Advertisement

ಸಿರಪ್‌ನಿಂದಾಗಿ ಮಕ್ಕಳ ಸಾವು; ಪಾರದರ್ಶಕ ತನಿಖೆಯಾಗಲಿ

12:50 AM Oct 07, 2022 | Team Udayavani |

ಭಾರತದಲ್ಲಿ ತಯಾರಾದ ನಾಲ್ಕು ಕೆಮ್ಮು ಮತ್ತು ಶೀತದ ಸಿರಪ್‌ ಸೇವಿಸಿ ಗ್ಯಾಂಬಿಯಾ ದೇಶದಲ್ಲಿ 66 ಮಕ್ಕಳು ಸಾವನ್ನಪ್ಪಿರುವ ಘಟನೆ ವಿಷಾದ ನೀಯ. ಈ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆಯೇ ಮಾಹಿತಿ ನೀಡಿದ್ದು, ಈ ನಾಲ್ಕು ಸಿರಪ್‌ಗ್ಳನ್ನು ಉಪಯೋಗಿಸದಂತೆ ಮತ್ತು ವಾಪಸ್‌ ಪಡೆಯು ವಂತೆ ಎಲ್ಲ ದೇಶಗಳಿಗೆ ಸೂಚನೆ ನೀಡಿದೆ.

Advertisement

ಅತ್ತ ಈ ಬೆಳವಣಿಗೆಯಾಗುತ್ತಿರುವಂತೆ, ಭಾರತದಲ್ಲಿಯೂ ಔಷಧ ನಿಯಂ ತ್ರಣ ಪ್ರಾಧಿಕಾರ ಈ ನಾಲ್ಕು ಸಿರಪ್‌ಗ್ಳ ಕುರಿತಂತೆ ತನಿಖೆಗೆ ಆದೇಶ ನೀಡಿದೆ. ಅಲ್ಲದೆ ಭಾರತದಲ್ಲಿ ಈ ನಾಲ್ಕು ಸಿರಪ್‌ಗ್ಳನ್ನು ನೀಡು ತ್ತಿಲ್ಲ ಎಂದು ಮೈಡನ್‌ ಫಾರ್ಮಾಸುಟಿಕಲ್‌ ಸ್ಪಷ್ಟನೆ ನೀಡಿದೆ. ಈ ಎಲ್ಲ ಬೆಳವಣಿಗೆಗಳು ಆತಂಕದ ವಿಚಾರಗಳೇ. ಜೀವ ಉಳಿಸುವ ಔಷಧಗಳೇ ಜೀವ ತೆಗೆದರೆ ಅದಕ್ಕಿಂತ ದುರ್ದೈವ ಇನ್ನೊಂದಿಲ್ಲ. ಇಂಥ ಘಟನೆಗೆ ಕಾರಣ  ವಾದ ಯಾವುದೇ ಕಂಪೆನಿಯಾದರೂ ಸರಿಯೇ, ಅವುಗಳ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲೇಬೇಕು. ಇದರಲ್ಲಿ ಎರಡನೇ ಮಾತೇ ಇಲ್ಲ ಎಂಬುದು ಎಲ್ಲರ ಅಭಿಪ್ರಾಯ.

ಗ್ಯಾಂಬಿಯಾವು ವೆಸ್ಟ್‌ ಆಫ್ರಿಕಾಕ್ಕೆ ಸೇರಿದ ದೇಶವಾಗಿದ್ದು, ಇಲ್ಲಿಗೆ ಭಾರ ತದ ಮೈಡನ್‌ ಫಾರ್ಮಾಸುಟಿಕಲ್‌ನಿಂದ ಔಷಧಗಳನ್ನು ರಫ್ತು ಮಾಡ ಲಾಗುತ್ತಿದೆ. ಅಲ್ಲದೆ ಆಫ್ರಿಕಾದ ದೇಶಗಳಿಗೆ ಹೆಚ್ಚಾಗಿ ಭಾರತದಿಂದಲೇ ಔಷಧ ಹೋಗುತ್ತಿದೆ. ಹೀಗಾಗಿ ಈ ಪ್ರಕರಣದಿಂದಾಗಿ ಭಾರತದ ಔಷಧ ಮಾರು ಕಟ್ಟೆ ಮೇಲೆ ಗಂಭೀರವಾದ ನಕಾರಾತ್ಮಕ ಪರಿಣಾಮ ಬೀರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಮೊದಲೇ ಹೇಳಿದ ಹಾಗೆ, ಕೇಂದ್ರ ಸರಕಾರ ಮತ್ತು ಕ‌ಂಪೆನಿ ಇರುವ ಹರಿಯಾಣ ಸರಕಾರವು ಈ ಪ್ರಕರಣವನ್ನು ಗಂಭೀರವಾಗಿ ತೆಗೆದು ಕೊಂಡಿವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಪ್ರತ್ಯೇಕವಾಗಿ ತನಿಖೆಗೆ ಆದೇಶಿಸಿ, ಶೀಘ್ರದಲ್ಲೇ ವರದಿ ನೀಡುವಂತೆಯೂ ಸೂಚನೆ ನೀಡಿವೆ.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಈ ಕಫ‌ ಮತ್ತು ಶೀತದ ಸಿರಪ್‌ ಅನ್ನು ತೆಗೆದುಕೊಂಡ ಮಕ್ಕಳಲ್ಲಿ ತೀವ್ರತರನಾದ ಕಿಡ್ನಿ ಸಮಸ್ಯೆಗಳು ಕಂಡು ಬಂದಿದ್ದು, ಅನಂತರ ಮೃತಪಟ್ಟಿವೆ. ಜತೆಗೆ ಈ ಔಷಧಗಳಲ್ಲಿ ಡೈಯಟಿಲೇನ್‌ ಗ್ಲೆ„ಕೋಲ್‌ ಮತ್ತು ಎಥಿಲೇನ್‌ ಗ್ಲೆ„ಕೋಲ್‌ ಅಂಶ ಹೆಚ್ಚಾ ಗಿಯೇ ಇದೆ. ಇದರಿಂದಾಗಿಯೇ ಮಕ್ಕಳ ದೇಹದಲ್ಲಿ ವಿಷ ಪ್ರವೇಶಿಸಿ ದಂತಾಗಿ ಕಿಡ್ನಿ ವೈಪಲ್ಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

