Advertisement

ಬಿಬಿಎಲ್‌ ಟಿ 20; ಅಂದು 15 ರನ್‌ ಗಳಿಗೆ ಆಲೌಟಾಗಿದ್ದ ತಂಡದಿಂದ ಈಗ 228 ರನ್‌!

10:43 PM Jan 01, 2023 | Team Udayavani |

ಅಲ್ಬರಿ (ಆಸ್ಟ್ರೇಲಿಯ): ಕ್ರಿಕೆಟ್‌ನಲ್ಲಿ ಯಾರ ಅದೃಷ್ಟ ಯಾವ ಸಮಯದಲ್ಲಿ ಬದಲಾಗುತ್ತದೋ ಹೇಳಲಾಗದು. ಇಂದು ಸಣ್ಣ ಮೊತ್ತಕ್ಕೆ ಕುಸಿಯುವ ತಂಡ ನಾಳೆ ಬೃಹತ್‌ ಸ್ಕೋರ್‌ ದಾಖಲಿಸಿ ಮೆರೆದಾಡಲೂಬಹುದು. ಇದಕ್ಕೊಂದು ತಾಜಾ ಉದಾಹರಣೆ, ಆಸ್ಟ್ರೇಲಿಯದ “ಬಿಗ್‌ ಬಾಶ್‌ ಲೀಗ್‌’ (ಬಿಬಿಎಲ್‌).

Advertisement

15 ದಿನಗಳ ಹಿಂದೆ ಅಡಿಲೇಡ್‌ ಸ್ಟ್ರೈಕರ್ ವಿರುದ್ಧ ಸಿಡ್ನಿ ಥಂಡರ್ ತಂಡ 15 ರನ್ನಿಗೆ ಆಲೌಟಾದದ್ದು ನೆನಪಿರಬಹುದು. ಈಗ ಇದೇ ಸಿಡ್ನಿ ತಂಡ ಹೋಬರ್ಟ್‌ ಹರಿಕೇನ್ಸ್‌ ವಿರುದ್ಧ 6 ವಿಕೆಟಿಗೆ 228 ರನ್‌ ರಾಶಿ ಹಾಕಿದೆ. ಇದು ಪ್ರಸಕ್ತ ಬಿಬಿಎಲ್‌ ಸರಣಿಯಲ್ಲಿ ತಂಡವೊಂದು ಗಳಿಸಿದ ಅತ್ಯಧಿಕ ಮೊತ್ತ. ಬಿಬಿಎಲ್‌ ಇತಿಹಾಸದ 3ನೇ ಅತ್ಯಧಿಕ ಮೊತ್ತದ ದಾಖಲೆಯೂ ಹೌದು. ಹೀಗೆ ಒಂದೇ ಬಿಬಿಎಲ್‌ ಋತುವಿನಲ್ಲಿ ತಂಡವೊಂದು ಕನಿಷ್ಠ ಹಾಗೂ ಗರಿಷ್ಠ ರನ್‌ ಪೇರಿಸಿದ ದಾಖಲೆ ಸಿಡ್ನಿ ಥಂಡರ್ ತಂಡದ್ದಾಯಿತು.

ಸಿಡ್ನಿ ಥಂಡರ್ ಪರ ಆರಂಭಕಾರ ಅಲೆಕ್ಸ್‌ ಹೇಲ್ಸ್‌ 77 ರನ್‌ (45 ಎಸೆತ, 5 ಬೌಂಡರಿ, 4 ಸಿಕ್ಸರ್‌), ಒಲಿವರ್‌ ಡೇವಿಸ್‌ 65 ರನ್‌ (32 ಎಸೆತ, 5 ಬೌಂಡರಿ, 5 ಸಿಕ್ಸರ್‌) ಬಾರಿಸಿದರು. ಜವಾಬಿತ್ತ ಹೋಬರ್ಟ್‌ ಹರಿಕೇನ್ಸ್‌ 17 ಓವರ್‌ಗಳಲ್ಲಿ 166ಕ್ಕೆ ಆಲೌಟ್‌ ಆಯಿತು. ಸಿಡ್ನಿ 62 ರನ್ನುಗಳಿಂದ ಗೆದ್ದು ಬಂದಿತು.

Advertisement

Udayavani is now on Telegram. Click here to join our channel and stay updated with the latest news.

Next