Advertisement

ದೇಶಕ್ಕೆ ಕಾಲಿಟ್ಟ ಕೊರೊನಾ: ಸೋಂಕಿನ ಲಕ್ಷಣಗಳೇನು? ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಏನು?

10:02 AM Mar 04, 2020 | keerthan |

ಮಣಿಪಾಲ: ಚೀನಾದಲ್ಲಿ ಆರಂಭವಾದ ಕೊರೊನಾ ವೈರಸ್ ವಿಶ್ವದೆಲ್ಲೆಡೆ ಹಬ್ಬಿದ್ದು, ಇದೀಗ ಭಾರತದಲ್ಲೂ ಸೋಂಕಿನ ಬಗ್ಗೆ ವರದಿಯಾಗಿದೆ. ಬೆಂಗಳೂರಿನಲ್ಲಿ ಎರಡು ದಿನ ಕಳೆದಿದ್ದು, ನಂತರ ತೆಲಂಗಾಣಕ್ಕೆ ತೆರಳಿದ್ದ ಟೆಕ್ಕಿಯೋರ್ವನಿಗೆ ಕೊರೊನಾ ವೈರಸ್ ಖಚಿತವಾಗಿದ್ದು, ಈ ಸಂಬಂಧ ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

Advertisement

ಮುಂಜಾಗ್ರತೆ ಇರಲಿ

ಕೊರೊನಾ ಬಗ್ಗೆ ಆತಂಕ ಬೇಡ. ಆದರೆ ರೋಗ ಲಕ್ಷಣಗಳ ಬಗ್ಗೆ ಜಾಗೃತರಾಗಿರಿ. ಯಾವುದೇ ಲಕ್ಷಣ ಕಂಡುಬಂದರೆ ಕೂಡಲೇ ನಿಮ್ಮ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಜತೆಗೆ ಜನ ಆರೋಗ್ಯ ಸಚಿವಾಲಯದ 24×7 ನಿಯಂತ್ರಣ ಕೊಠಡಿಗೆ ಕರೆ ಮಾಡಿ, ನಿಮ್ಮ ಸಂದೇಹ ನಿವಾರಿಸಿಕೊಳ್ಳಬಹುದು. ದೂರ ವಾಣಿ ಸಂಖ್ಯೆ: 011-23978046.

ಕೊರೊನಾ ಸೋಂಕಿನ ಲಕ್ಷಣಗಳೇನು?

ಸಣ್ಣ ಪ್ರಮಾಣದಲ್ಲಿ ಜ್ವರ ಮತ್ತು ಕೆಮ್ಮು. ಕೆಲವರಿಗೆ ಸುಸ್ತು, ತಲೆನೋವು, ಅತಿಸಾರ (ಭೇದಿ).

Advertisement

ಮುನ್ನೆಚ್ಚರಿಕೆ ಏನು?

– ಆಗಾಗ ಕೈಗಳನ್ನು ತೊಳೆದುಕೊಳ್ಳಿ.

– ಜ್ವರ ಪೀಡಿತರಿಂದ ಅಂತರ ಕಾಯ್ದುಕೊಳ್ಳಿ

– ಕಾಯಿಲೆ ಇದ್ದರೆ ಮನೆಯಲ್ಲೇ ಉಳಿಯಿರಿ

– ಸಣ್ಣಗೆ ಜ್ವರ, ಕೆಮ್ಮು ಇರುವವರು ಮಾಸ್ಕ್ ಬಳಸಿ.

– ಪದೇ ಪದೆ ಬಾಯಿ, ಮೂಗು, ಕಣ್ಣು ಮುಟ್ಟಿಕೊಳ್ಳಬೇಡಿ

– ಹಠಾತ್‌ ಆರೋಗ್ಯ ಏರುಪೇರಾದರೆ ಅಂಜದಿರಿ.

– ಸರಿಯಾಗಿ ಬೇಯಿಸಿ, ಸಿದ್ಧಪಡಿಸಿದ ಆಹಾರ ಸೇವಿಸಿ.

– ವಿಶೇಷವಾಗಿ ಸಿದ್ಧಪಡಿಸಲಾದ ಎನ್‌95 ಮಾಸ್ಕ್ಗಳನ್ನು ಬಳಸಬಹುದು

– ಪದೇ ಪದೆ ಬಳಕೆ ಮಾಡುವ ವಸ್ತುಗಳನ್ನು ಶುಚಿಗೊಳಿಸಿ ಬಳಸಿ.

 

ಲಸಿಕೆ ಸಿದ್ಧ

ವಿಶ್ವವನ್ನೇ ಕಂಗೆಡಿಸಿದ ಕೊರೊನಾ ವೈರಸ್‌ಗೆ ಲಸಿಕೆ ಕಂಡುಹಿಡಿಯಲಾಗಿದ್ದು, ಅದನ್ನು ಬಳಸಬಹುದು ಎಂದು ಅಮೆರಿಕದ ಬಯೋ ಟೆಕ್ನಾಲಜಿ ಸಂಸ್ಥೆ ಮೊಡೆರ್ನಾ (Moderna) ಹೇಳಿಕೊಂಡಿದೆ. ಅದಕ್ಕೆ ಎಂಆರ್‌ಎನ್‌ಎ-1273 (mRNA-1273 )ಎಂಬ ಹೆಸರಿಡಲಾಗಿದೆ. ಅದನ್ನು ಅಮೆರಿಕದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಅಲರ್ಜಿ ಆ್ಯಂಡ್‌ ಇನೆ#ಕ್ಷಿಯಸ್‌ ಡಿಸೀಸಸ್‌ಗೆ ಕಳುಹಿಸಿ ಕೊಡಲಾಗಿದೆ. ಮೊದಲ ಹಂತದಲ್ಲಿ ಆರೋಗ್ಯಯುತ ವ್ಯಕ್ತಿಗಳ ಮೇಲೆ ಪರೀಕ್ಷಾರ್ಥ ಪ್ರಯೋಗ ನಡೆಸಲಾಗುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಅದು ಯಶಸ್ವಿಯಾದರೆ ಮತ್ತಷ್ಟು ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next