Advertisement

ಮೈಡೆನ್‌ ಸಂಸ್ಥೆಯನ್ನು 1990ರಲ್ಲಿ ಸ್ಥಾಪಿಸಲಾಗಿದ್ದು, ಇದು ಕೇವಲ ಗ್ಯಾಂಬಿಯಾ ದೇಶಕ್ಕೆ ಮಾತ್ರ ಔಷಧಗಳನ್ನು ಪೂರೈಸುತ್ತಿದೆ. ಹಾಗೆಯೇ ಈ ಎಲ್ಲ ಸಂಗತಿಗಳ ನಡುವೆ ಯೋಚನೆ ಮಾಡಬೇಕಾ  ದದ್ದು, ಈ ಪ್ರಕರಣದಲ್ಲಿ ಏನಾದರೂ ಸಂಚು ನಡೆದಿದೆಯೇ ಎಂಬುದು. ಸದ್ಯ ಇಡೀ ಜಗತ್ತಿಗೇ ಹೆಚ್ಚಿನ ಪ್ರಮಾಣದಲ್ಲಿ ಔಷಧ ರಫ್ತು ಮಾಡುತ್ತಿ ರು ವುದು ಭಾರತ. ಅಲ್ಲದೆ ಈ ವಿಚಾರದಲ್ಲಿ ಭಾರತ ಇನ್ನಿಲ್ಲದ ನಂಬಿಕೆಯನ್ನು ಉಳಿಸಿಕೊಂಡು ಬರುತ್ತಿದೆ. ಒಂದು ವೇಳೆ ಭಾರತದ ಹೆಸರನ್ನು ಹಾಳು ಮಾಡಿದರೆ ಔಷಧ ಮಾರುಕಟ್ಟೆ ಇನ್ನೊಂದು ದೇಶಕ್ಕೆ ಹೋಗಬಹುದು. ಜತೆಗೆ ಕೊರೊನಾ ಕಾಲದಲ್ಲಿಯೂ ಹೆಚ್ಚೆಚ್ಚು ಲಸಿಕೆಯನ್ನು ತಯಾರಿಸಿ, ಆಫ್ರಿಕಾ ದೇಶಗಳು ಸೇರಿದಂತೆ ತೃತೀಯ ಜಗತ್ತಿಗೆ ಹೆಚ್ಚಿನ ಪ್ರಮಾಣದ ಕಳುಹಿಸಲಾಗಿತ್ತು. ಇದಾದ ಮೇಲಂತೂ ಭಾರತದ ಹೆಸರು ಉಚ್ಛಾಯ ಸ್ಥಿತಿಗೆ ಬಂದಿತ್ತು. ಈಗ ಅಂತಾರಾಷ್ಟ್ರೀಯ ಮಟ್ಟದಲ್ಲೇನಾದರೂ ಸಂಚು ನಡೆಸಿ, ಭಾರತಕ್ಕೆ ಕಳಂಕ ತರುವ ಯತ್ನ ನಡೆಯುತ್ತಿದೆಯೇ ಎಂಬ ಪ್ರಶ್ನೆಗಳೂ ಉದ್ಭವಿಸಿವೆ. ಈ ಬಗ್ಗೆಯೂ ಸಮಗ್ರವಾದ ತನಿಖೆಯಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next