Advertisement

ಟಿ20ಗೆ ಮಳೆ: ಅಮೆರಿಕಕ್ಕೆ ನಿರಾಸೆ

12:30 AM Mar 16, 2019 | |

ದುಬಾೖ: ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯ ಆಡಲಿಳಿದ ಯುಎಸ್‌ಎ ತಂಡಕ್ಕೆ ತೀವ್ರ ನಿರಾಸೆಯಾಗಿದೆ. ಶುಕ್ರವಾರ ಇಲ್ಲಿ ನಡೆದ ಯುಎಇ ಎದುರಿನ ಪಂದ್ಯ ಮಳೆಯಿಂದ ರದ್ದುಗೊಂಡಿದೆ. ಸತತವಾಗಿ ಕಾಡಿದ ಮಳೆಯಿಂದ ಈ ಪಂದ್ಯವನ್ನು 15 ಓವರ್‌ಗಳಿಗೆ ಇಳಿಸ ಲಾಗಿತ್ತು. ಮೊದಲು ಬ್ಯಾಟಿಂಗ್‌ ನಡೆಸಿದ ಯುಎಸ್‌ಎ 7 ವಿಕೆಟಿಗೆ 152 ರನ್‌ ಗಳಿಸಿತು. ಚೇಸಿಂಗ್‌ ವೇಳೆ ಮತ್ತೆ ಮಳೆ ಕಾಡಿದ್ದರಿಂದ ಯುಎಇಗೆ 13 ಓವರ್‌ಗಳಲ್ಲಿ 143 ರನ್‌ ಗುರಿ ನೀಡಲಾಯಿತು. ಆದರೆ ಆತಿಥೇಯ ತಂಡ 3.3 ಓವರ್‌ಗಳಲ್ಲಿ 2 ವಿಕೆಟಿಗೆ 29 ರನ್‌ ಮಾಡಿದಾಗ ಮತ್ತೆ ಮಳೆ ಸುರಿದುದರಿಂದ ಪಂದ್ಯವನ್ನು ರದ್ದುಗೊಳಿಸಲಾಯಿತು. ಅಮೆರಿಕ ಪರ ವನ್‌ಡೌನ್‌ ಬ್ಯಾಟ್ಸ್‌ಮನ್‌ ಸ್ಟೀವನ್‌ ಟಯ್ಲರ್‌ 72 ರನ್‌ ಬಾರಿಸಿದರು (39 ಎಸೆತ, 9 ಬೌಂಡರಿ, 3 ಸಿಕ್ಸರ್‌). 
 

Advertisement
Advertisement

Udayavani is now on Telegram. Click here to join our channel and stay updated with the latest news.

Next