Advertisement

ಸಿರಿಯಾ: ಭೀಕರ ವಿಷಾನಿಲ ದಾಳಿಗೆ 100 ಬಲಿ, ವಿಶ್ವ ನಾಯಕರ ಖಂಡನೆ

11:11 AM Apr 05, 2017 | Team Udayavani |

ಬೇರೂತ್‌ : ಸಿರಿಯದ ಇದ್ಲಿಬ್‌ ಪ್ರಾಂತ್ಯದ ಖಾನ್‌ ಶೈಖೌನ್‌ ಪ್ರದೇಶದಲ್ಲಿ ನಡೆದಿರುವ ಭೀಕರ ವಿಷಾನಿಲ ದಾಳಿಗೆ ನೂರು ಮಂದಿ ಬಲಿಯಾಗಿದ್ದಾರೆ. 

Advertisement

ಬಂಡುಕೋರರ ಹಿಡಿತದಲ್ಲಿರುವ ಸಿರಿಯಾದಲ್ಲಿ ನಿನ್ನೆ ಮಂಗಳವಾರ ವಿಷಾನಿಲ ದಾಳಿ ನಡೆದಿತ್ತು. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 58 ನಾಗರಿಕರು ಬಲಿಯಾಗಿದ್ದರು. ಇಂದು ಸಾವಿನ ಸಂಖ್ಯೆ 100ಕ್ಕೇರಿರುವುದಾಗಿ ಸಿರಿಯದ ಮಾನವ ಹಕ್ಕು ವಿಚಕ್ಷಣ ಸಂಸ್ಥೆಯು ತಿಳಿಸಿದೆ. 

ಸರಕಾರಿ ಸೇನೆಯ ಯುದ್ಧ ವಿಮಾನಗಳು ಈ ಶಂಕಿತ ವಿಷಾನಿಲ ದಾಳಿ ಮಾಡಿವೆ ಎಂದು ಹೇಳಲಾಗಿದೆ. ಆದರೆ ದಾಳಿ ನಡೆಸಿರುವುದು ರಶ್ಯದ ಮೈತ್ರಿಕೂಟದ ವಿಮಾನಗಳೇ ಅಥವಾ ಸಿರಿಯದ ವಿಮಾನಗಳೇ ಎಂಬುದು ಇನ್ನೂ ಖಚಿತವಾಗಿಲ್ಲ. ಈ ದಾಳಿಯಲ್ಲಿ ತನ್ನ ಕೈವಾಡವಿರುವ ಆರೋಪವನ್ನು ಸಿರಿಯ ಸರಕಾರ ಅಲ್ಲಗಳೆದಿದೆ. 

ಈ ವಿಷಾನಿಲ ದಾಳಿಯನ್ನು ಅಮೆರಿಕ, ಫ್ರಾನ್ಸ್‌, ಬ್ರಿಟನ್‌ ಸೇರಿದಂತೆ ವಿಶ್ವದ ಹಲವು ದೇಶಗಳ ನಾಯಕರು ಖಂಡಿಸಿದ್ದಾರೆ. ಇದೊಂದು ಹೇಯ ಕೃತ್ಯ ಎಂದು ಫ್ರಾನ್ಸ್‌ ವಿದೇಶಾಂಗ ಸಚಿವ ಜಿಯಾನ್‌ ಮಾರ್ಕ್‌ ಅರೌಲ್ಫ್ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next