Advertisement

ಸಿಂಡಿಕೇಟ್‌ ಬ್ಯಾಂಕ್‌ ಸ್ಥಾಪನಾ ದಿನ: ಸಾಧಕರಿಗೆ ಸಮ್ಮಾನ

12:36 PM Nov 01, 2018 | Team Udayavani |

ಉಡುಪಿ: ಸಿಂಡಿಕೇಟ್‌ ಬ್ಯಾಂಕ್‌ ಸ್ಥಾಪಕರಾದ ಡಾ|ಟಿಎಂಎ ಪೈ, ಉಪೇಂದ್ರ ಪೈ, ವಿ.ಎಸ್‌.ಕುಡ್ವ ಅವರ ಆದರ್ಶಗಳನ್ನು ಪಾಲಿಸಿಕೊಂಡು ಬರಬೇಕೆಂದು ಮಣಿಪಾಲದ ಸಿಂಡಿಕೇಟ್‌ ಬ್ಯಾಂಕ್‌ ಗೋಲ್ಡನ್‌ ಜುಬಿಲಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಿಂಡಿಕೇಟ್‌ ಬ್ಯಾಂಕ್‌ನ 93ನೆಯ ಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡ ಗಣ್ಯರು, ಸಾಧಕರು ಅಭಿಪ್ರಾಯಪಟ್ಟರು.

Advertisement

ಸ್ಥಾಪಕರ ಕುಟುಂಬದ ಸದಸ್ಯರಾದ ಟಿ.ಸತೀಶ್‌ ಯು. ಪೈ, ಟಿ. ನಾರಾಯಣ ಪೈ, ಟಿ.ಅಶೋಕ್‌ ಪೈ, ಗಾಯತ್ರಿ ಪೈ, , ವಸಂತಿ ಆರ್‌. ಶೆಣೈ, ವನಿತಾ ಜಿ. ಪೈ, ಬ್ಯಾಂಕ್‌ನ ಮಾಜಿ ಅಧ್ಯಕ್ಷ ಡಾ|ಎನ್‌.ಕೆ.ತಿಂಗಳಾಯ ಅವರನ್ನು ಸಮ್ಮಾನಿಸಲಾಯಿತು.  ಹಿರಿಯ ಗ್ರಾಹಕರಾದ ಡಾ|ಜಿ.ಎಸ್‌.ಚಂದ್ರಶೇಖರ್‌, ವಿಮಲಾ ಚಂದ್ರಶೇಖರ್‌, ಬ್ರಹ್ಮಾವರದ ಬಿ. ಗೋಕುಲದಾಸ ಪೈ, ಶ್ರೀಧರ ಹಂದೆ, ಕಾರ್ಕಳದ ಪ್ರೊ|ಎಂ. ರಾಮಚಂದ್ರ ದಂಪತಿ, ಮಂಜುನಾಥ ಮಲ್ಯರನ್ನು ಸಮ್ಮಾನಿಸಲಾಯಿತು.

ಡಾ|ಎನ್‌.ಕೆ.ತಿಂಗಳಾಯ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬ್ಯಾಂಕ್‌ನ ಮಹಾಪ್ರಬಂಧಕ ಭಾಸ್ಕರ ಹಂದೆ ಅಧ್ಯಕ್ಷತೆ ವಹಿಸಿದ್ದರು. ಡಿಜಿಎಂಗಳಾದ ಎಸ್‌.ಇ. ನಟರಾಜ್‌, ಡಾ| ಸ್ವಾಮಿನಾಥನ್‌, ಬಿ.ಆರ್‌.ಹಿರೇಮಠ್, ಪ್ರವೀಣ್‌ ಭಟ್‌, ಪ್ರಸಾದ್‌, ಕೆ.ಕಾಂತಕುಮಾರನ್‌, ಎಸ್‌. ಶಂಕರ್‌, ಶಿವದಾಸನ್‌ ಮತ್ತಿತರರು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ತಮ್ಮ ತಂದೆಯವರು ಮಣಿಪಾಲದ ಸಂಸ್ಥೆಗಳೊಂದಿಗೆ ಇದ್ದ ಸಂಬಂಧವನ್ನು ಸ್ಮರಿಸಿಕೊಂಡ ಗೋಕುಲದಾಸ ಪೈಯವರು, ಡಾ|ಟಿಎಂಎ ಪೈಯವರು ಮಣಿಪಾಲವನ್ನು ಬೆಳೆಸಿದ ಕ್ರಮದ ಬಗೆಯನ್ನು ವಿವರಿಸಿದರು. ತಮ್ಮ ತಂದೆಗೂ ಡಾ|ಪೈಯವರಿಗೂ ಆಗುತ್ತಿದ್ದ ಚರ್ಚೆಯನ್ನು ಅವರು ಉದಾಹರಿಸಿದರು. ಒಂದು ರೂ.ಗಳನ್ನು ಡಬ್ಬಿಗೆ ಹಾಕಿಟ್ಟರೆ ಹತ್ತು ವರ್ಷದ ಅನಂತರವೂ ಒಂದೇ ರೂ. ಇರುತ್ತದೆ. ಆದರೆ ಬ್ಯಾಂಕ್‌ ನಲ್ಲಿರಿಸಿದರೆ ಅದು ಹೆಚ್ಚಿಗೆಯಾಗುತ್ತದೆ. ಹೀಗಾಗಿ ಜನರು ಪಿಗ್ಮಿ ಠೇವಣಿಯನ್ನು ಆರಂಭಿಸಿ ಉಳಿತಾಯ ಮಾಡಬೇಕು ಎಂದು ಡಾ|ಪೈಯವರು ಕರೆ ನೀಡಿದ್ದರು ಎಂದು ಗೋಕುಲದಾಸ ಪೈಯವರು ಹೇಳಿದರು.

ನಿವೃತ್ತ ಪ್ರಾಧ್ಯಾಪಕ ಪ್ರೊ|ಎಂ.ರಾಮಚಂದ್ರ ಅವರು ಮಾತನಾಡಿ ತಾನು ಭುವನೇಂದ್ರ ಕಾಲೇಜಿಗೆ ಸೇರುವ ಕಾಲದಿಂದ ಹಿಡಿದು ಕೊನೆಯವರೆಗೂ ಡಾ|ಟಿಎಂಎ ಪೈಯವರೊಂದಿಗೆ ಇದ್ದ ಒಡನಾಟವನ್ನು ಸ್ಮರಿಸಿಕೊಂಡರು. ಅನಂತರವೂ ಮಣಿಪಾಲದ ಪೈ ಬಂಧುಗಳ ಜತೆಗೆ ಹೊಂದಿದ್ದ ಆತ್ಮೀಯ ಸಂಬಂಧವನ್ನು ಸ್ಮರಿಸಿ ಸಮ್ಮಾನಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ಗ್ರಾಹಕರಾದ ಡಾ|ಜಿ.ಎಸ್‌.ಚಂದ್ರಶೇಖರ್‌, ವಿಮಲಾ ಚಂದ್ರಶೇಖರ್‌, ಬ್ರಹ್ಮಾವರದ ಗೋಕುಲದಾಸ ಪೈ, ಶ್ರೀಧರ ಹಂದೆ, ಕಾರ್ಕಳದ ಪ್ರೊ|ಎಂ. ರಾಮಚಂದ್ರ ದಂಪತಿ, ಮಂಜುನಾಥ ಮಲ್ಯರನ್ನು ಸಮ್ಮಾನಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next