶಾಲೆಯ ಹಿರಿಯ ಅಧಿಕಾರಿ ವಿದ್ಯಾವಂತ ಆಚಾರ್ಯ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಶಾಸಕ ಯು.ಆರ್. ಸಭಾಪತಿ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ. ರಾಘವೇಂದ್ರ ಕಿಣಿ, ವೈಕುಂಠ ಬಾಳಿಗ ಕಾನೂನು ಕಾಲೇಜಿನ ಪ್ರಾಂಶುಪಾಲೆ ಪ್ರೊ| ನಿರ್ಮಲಾ ಕುಮಾರಿ, ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ| ಜಗದೀಶ ಶೆಟ್ಟಿ, ಯುಪಿಎಂಸಿ ಪ್ರಾಂಶುಪಾಲ ಡಾ| ಮಧುಸೂದನ ಭಟ್, ಉದ್ಯಮಿಗಳಾದ ಜೆರ್ರಿ ವಿನ್ಸೆಂಟ್ ಡಯಾಸ್, ಜೇಸನ್ ಡಯಾಸ್, ಮನೋಹರ ಶೆಟ್ಟಿ, ಪುರು ಷೋತ್ತಮ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಕೊಡ ವೂರು ದಿವಾಕರ ಶೆಟ್ಟಿ, ಸೋನಿಯಾ ಕ್ಲಿನಿಕ್‌ನ ಡಾ| ಗೌರಿ, ಕವಿ ಮುದ್ದಣ ಸ್ಮಾರಕ ಮಿತ್ರ ಮಂಡಳಿ ಸ್ಥಾಪಕ ಗೌರವಾಧ್ಯಕ್ಷ ನಂದಳಿಕೆ ಬಾಲಚಂದ್ರ ರಾವ್, ದ.ಕ. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಪೈ ಸೇಲ್ಸ್‌ನ ಆಡಳಿತ ನಿರ್ದೇಶಕ ಟಿ. ಗಣಪತಿ ಪೈ, ಮೂಡುಬಿದಿರೆ ಮಹಾವೀರ ಕಾಲೇ ಜಿನ ಪ್ರಾಂಶುಪಾಲ ಪ್ರೊ| ರಾಧಾಕೃಷ್ಣ ಶೆಟ್ಟಿ, ಪಿಯು ಕಾಲೇಜಿನ ಪ್ರಾಂಶುಪಾಲ ರಮೇಶ್ ಭಟ್, ಎಂಜಿಎಂ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಜನತಾ ಪಬ್ಲಿಸಿಟಿಯ ಹರ್ಷರಾಜ್ ಶೆಟ್ಟಿ ಸಹಿತ ಹಲವು ಮಂದಿ ಗಣ್ಯರು ಅಂತಿಮ ದರ್ಶನ ಪಡೆದರು. ರಜೆ ಘೋಷಣೆ
ಡಾ| ಟಿಎಂಎ ಪೈ ಪ್ರತಿಷ್ಠಾನ ಹಾಗೂ ಅಕಾ ಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತ ಮಂಡಳಿಯ ಅಧೀನದ ಶಿಕ್ಷಣ ಸಂಸ್ಥೆಗಳಿಗೆ ಸೋಮವಾರ ರಜೆ ಘೋಷಿಸಲಾಗಿತ್ತು. ನುಡಿ ನಮನ
ಮಣಿಪಾಲ ಪೈ ಕುಟುಂಬದ ಹಿರಿಯರಾದ “ಉದಯವಾಣಿ’ ಸಂಸ್ಥಾಪಕ ಟಿ. ಮೋಹನದಾಸ್ ಪೈ ಅವರ ನಿಧನಕ್ಕೆ ಗಣ್ಯರು ಸಲ್ಲಿಸಿದ ನುಡಿನಮನ ಇಲ್ಲಿದೆ. ಉದಯವಾಣಿಗೆ
ರಾಷ್ಟ್ರ ಮಾನ್ಯತೆ ಒದಗಿಸಿದರು
ಕರಾವಳಿ ಕರ್ನಾಟಕದ ಪ್ರಮುಖ ಪತ್ರಿಕೆ ಉದಯವಾಣಿಯ ಸಂಸ್ಥಾಪಕ ರಾದ ಟಿ. ಮೋಹನದಾಸ್ ಪೈ ನಿಧನ ಹೊಂದಿದ ಸುದ್ದಿ ತಿಳಿದು ವಿಷಾದವಾಯಿತು. ಅವರ ದಕ್ಷ ನೇತೃತ್ವದಲ್ಲಿ ಉದಯವಾಣಿ ಇಂದು ರಾಷ್ಟ್ರಮಟ್ಟದಲ್ಲಿ ಓದುಗರ ಅತಿ ಮೆಚ್ಚಿನ ಪತ್ರಿಕೆಯಾಗಿ ಬೆಳಗುತ್ತಿದೆ. ಉತ್ತಮ ಮುದ್ರಣ ಮತ್ತು ವಿನ್ಯಾಸ, ಆಕರ್ಷಕ ಛಾಯಾಚಿತ್ರಗಳೊಂದಿಗೆ ಉದಯವಾಣಿ ಹಲವು ಬಾರಿ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಹಾಗೂ ಮಾನ್ಯತೆ ಪಡೆದಿರುವುದು ನಮಗೆಲ್ಲ ಅಭಿಮಾನದ ಸಂಗತಿ. ಪೈ ಅವರು ನಮ್ಮ ಕ್ಷೇತ್ರದ ಅಭಿಮಾನಿ ಭಕ್ತರಾಗಿದ್ದು ನಮ್ಮ ಎಲ್ಲ ಕಾರ್ಯಕ್ರಮಗಳಿಗೆ ಸದಾ ಉತ್ತಮ ಪ್ರೋತ್ಸಾಹ ಮತ್ತು ಸಹಕಾರ ನೀಡಿದವರು. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ. ಅವರ ಅಗಲುವಿಕೆಯಿಂದ ಕುಟುಂಬ ವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ, ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ.
