Advertisement

ಸಯ್ಯದ್‌ ಮುಷ್ತಾಕ್‌ ಅಲಿ ಕ್ರಿಕೆಟ್‌: ಕರ್ನಾಟಕ “ಡಬಲ್‌ ಹ್ಯಾಟ್ರಿಕ್‌’

12:30 AM Mar 01, 2019 | |

ಕಟಕ್‌: ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಕರ್ನಾಟಕ ಸತತ 6 ಪಂದ್ಯಗಳನ್ನು ಗೆದ್ದು “ಡಬಲ್‌ ಹ್ಯಾಟ್ರಿಕ್‌’ ಸಾಧಿಸಿದೆ. ಗುರುವಾರ ಒಡಿಶಾವನ್ನು 51 ರನ್ನುಗಳಿಂದ ಮಣಿಸುವ ಮೂಲಕ ಮನೀಷ್‌ ಪಾಂಡೆ ಪಡೆ ಈ ಪರಾಕ್ರಮ ಸಾಧಿಸಿತು.

Advertisement

“ಡಿ’ ವಿಭಾಗದ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಕರ್ನಾಟಕ 9 ವಿಕೆಟಿಗೆ 155 ರನ್‌ ಗಳಿಸಿದರೆ, ಒಡಿಶಾ 18.1 ಓವರ್‌ಗಳಲ್ಲಿ 104ಕ್ಕೆ ಆಲೌಟ್‌ ಆಯಿತು. ಇದರೊಂದಿಗೆ 24 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿತು.

ಕರ್ನಾಟಕ ಪರ ಆರಂಭಕಾರ ರೋಹನ್‌ ಕದಮ್‌ ಮತ್ತೂಮ್ಮೆ ಪ್ರಚಂಡ ಪ್ರದರ್ಶನ ನೀಡಿ 89 ರನ್‌ ಬಾರಿಸಿದರು. ಆದರೆ ಕದಮ್‌ ಹೊರತುಪಡಿಸಿದರೆ ಉಳಿದವರ್ಯಾರೂ ಕ್ರೀಸ್‌ ಆಕ್ರಮಿಸಿಕೊಳ್ಳಲು ಸಫ‌ಲರಾಗಲಿಲ್ಲ. 17 ರನ್‌ ಮಾಡಿದ ಶ್ರೇಯಸ್‌ ಗೋಪಾಲ್‌ ಅವರದೇ ಅನಂತರದ ಹೆಚ್ಚಿನ ಗಳಿಕೆ. ಎರಡಂಕೆಯ ಸ್ಕೋರ್‌ ದಾಖಲಿಸಿದ ಇತರ ಇಬ್ಬರೆಂದರೆ ಮಾಯಾಂಕ್‌ ಅಗರ್ವಾಲ್‌ ಮತ್ತು ಕರುಣ್‌ ನಾಯರ್‌. ಇಬ್ಬರ ಗಳಿಕೆತಯೂ ತಲಾ 10 ರನ್‌.

ಒಡಿಶಾ ಕುಸಿತ
ಆರಂಭದಿಂದಲೇ ಕರ್ನಾಟಕದ ಬೌಲಿಂಗ್‌ ಆಕ್ರಮಣಕ್ಕೆ ತತ್ತರಿಸಿದ ಒಡಿಶಾ 10ನೇ ಓವರ್‌ ವೇಳೆ 44ಕ್ಕೆ 6 ವಿಕೆಟ್‌ ಉದುರಿಸಿಕೊಂಡು ಸೋಲನ್ನು ಖಚಿತಗೊಳಿಸಿತು. ಆದರೆ 8ನೇ ಕ್ರಮಾಂಕದ ಆಟಗಾರ ಸೂರ್ಯಕಾಂತ್‌ ಪ್ರಧಾನ್‌ 32 ರನ್‌ ಮಾಡಿ ತಂಡದ ಮೊತ್ತವನ್ನು ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಕೆ.ಸಿ. ಕಾರ್ಯಪ್ಪ 4 ವಿಕೆಟ್‌, ವಿ. ಕೌಶಿಕ್‌ 3 ವಿಕೆಟ್‌ ಹಾಗೂ ಜಗದೀಶ್‌ ಸುಚಿತ್‌ 2 ವಿಕೆಟ್‌ ಹಾರಿಸಿ ಒಡಿಶಾಕ್ಕೆ ಕಡಿವಾಣ ಹಾಕಿದರು. ಕರ್ನಾಟಕ ತನ್ನ ಕೊನೆಯ ಪಂದ್ಯವನ್ನು ಮಾ. 2ರಂದು ಹರ್ಯಾಣವನ್ನು ಎದುರಿಸಲಿದೆ.

Advertisement

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ-9 ವಿಕೆಟಿಗೆ 155 (ಕದಮ್‌ 89, ಶ್ರೇಯಸ್‌ ಗೋಪಾಲ್‌ 17, ಬಿಪ್ಲಬ್‌ ಸಮಂತ್ರಾಯ್‌ 10ಕ್ಕೆ 2, ಪಪ್ಪು ರಾಯ್‌ 21ಕ್ಕೆ 2). ಒಡಿಶಾ-18.1 ಓವರ್‌ಗಳಲ್ಲಿ 104 (ಸೂರ್ಯಕಾಂತ್‌ 32, ಬೇಬಬೃತ್‌ 13, ಕಾರ್ಯಪ್ಪ 15ಕ್ಕೆ 4, ಕೌಶಿಕ್‌ 8ಕ್ಕೆ 3, ಸುಚಿತ್‌ 27ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next