Advertisement
ಎಂಜಿಎಂ ಕಾಲೇಜು ಟ್ರಸ್ಟ್ ಅಧ್ಯಕ್ಷ ಟಿ. ಸತೀಶ್ ಯು. ಪೈ, ಮಣಿಪಾಲ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಕುಲಸಚಿವ ಡಾ| ರಂಜನ್ ಆರ್. ಪೈ ಮೊದಲಾದವರು ಭೂಮಿಪೂಜೆ ನಡೆಸಿದರು. ಕಾಲೇಜು ಟ್ರಸ್ಟ್‌ನ ಟ್ರಸ್ಟಿ ಟಿ. ಅಶೋಕ್ ಪೈ, ಡಾ| ಟಿ.ಎಂ.ಎ. ಪೈಯವರ ಪುತ್ರಿ ಡಾ| ಆಶಾ ಪೈ, ಅಳಿಯ ಡಾ| ಕಮಲೇಶ ಪೈ, ಮಾಹೆ ವಿ.ವಿ. ಕುಲಪತಿ ಲೆ|ಜ| ಡಾ| ಎಂ.ಡಿ. ವೆಂಕಟೇಶ್, ಕುಲಸಚಿವ ಡಾ| ಗಿರಿಧರ ಕಿಣಿ, ಅಕಾಡೆಮಿ ಕಾರ್ಯದರ್ಶಿ ಬಿ.ಪಿ. ವರದರಾಯ ಪೈ, ಮಾಜಿ ಟ್ರಸ್ಟಿ ಪದ್ಮಾಕರ ನಾಯಕ್, ಕಾಲೇಜಿನ ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ, ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ|ದೇವಿದಾಸ ಎಸ್. ನಾಯ್ಕ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ| ಜಗದೀಶ ಶೆಟ್ಟಿ, ಬೋಧಕ, ಬೋಧಕೇತರ ಸಿಬಂದಿ ಉಪಸ್ಥಿತರಿದ್ದರು. ಕಂಪ್ಯೂಟರ್ ವಿಜ್ಞಾನ ವಿಭಾಗ ಮುಖ್ಯಸ್ಥ ಡಾ| ವಿಶ್ವನಾಥ ಪೈ ನಿರ್ವಹಿಸಿದರು.
ನೂತನ ಕಟ್ಟಡದಲ್ಲಿ ಮೋಹನ ದಾಸ್ ಪೈ ಕೌಶಲಾಭಿವೃದ್ಧಿ ಕೇಂದ್ರ, ಸ್ಮಾರ್ಟ್ ಕ್ಲಾಸ್‌ರೂಮ್‌ಗಳು, ಯೋಗ ಕೇಂದ್ರ, ಸಭಾಂಗಣವನ್ನು ನಿರ್ಮಿಸಲಾಗುತ್ತದೆ. ತಳ ಅಂತಸ್ತು ಮತ್ತು ಮೂರು ಮಹಡಿಗಳುಳ್ಳ ಕಟ್ಟಡ ಇದಾಗಿರುತ್ತದೆ. ತಲಾ ಸುಮಾರು 8 ಸಾವಿರ ಚದರಡಿ, ಒಟ್ಟು 32 ಸಾವಿರ ಚದರಡಿ ವಿಸ್ತೀರ್ಣದ ಕಟ್ಟಡ ಒಂದು ವರ್ಷದಲ್ಲಿ ನಿರ್ಮಾಣವಾಗಲಿದೆ.