– ಡಾ| ಡಿ. ವೀರೇಂದ್ರ ಹೆಗ್ಗಡೆ,
ಧರ್ಮಾಧಿಕಾರಿಗಳು, ಧರ್ಮಸ್ಥಳ ಧೀಮಂತ ವ್ಯಕ್ತಿತ್ವ
ಗ್ರಾಮೀಣ ಮಟ್ಟದಿಂದ ಒಂದು ಪತ್ರಿಕೆಯನ್ನು ಹುಟ್ಟುಹಾಕಿ ಪ್ರಾದೇ ಶಿಕವಾಗಿ ರಾಜ್ಯ ಮಟ್ಟದಲ್ಲಿ ಪತ್ರಿಕಾರಂ ಗವನ್ನು ಬೆಳೆಸಿದ ಮೇರು ವ್ಯಕ್ತಿ ಮೋಹನದಾಸ ಪೈಯವರು. ಇಂದಿನ ಪತ್ರಿಕಾ ಮಾಧ್ಯಮದಲ್ಲಿರುವ ಸಾವಿರಾರು ಪತ್ರ ಕರ್ತರಿಗೆ ಅವಕಾಶ ಕಲ್ಪಿಸಿದ ಧೀಮಂತರು. ಅವರ ಶ್ರೇಷ್ಠ ವ್ಯಕ್ತಿತ್ವ ಸಮಾಜಕ್ಕೆ ಬಹು ಅತ್ಯಾವಶ್ಯವಾಗಿತ್ತು. ಸಮಾಜದ ಎಲ್ಲ ಕ್ಷೇತ್ರದಲ್ಲೂ ತಮ್ಮ ಅನುಭವದ ಧಾರೆಯೆರೆದ ಅವರ ಅಗಲುವಿಕೆಯಿಂದ ತುಂಬಲಾರದ ನಷ್ಟವಾಗಿದೆ.
– ಹರೀಶ್ ಪೂಂಜ, ಶಾಸಕ ಬೆಳ್ತಂಗಡಿ ಜೀವನಾದರ್ಶ
ಮೋಹನದಾಸ್ ಪೈಯವರುಜೀವನದಲ್ಲಿ ವಿಶಿಷ್ಟ ನೀತಿ ನಿಯಮಗಳನ್ನು ಅಳವಡಿಸಿಕೊಂಡು ಸಂಸ್ಥೆಗಳನ್ನು ಕಟ್ಟಿದವರು. ಇವರ ಜೀವನಾದರ್ಶಗಳನ್ನು ಪಾಲಿಸಿಕೊಂಡು ಹೋಗುವುದೇ ನಿಜವಾದ ಶ್ರದ್ಧಾಂಜಲಿ
-ಕೆ. ರಘುಪತಿ ಭಟ್, ಶಾಸಕ, ಉಡುಪಿ ಸಮಾಜಮುಖಿ
ಉತ್ತಮ ಆಡಳಿತ ತಜ್ಞರಾಗಿ, ಪತ್ರಿಕೋದ್ಯಮಿಯಾಗಿ ಮೋಹನ ದಾಸ್ ಪೈ ಅವರು ಜನ ಮಾನಸದಲ್ಲಿ ಮಿನುಗಿದ್ದಾರೆ. ಅವರು ಸಮಾಜಮುಖೀ. ತಮ್ಮ ಕಾರ್ಯ ಮುಖೇನ ಸಮಾಜಕ್ಕೆ ಅಪಾರ ಕೊಡುಗೆ ನೀಡಿದವರು.
