Advertisement

T 20 WC; ಸೂಪರ್‌-8 ಗಡಿಯಲ್ಲಿ ಬಾಂಗ್ಲಾ: ನೇಪಾಲ ಕೊನೆಯ ಎದುರಾಳಿ

11:13 PM Jun 16, 2024 | Team Udayavani |

ಕಿಂಗ್ಸ್‌ಟೌನ್‌: ಟಿ20 ವಿಶ್ವಕಪ್‌ ಪಂದ್ಯಾವಳಿಯ ಸೂಪರ್‌-8 ಹಂತದ ಚಿತ್ರಣ ಒಂದು ಹಂತಕ್ಕೆ ಬಂದಿದೆ. ಆದರೆ “ಡಿ’ ವಿಭಾಗದಿಂದ 2ನೇ ತಂಡ ಯಾರು ಎಂಬುದು ಇನ್ನೂ ಇತ್ಯರ್ಥ ವಾಗಿಲ್ಲ. ಸೋಮವಾರದ ಪಂದ್ಯ ಗಳು ಈ ಕುತೂಹಲವನ್ನು ತಣಿಸಲಿವೆ.

Advertisement

“ಡಿ’ ವಿಭಾಗದಿಂದ ದಕ್ಷಿಣ ಆಫ್ರಿಕಾ ಈಗಾಗಲೇ ತೇರ್ಗಡೆಯಾಗಿದೆ. ನಾಲ್ಕನ್ನೂ ಗೆದ್ದ ಅಜೇಯ ಸಾಧನೆ ಹರಿಣ ಗಳದ್ದು. ಮೂರರಲ್ಲಿ 2 ಪಂದ್ಯ ಗೆದ್ದ ಬಾಂಗ್ಲಾದೇಶ ದ್ವಿತೀಯ ಸ್ಥಾನದಲ್ಲಿದೆ. ಸೋಮವಾರ ಅದು ನೇಪಾಲ ವಿರುದ್ಧ ಅಂತಿಮ ಲೀಗ್‌ ಪಂದ್ಯವಾಡಲಿದ್ದು, ಗೆದ್ದರೆ ದ್ವಿತೀಯ ಸ್ಥಾನದೊಂದಿಗೆ ಸೂಪರ್‌-8 ಹಂತಕ್ಕೆ ಏರಲಿದೆ.
ಒಂದು ಗಂಟೆ ಅಂತರದಲ್ಲಿ ಶ್ರೀಲಂಕಾ- ನೆದರ್ಲೆಂಡ್ಸ್‌ ಕೂಡ ಎದು ರಾಗಲಿವೆ. ಇಲ್ಲಿ ಲಂಕಾ ಹೊರಬಿದ್ದಾ ಗಿದೆ. ನೆದರ್ಲೆಂಡ್ಸ್‌ ಒಂದನ್ನಷ್ಟೇ ಜಯಿ ಸಿದ್ದು, 2 ಅಂಕ ಹೊಂದಿದೆ. ರನ್‌ರೇಟ್‌ ಮೈನಸ್‌ನಲ್ಲಿದೆ (-0.408). ಒಂದು ವೇಳೆ ನೇಪಾಲ ವಿರುದ್ಧ ಬಾಂಗ್ಲಾ ದೊಡ್ಡ ಸೋಲನುಭವಿಸಿದರೆ, ನೆದರ್ಲೆಂಡ್ಸ್‌ ಭಾರೀ ಅಂತರದಿಂದ ಲಂಕಾ ವಿರುದ್ಧ ಜಯ ಸಾಧಿಸಿದರೆ… ಎಂಬೆಲ್ಲ ಲೆಕ್ಕಾ ಚಾರವಿದೆ. ಈ ಪಂದ್ಯಾವಳಿ ಅನೇಕ ಅಚ್ಚರಿ ಹಾಗೂ ಏರುಪೇರಿಗೆ ಸಾಕ್ಷಿ ಯಾಗಿರುವ ಕಾರಣ ಏನೂ ಸಂಭವಿ ಸಬಹುದು ಎನ್ನಲಡ್ಡಿಯಿಲ್ಲ. ಆದರೆ ಈಗಿನ ಲೆಕ್ಕಾಚಾರದಂತೆ ಬಾಂಗ್ಲಾ ಮುನ್ನ ಡೆಯನ್ನು ತಡೆಯುವುದು ಅಸಾಧ್ಯ.

ಶ್ರೀಲಂಕಾ ವಿರುದ್ಧ ಲಭಿಸಿದ 2 ವಿಕೆಟ್‌ ಗೆಲುವಿನಿಂದಾಗಿ ಬಾಂಗ್ಲಾಕ್ಕೆ ಅದೃಷ್ಟ ಕೈಹಿಡಿಯಿತು. ಅನಂತರ ದಕ್ಷಿಣ ಆಫ್ರಿಕಾ ವಿರುದ್ಧ ಎಡವಿದರೆ, ನೆದರ್ಲೆಂಡ್ಸ್‌ಗೆ 25 ರನ್‌ ಸೋಲುಣಿಸಿತು.

ಇತ್ತ ನೇಪಾಲ ಮೂರರಲ್ಲಿ 2 ಸೋಲನುಭವಿಸಿದೆ. ಒಂದು ಪಂದ್ಯ ರದ್ದಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಐತಿಹಾಸಿಕ ಗೆಲುವು ಕೂದಲೆಳೆಯ ಅಂತರದಿಂದ ಕೈತಪ್ಪಿದೆ. ಅಂತರ ಕೇವಲ ಒಂದು ರನ್‌. ಬಾಂಗ್ಲಾವನ್ನು ಮಣಿಸಿದರೆ ಹಿಮಾಲಯದ ತಪ್ಪಲಿನ ದೇಶಕ್ಕೆ ದೊಡ್ಡದೊಂದು ಗೌರವ ಒಲಿಯುವುದರಲ್ಲಿ ಅನುಮಾನವಿಲ್ಲ. ಅದು ಸಣ್ಣ ಗೆಲುವಾದರೂ ಸಾಕು!

Advertisement

Udayavani is now on Telegram. Click here to join our channel and stay updated with the latest news.

Next