Advertisement
ಗಾಂಧಿನಗರದ ಸಿಂಡಿಕೇಟ್ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಮಂಗಳವಾರ ಪ್ರಸಕ್ತ ಆರ್ಥಿಕ ವರ್ಷದ ಮೂರನೇ ತ್ತೈಮಾಸಿಕದ ಫಲಿತಾಂಶ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೃತ್ಯುಂಜಯ ಮಹಾಪಾತ್ರ, 2019-20ನೇ ಆರ್ಥಿಕ ವರ್ಷದ ಮೂರನೇ ತ್ತೈಮಾಸಿಕದ ಅಂತ್ಯಕ್ಕೆ ಸಿಂಡಿಕೇಟ್ ಬ್ಯಾಂಕ್ ಐದು ಲಕ್ಷ ಕೋಟಿ ರೂ. ವಹಿವಾಟು ನಡೆಸಿ ದಾಖಲೆ ಮಾಡಿದೆ ಎಂದರು.
Related Articles
Advertisement
ಒಟ್ಟು ವ್ಯವಹಾರ ಶೇ.7ರಷ್ಟು ಹೆಚ್ಚಳ: 2018ರ ಡಿಸೆಂಬರ್‌ನಲ್ಲಿ ರೂ. 4,67,911 ಕೋಟಿ ರೂ. ಇದ್ದ ವಹಿವಾಟು ಶೇ.7ರಷ್ಟು ಹೆಚ್ಚಳವಾಗಿ 5,00,971 ಕೋಟಿ ರೂ.ಗೆ ತಲುಪಿದೆ. ಈ ದಾಖಲೆಯ ವಹಿವಾಟಿಗೆ ಮೂರನೇ ತ್ತೈಮಾಸಿಕದಲ್ಲಿ ಠೇವಣಿ ಹೆಚ್ಚಳವು ಪ್ರಮುಖ ಕಾರಣವಾಗಿದೆ. ಚಿಲ್ಲರೆ ಮತ್ತು ಕೃಷಿ ಕ್ಷೇತ್ರದಲ್ಲಿ ಕ್ರಮವಾಗಿ ಶೇ.7 ಮತ್ತು ಶೇ.10ರಷ್ಟು ಬೆಳವಣಿಗೆ ಕಂಡು ಬಂದಿದೆ ಎಂದು ಹೇಳಿದರು.
ಗ್ರಾಹಕರ ಅನುಕೂಲವನ್ನು ಹೆಚ್ಚಿಸಲು ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್‌ನ ಪರಿಷ್ಕೃತ ಆವೃತ್ತಿಯಲ್ಲಿ ಬ್ಯಾಂಕ್ ಹಿಂದಿ, ಇಂಗ್ಲಿಷ್ ಭಾಷೆಗಳ ಜತೆಗೆ 9 ಪ್ರಾದೇಶಿಕ ಭಾಷೆಗಳನ್ನು ಸಕ್ರಿಯಗೊಳಿಸಿದೆ. ಆಕಸ್ಮಿಕ ಮರಣ ವಿಮೆ, ಮೈಕ್ರೋ ಲೈಫ್, ಇನುರೆನ್ಸ್ ಮತ್ತು ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗೆ ದಾಖಲಾತಿ, ನೆಫ್ಟ್, ಸಾಲ ಖಾತೆಗಳಿಗೆ ಬಡ್ಡಿ ಪ್ರಮಾಣ ಪತ್ರ ವಿತರಣೆ,
ಟಿಡಿಎಸ್, ಫಾರ್ಮ್ 16 ಪ್ರಮಾಣಪತ್ರ ವಿತರಣೆ ಮತ್ತು ಇತರ ಹಲವು ಸೌಲಭ್ಯಗಳನ್ನು ನೀಡಲಾಗಿದೆ. ಇನ್ನು ಬ್ಯಾಂಕ್ ವಿಲೀನ ಕುರಿತು ಗ್ರಾಹಕರಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‌ನ ಕಾರ್ಯ ನಿರ್ವಾಹಕ ನಿರ್ದೇಶಕರಾದ ಎಸ್.ಕೃಷ್ಣನ್, ಅಜಯ್ ಕೆ.ಕುರಾನಾ ಉಪಸ್ಥಿತರಿದ್ದರು.