–ಡಾ| ಎಂ.ಎನ್.ರಾಜೇಂದ್ರ ಕುಮಾರ್,ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಅವರೇ ಸ್ಫೂರ್ತಿ, ಅವರೇ ದೀವಿಗೆ
ಚಿಕ್ಕಂದಿನಿಂದಲೇ ನನಗೆ ಅವರೊಂದಿಗೆ ಉತ್ತಮ ಒಡನಾಟವಿತ್ತು. ವಿದೇಶ ಪ್ರವಾಸ ಸಹಿತ ಪ್ರತಿಯೊಂದು ಕಡೆಗೆ ತೆರಳುವಾಗಲೂ ಒಟ್ಟೊಟ್ಟಿಗೆ ಹೋಗುತ್ತಿದ್ದೆವು. ಸಹೋದರನಿಗಿಂತ ಮಿಗಿಲಾಗಿ ನನ್ನನ್ನು ನೋಡಿಕೊಂಡಿದ್ದಾರೆ. ಅವರನ್ನು ಯಾವತ್ತೂ ಮರೆಯಲು ಅಸಾಧ್ಯ. ಉದಯವಾಣಿ ಪತ್ರಿಕೆ ಆರಂಭಿಸುವ ಸಂದರ್ಭ ಸಂಜೆ ಕಚೇರಿಗೆ ಹೋದರೆ ಮರುದಿನ ಬೆಳಗ್ಗೆ 11 ಗಂಟೆಗೆ ಮನೆಗೆ ಬರುತ್ತಿದ್ದೆವು. ಈ ಪ್ರಕ್ರಿಯೆ 10-12 ವರ್ಷಗಳ ಕಾಲವೂ ಮುಂದುವರಿದಿತ್ತು. ಪತ್ರಿಕೆ ಅವರಿಂದಲೇ ಹುಟ್ಟಿ ಬಂದಿರುವುದು. ಅವರು ತಮ್ಮ ಎಲ್ಲ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಅವರ ಸ್ಫೂರ್ತಿಯಿಂದಲೇ ಸಂಸ್ಥೆ ಇಂದಿಗೂ ಮುನ್ನಡೆಯುತ್ತಿದೆ.
-ಟಿ. ಸತೀಶ್ ಪೈ, ಕಾರ್ಯನಿರ್ವಾಹಕ ಅಧ್ಯಕ್ಷರು, ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿ. ಇಡೀ ಕುಟುಂಬಕ್ಕೆ ಅವರು ಆಧಾರ ಸ್ತಂಭ
ಪೈ ಕುಟುಂಬಸ್ಥರಿಗೆ ಆಧಾರ ಸ್ತಂಭವಾಗಿದ್ದವರು ಮೋಹನದಾಸ್ ಪೈಗಳು. ನಮ್ಮ ಕುಟುಂಬ ವನ್ನೆಲ್ಲ ಅವರೇ ಒಗ್ಗೂಡಿಸಿದ್ದರು. ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳಲ್ಲಿ ಕೈಜೋಡಿಸುತ್ತಿದ್ದರು. ಶೈಕ್ಷಣಿಕ, ಹಣಕಾಸು ಕ್ಷೇತ್ರದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಅವರು ನಮ್ಮೆಲ್ಲರ ಆಧಾರ ಸ್ತಂಭವಾಗಿದ್ದರು. ಶಾಲಾ ಅಭಿವೃದ್ಧಿಯ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಅವರು ಎಂಜಿಎಂ ಕಾಲೇಜು ಅಭಿವೃದ್ಧಿಗೂ ಅಪಾರವಾಗಿ ಶ್ರಮಿಸಿದ್ದರು. ಒಬ್ಬ ಧೀಮಂತ ವ್ಯಕ್ತಿ.
– ಟಿ. ನಾರಾಯಣ ಪೈ, ಉದ್ಯಮಿಗಳು, ಮಣಿಪಾಲ,
– ಟಿ. ಅಶೋಕ್ ಪೈ, ಕಾರ್ಯದರ್ಶಿ ಮತ್ತು ಕೋಶಾಧಿಕಾರಿ, ಡಾ| ಟಿಎಂಎ ಪೈ ಪ್ರತಿಷ್ಠಾನ, ಮಣಿಪಾಲ ಎಲ್ಲರಿಗೂ ಸದಾ ಮಾದರಿಯಾಗುವ ದಿವ್ಯ ವ್ಯಕ್ತಿತ್ವ
ಸರಳ ಸಜ್ಜನಿಕೆಯ ವ್ಯಕ್ತಿ. ಉತ್ತಮ ವಿಚಾರಧಾರೆ ಗಳನ್ನು ಹೊಂದಿದ್ದ ಅವರು ಎಲ್ಲರಿಗೂ ಮಾದರಿ. ಮಣಿಪಾಲ ಸಂಸ್ಥೆ ಇಷ್ಟೊಂದು ಉನ್ನತ ಮಟ್ಟಕ್ಕೆ ಏರಲು ಅವರು ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಅಗಲುವಿಕೆಯಿಂದ ತುಂಬಲಾರದ ನಷ್ಟವಾಗಿದೆ.
