Advertisement

ಏಳು ತಾಣಗಳಲ್ಲಿ ನಡೆಯಲಿದೆ ಮುಷ್ತಾಕ್‌ ಅಲಿ ಟ್ರೋಫಿ ಕ್ರಿಕೆಟ್‌ ಟೂರ್ನಿ

07:54 AM Dec 18, 2020 | keerthan |

ಮುಂಬಯಿ: ದೇಶಿ ಕ್ರಿಕೆಟ್‌ ಪಂದ್ಯಾವಳಿಯನ್ನು “ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಕೂಟ’ದ ಮೂಲಕ ಆರಂಭಿಸಲಿರುವ ಬಿಸಿಸಿಐ, ಗುರುವಾರ ಇದರ ವೇಳಾ ಪಟ್ಟಿಯನ್ನು ಪ್ರಕಟಿಸಿದೆ. ದೇಶದ ಒಟ್ಟು 7 ತಾಣಗಳಲ್ಲಿ ಪಂದ್ಯಗಳನ್ನು ಆಡಲಾಗುವುದು.

Advertisement

ಜ. 10ರಿಂದ ಮೊದಲ್ಗೊಳ್ಳುವ ಈ ಕೂಟದಲ್ಲಿ ಒಟ್ಟು 38 ತಂಡಗಳು ಪಾಲ್ಗೊಳ್ಳಲಿವೆ. 5 ಎಲೈಟ್‌ ವಿಭಾಗಗಳಲ್ಲಿ ತಲಾ 6 ತಂಡಗಳಿವೆ. ಪ್ಲೇಟ್‌ ವಿಭಾಗದಲ್ಲಿ 8 ತಂಡಗಳು ಸ್ಪರ್ಧಿಸಲಿವೆ. ಲೀಗ್‌ ಹಂತದ ಪಂದ್ಯಗಳನ್ನು ಬೆಂಗಳೂರು, ಕೋಲ್ಕತಾ, ವಡೋದರಾ, ಇಂದೋರ್‌, ಮುಂಬಯಿ ಮತ್ತು ಚೆನ್ನೈಯಲ್ಲಿ ಆಡಲಾಗುವುದು. ಜ. 26ರಿಂದ ಆರಂಭವಾಗಲಿರುವ ನಾಕೌಟ್‌ ಸುತ್ತಿನ ಸ್ಪರ್ಧೆಗಳ ಆತಿಥ್ಯ ಅಹ್ಮದಾಬಾದ್‌ನ ನೂತನ “ಸರ್ದಾರ್‌ ಪಟೇಲ್‌ ಸ್ಟೇಡಿಯಂ’ಗೆ ಲಭಿಸಿದೆ.

ಜ. 26 ಮತ್ತು 27ರಂದು ಕ್ವಾರ್ಟರ್‌ ಫೈನಲ್‌, ಜ. 29ರಂದು ಸೆಮಿಫೈನಲ್‌ ಮತ್ತು ಜ. 31ರಂದು ಫೈನಲ್‌ ಮುಖಾಮುಖೀ ಸಾಗಲಿದೆ. ಹಾಲಿ ಚಾಂಪಿಯನ್‌ ಕರ್ನಾಟಕ ಎಲೈಟ್‌ ಎ ವಿಭಾಗದಲ್ಲಿದ್ದು, ಇಲ್ಲಿನ ಪಂದ್ಯಗಳೆಲ್ಲ ಬೆಂಗಳೂರಿನಲ್ಲಿ ನಡೆಯಲಿವೆ.

3 ಕೋವಿಡ್‌ ಟೆಸ್ಟ್‌

ಆಟಗಾರರೆಲ್ಲ ಜ. ಎರಡರ ಒಳಗೆ ನಿಗದಿತ ಕೇಂದ್ರಗಳನ್ನು ತಲುಪಬೇಕಿದೆ. ಅಲ್ಲಿ 3 ಕೋವಿಡ್‌-19 ಟೆಸ್ಟ್‌ ನಡೆಸಲಾಗುವುದು (ಜ. 2, 4 ಮತ್ತು 6). ಬಳಿಕ ಆಯಾ ಪ್ರಾಂತ್ಯಗಳ ಕೋವಿಡ್‌ ನಿಯಮದಂತೆ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ ಎಂದು ಬಿಸಿಸಿಐ ತಿಳಿಸಿದೆ.

Advertisement

ಎಲೈಟ್‌ ಎ (ಕೇಂದ್ರ: ಬೆಂಗಳೂರು):ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್‌, ಉತ್ತರ ಪ್ರದೇಶ, ರೈಲ್ವೇಸ್‌, ತ್ರಿಪುರ.

ಎಲೈಟ್‌ ಬಿ (ಕೇಂದ್ರ: ಕೋಲ್ಕತಾ): ಒಡಿಶಾ, ಬಂಗಾಲ, ಜಾರ್ಖಂಡ್‌, ತಮಿಳುನಾಡು, ಅಸ್ಸಾಮ್‌, ಹೈದರಾಬಾದ್‌.

ಎಲೈಟ್‌ ಸಿ (ಕೇಂದ್ರ: ವಡೋದರಾ): ಗುಜರಾತ್‌, ಮಹಾರಾಷ್ಟ್ರ, ಚತ್ತೀಸ್‌ಗಢ, ಹಿಮಾಚಲಪ್ರದೇಶ, ಬರೋಡ, ಉತ್ತಾರಖಂಡ್‌.

ಎಲೈಟ್‌ ಡಿ (ಕೇಂದ್ರ: ಇಂದೋರ್‌): ಸರ್ವೀಸಸ್‌, ಸೌರಾಷ್ಟ್ರ, ವಿದರ್ಭ, ರಾಜಸ್ಥಾನ್‌, ಮಧ್ಯಪ್ರದೇಶ, ಗೋವಾ.

ಎಲೈಟ್‌ ಇ (ಕೇಂದ್ರ: ಮುಂಬಯಿ): ಹರ್ಯಾಣ, ಆಂಧ್ರಪ್ರದೇಶ, ದಿಲ್ಲಿ, ಮುಂಬಯಿ, ಕೇರಳ, ಪುದುಚೇರಿ.

ಪ್ಲೇಟ್‌ ಗ್ರೂಪ್‌ (ಕೇಂದ್ರ: ಚೆನ್ನೈ):ಚಂಡೀಗಢ, ಮೇಘಾಲಯ, ಬಿಹಾರ್‌, ನಾಗಾಲ್ಯಾಂಡ್‌, ಮಣಿಪುರ, ಮಿಝೋರಂ, ಸಿಕ್ಕಿಮ್‌, ಅರುಣಾಚಲಪ್ರದೇಶ

Advertisement

Udayavani is now on Telegram. Click here to join our channel and stay updated with the latest news.

Next