Advertisement
ಅತ್ಯುತ್ತಮ ಫಾರ್ಮ್ ನಲ್ಲಿರುವ ಸೇನ್ ಒಂದು ದಿನದ ಹಿಂದಷ್ಟೇ “ಸ್ಕಾಟಿಷ್ ಓಪನ್’ ಕಿರೀಟ ಧರಿಸಿದ ಸಂಭ್ರಮದಲ್ಲಿದ್ದಾರೆ. ಋತುವಿನ 5ನೇ ಪ್ರಶಸ್ತಿಯ ಜತೆಗೆ 3ನೇ ಬಿಡಬ್ಲ್ಯುಎಫ್ ಚಾಂಪಿಯನ್ ಆಗುವ ಹಾದಿಯಲ್ಲಿದ್ದಾರೆ.
3 ಬಾರಿಯ ಚಾಂಪಿ ಯನ್ ಸೈನಾ ನೆಹ್ವಾಲ್ ಸೋಮವಾರ ಸಂಜೆ ದಿಢೀರನೇ ಹೊರಗುಳಿಯುವ ನಿರ್ಧಾರಕ್ಕೆ ಬಂದರು. ಪಿ.ವಿ. ಸಿಂಧು ಕೂಡ ಈ ಕೂಟದಲ್ಲಿ ಆಡುತ್ತಿಲ್ಲ.
ಮುಂದಿನ ಋತುವಿನ ಕೂಟ ಗಳಿಗೆ ಸಿದ್ಧತೆ ನಡೆಸುವ ಸಲುವಾಗಿ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ನಿಂದ (ಪಿಬಿಎಲ್) ಹೊರಗುಳಿ ಯಲು ನಿರ್ಧರಿಸಿರುವ ಸೈನಾ ನೆಹ್ವಾಲ್, ತವರಿನ ಕೂಟದಲ್ಲಿ ಮರಳಿ ಫಾರ್ಮ್ ಕಂಡುಕೊಳ್ಳುವ ಯೋಜನೆ ಹಾಕಿಕೊಂಡಿದ್ದರು. ಆದರೆ ಈ ಯೋಜನೆ ತಲೆ ಕೆಳಗಾಗಿದೆ. ಪುರುಷರ ವಿಭಾಗದ ಭರವಸೆ
ಪುರುಷರ ಸಿಂಗಲ್ಸ್‌ನಲ್ಲಿ 2016ರ ಚಾಂಪಿಯನ್ ಕೆ. ಶ್ರೀಕಾಂತ್, 2 ಬಾರಿಯ ವಿಜೇತ ಪಿ. ಕಶ್ಯಪ್ ಮೇಲೆ ಭರವಸೆ ಇಡಲಾಗಿದೆ. ಶ್ರೀಕಾಂತ್ ಮೊದಲ ಸುತ್ತಿನಲ್ಲಿ ರಶ್ಯದ ವ್ಲಾದಿಮಿರ್ ಮಾಲ್ಕೋವ್ ಅವರನ್ನು ಎದುರಿಸಲಿದ್ದಾರೆ. ಕಶ್ಯಪ್ ಅವರ ಎದುರಾಳಿ ಫ್ರಾನ್ಸ್‌ನ ಲುಕಾಸ್ ಕೊರ್ವೀ.
Related Articles
Advertisement
ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ, ಬಿ. ಸುಮೀತ್ ರೆಡ್ಡಿ-ಮನು ಅತ್ರಿ; ಮಿಶ್ರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್-ಅಶ್ವಿನಿ ಪೊನ್ನಪ್ಪ, ಧ್ರುವ ಕಪಿಲ-ಮೇಘನಾ ಜಕ್ಕಂಪುಡಿ, ಪ್ರಣವ್ ಜೆರ್ರಿ ಚೋಪ್ರಾ-ಎನ್. ಸಿಕ್ಕಿ ರೆಡ್ಡಿ; ವನಿತಾ ಡಬಲ್ಸ್ ನಲ್ಲಿ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ಕಣಕ್ಕಿಳಿಯಲಿದ್ದಾರೆ.