Advertisement

ಸಿರಿಯಾ ಯುದ್ಧಕ್ಕೆ 3.84 ಲಕ್ಷ ಮಂದಿ ಬಲಿ!

10:11 AM Mar 15, 2020 | sudhir |

ಬೈರೂತ್‌: ಸಿರಿಯಾದಲ್ಲಿ ಜಿಹಾದಿಗಳು, ಬಂಡುಕೋರರು ಮತ್ತು ವಿದೇಶಿ ಸೈನ್ಯಗಳ ನಡುವೆ 9 ವರ್ಷಗಳ ಕಾಲ ನಡೆದ ನಿರಂತರ ಯುದ್ಧದಲ್ಲಿ 3,84,000 ಮಂದಿ ಮೃತಪಟ್ಟಿದ್ದಾರೆ ಎಂದು ಸಿರಿಯಾದಲ್ಲಿರುವ ಯುದ್ಧ ಸಂಬಂಧಿ ಮಾನವ ಹಕ್ಕುಗಳ ವೀಕ್ಷಣಾ ಸಂಸ್ಥೆ ತಿಳಿಸಿದೆ. ಸಿರಿಯಾದಾದ್ಯಂತ ನಡೆಯುತ್ತಿದ್ದ ಶಾಂತಿಯುತ ಪ್ರಜಾಸತ್ತಾತ್ಮಕ ಪ್ರತಿಭಟನೆಗಳು ಯುದ್ಧ ರೂಪ ಪಡೆದಿದ್ದರಿಂದ ಇಡೀ ಸಿರಿಯಾ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತ್ತು. 2011ರಲ್ಲಿ ಆರಂಭವಾದ ಈ ಯುದ್ಧದಲ್ಲಿ ಮೃತಪಟ್ಟವರ ಪೈಕಿ 1,16,000 ಮಂದಿ ನಾಗರಿಕರಿದ್ದಾರೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next