Advertisement

ಭೀಕರ ಮಳೆಗೆ ತತ್ತರಿಸಿದ ಮಣಿಪುರ, ಮೇಘಾಲಯ

12:43 AM May 07, 2024 | Team Udayavani |

ಇಂಫಾಲ: ಮಣಿಪುರದಲ್ಲಿ ಭಾರೀ ಮಳೆ ಮುಂದುವರಿದಿದ್ದು, ಸರಕಾರ ಮಂಗಳವಾರವೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ರವಿವಾರ ಸುರಿದ ಆಲಿಕಲ್ಲು ಸಹಿತ ಮಳೆಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂ ಡಿದ್ದಾರೆ. ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು 15,000 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ಸಿಎಂ ಎನ್‌. ಬಿರೇನ್‌ ಸಿಂಗ್‌ ತಿಳಿಸಿದ್ದಾರೆ. ಇತ್ತ ಮೇಘಾಲಯದಲ್ಲೂ ಮಳೆಯಾಗುತ್ತಿದ್ದು ರವಿವಾರದ ಮಳೆಗೆ 7 ಜಿಲ್ಲೆಗಳಲ್ಲಿನ 29 ಹಳ್ಳಿಗಳಲ್ಲಿ 483ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ ಹಾಗೂ 949ಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next