Advertisement

ಸಿಂಡಿಕೇಟ್‌ ಬ್ಯಾಂಕ್‌ಗೆ 359 ಕೋಟಿ ನಿವ್ವಳ ಲಾಭ

10:30 AM May 11, 2017 | Team Udayavani |

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಸಿಂಡಿಕೇಟ್‌ ಬ್ಯಾಂಕ್‌ 2016-17ನೇ ಸಾಲಿನ ಹಣಕಾಸು ವರ್ಷಾಂತ್ಯಕ್ಕೆ 359 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಗೆ 1,643 ಕೋಟಿ ರೂ. ನಷ್ಟದಲ್ಲಿದ್ದ ಬ್ಯಾಂಕ್‌ ಸಾಲ ವಸೂಲಾತಿ ಹಾಗೂ ಇನ್ನಿತರ ಬದಲಾವಣೆಗಳನ್ನು ಚಾಲ್ತಿಗೆ ತಂದಿದ್ದರಿಂದ ಈ ಬಾರಿ ದಾಖಲೆ ಚೇತರಿಕೆ ಕಂಡುಕೊಂಡಿದೆ.

Advertisement

ಈ ವಿತ್ತ ವರ್ಷದ ನಾಲ್ಕನೇ ತ್ತೈಮಾಸಿಕದಲ್ಲಿ ಬ್ಯಾಂಕಿನ ಕಾಯಾಚರಣೆ ಲಾಭವು 1,514 ಕೋಟಿ ರೂ.ಗಳಾಗಿದ್ದು, ಇದು ಕಳೆದ ಸಾಲಿಗಿಂತ ಶೇ.53 ರಷ್ಟು ಹೆಚ್ಚಳ ಎನಿಸಿದೆ. ಬಡ್ಡಿ ಮೇಲಿನ ನಿವ್ವಳ ಆದಾಯದಲ್ಲೂ ಕೂಡ ಶೇ.34 ರಷ್ಟು ಹೆಚ್ಚಳವಾಗಿದ್ದರೆ, ಬಡ್ಡಿ ರಹಿತ ಆದಾಯ ವರ್ಷದಿಂದ ವರ್ಷಕ್ಕೆ ಶೇ.38 ರಷ್ಟು ಏರಿಕೆಯಾಗಿದೆ ಎಂದು ಬ್ಯಾಂಕಿನ ಕಾರ್ಪೋರೇಟ್‌ ಕಚೇರಿ ಪ್ರಕಟಣೆ ತಿಳಿಸಿದೆ.

4ನೇ ತ್ತೈಮಾಸಿಕದಲ್ಲಿ ಬ್ಯಾಂಕು ತೆರಿಗೆ ನಂತರ ವ್ಯವಹಾರಗಳಿಂದ 104 ಕೋಟಿ ರೂ. ನಿವ್ವಳ ಲಾಭ ಗಳಿಸಿದರೆ, 2017ರ ಮಾರ್ಚ್‌ ಅಂತ್ಯಕ್ಕೆ ಉಳಿತಾಯ ಖಾತೆಯಲ್ಲಿ ಹೂಡಿಕೆ ಕಳೆದ ಸಾಲಿಗಿಂತ ಶೇ.23 ರಷ್ಟು ವೃದ್ಧಿಯನ್ನು ಕಂಡುಕೊಂಡಿದೆ. ಸಿಆರ್‌ಎಆರ್‌ (ಬ್ರಸೆಲ್‌-3)ರಲ್ಲಿ ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ.11.16 ರಷ್ಟಿದ್ದರೆ ಈ ಸಾಲಿನಲ್ಲಿ ಶೇ.12.03 ಹೆಚ್ಚಳವಾಗಿದೆ. ಅದೇ ರೀತಿ ಆಸ್ತಿ ಆದಾಯ 2016-17ರಲ್ಲಿ ಶೇ.0.14, ಷೇರು ಆದಾಯ ಶೇ.3.34 ಗಳಿಸಿದೆ. ಕಳೆದ ಹಣಕಾಸು ವರ್ಷದ ನಾಲ್ಕನೇ ತ್ತೈಮಾಸಿಕದಲ್ಲಿ ನಿವ್ವಳ ಅನುತ್ಪಾದಕ ಆಸ್ತಿ (ಎನ್‌ಪಿಎ) ಶೇ.8.69 ಇದ್ದದ್ದು ಈ ಸಾಲಿನ ಶೇ.5.21ಕ್ಕೆ ಇಳಿಕೆಯಾಗಿರುವುದು ಬ್ಯಾಂಕಿನ ಅಭಿವೃದ್ಧಿಯನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next