– ಟಿ. ಗೌತಮ್ ಪೈ (ಮಣಿಪಾಲ್ ಟೆಕ್ನಾಲಜೀಸ್ ಲಿ. ಕಾರ್ಯನಿರ್ವಾಹಕ ಅಧ್ಯಕ್ಷರು) ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿಯತ್ತ ವಿಶೇಷ ಒಲವು
ಹಲವು ವರ್ಷಗಳಿಂದ ಅವರನ್ನು ನೋಡುತ್ತಿ ದ್ದೇನೆ. ಎಂಜಿಎಂ ಕಾಲೇಜಿನ ಅಭಿವೃದ್ಧಿಗೆ ಬಹ ಳಷ್ಟು ಶ್ರಮಿಸಿದ್ದಾರೆ. ಜೀವನ ಪೂರ್ತಿ ಸಾಧನೆ ಮಾಡುವ ಹಂಬಲ ಅವರಲ್ಲಿತ್ತು; ಸಾಧಿಸಿದ್ದಾರೆ ಕೂಡ. ಕುಟುಂಬಸ್ಥರಿಗೂ ಶ್ರೀರಕ್ಷೆಯಾಗಿದ್ದರು. ಶೈಕ್ಷಣಿಕ, ಆರ್ಥಿಕ ಸಂಸ್ಥೆಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು.
– ಡಾ| ಎಚ್.ಎಸ್. ಬಲ್ಲಾಳ್,
ಸಹ ಕುಲಾಧಿಪತಿ, ಮಾಹೆ ವಿ.ವಿ. ಮಣಿಪಾಲ ಅವರೊಬ್ಬ ನಾಯಕರ ಮಹಾನಾಯಕ
ಉದಯವಾಣಿ ಹಾಗೂ ಮಣಿಪಾಲ ಪವರ್‌ಪ್ರಸ್ ಏಳಿಗೆಯಲ್ಲಿ ಟಿ. ಮೋಹನ ದಾಸ್ ಪೈ ಅವರ ಕೊಡುಗೆ ಅತ್ಯದ್ಭುತ. ನಾಯಕರ ಮಹಾ ನಾಯಕ ಅವರು. ಅವರ ತತ್ತಾ$Ìದರ್ಶಗಳನ್ನು ಜೀವನ ದಲ್ಲಿ ಅಳವಡಿಸಿಕೊಳ್ಳಬೇಕು. ಆ ಮೂಲಕ ಅವರನ್ನು ನಮ್ಮ ಮನದಲ್ಲಿ ಸದಾ ತುಂಬಿ ಕೊಳ್ಳಬೇಕು.
– ಡಾ| ಆಶಾ ಪೈ
(ಮೋಹನದಾಸ್ ಪೈಯವರ ಸಹೋದರಿ) ಒಬ್ಬ ಕ್ರಿಯಾಶೀಲ ಯಶಸ್ವಿ ಆಡಳಿತಗಾರ
ಆದರ್ಶ ಗುಣಗಳು ಹಾಗೂ ಉತ್ತಮ ಮೌಲ್ಯ ಹೊಂದಿದ್ದ ಯಶಸ್ವಿ ಆಡಳಿತಗಾರ. ಕುಟುಂಬಸ್ಥರನ್ನು ಒಗ್ಗೂಡಿಸಿ ಕ್ರಿಯಾಶೀಲ ರಾಗಿದ್ದವರು. ಪ್ರತೀ ವಿಷಯದಲ್ಲೂ ಸಕ್ರಿಯರಾಗಿ ದ್ದವರು. ಅವರ ಇಷ್ಟೊಂದು ಖ್ಯಾತಿಗೆ ಅವರ ಕ್ರಿಯಾಶೀಲ ಗುಣವೇ ಕಾರಣ.
– ಡಾ| ಇಂದುಮತಿ ಪೈ,
– ಡಾ| ಬಾಲಕೃಷ್ಣ ಪೈ
(ಮೋಹನದಾಸ್ ಪೈಯವರ ಸಹೋದರಿ)