Advertisement

ಆಸ್ಟ್ರೇಲಿಯ-ದಕ್ಷಿಣ ಆಫ್ರಿಕಾ: ನ್ಯೂ ಇಯರ್‌ ಟೆಸ್ಟ್‌; ಮೂರನೇ ದಿನದಾಟ ರದ್ದು

11:30 PM Jan 06, 2023 | Team Udayavani |

ಸಿಡ್ನಿ: ಆಸ್ಟ್ರೇಲಿಯ-ದಕ್ಷಿಣ ಆಫ್ರಿಕಾ ನಡುವಿನ ನ್ಯೂ ಇಯರ್‌ ಟೆಸ್ಟ್‌ ಪಂದ್ಯ ನಿರಂತರವಾಗಿ ಮಳೆ ಕಾಟಕ್ಕೆ ಸಿಲುಕಿದೆ.

Advertisement

ಹೀಗಾಗಿ 3ನೇ ದಿನದಾಟ ಒಂದೂ ಎಸೆತ ಕಾಣದೆ ರದ್ದುಗೊಂಡಿತು. ಮೊದಲೆರಡು ದಿನಗಳ ಆಟಕ್ಕೂ ಮಳೆಯಿಂದ ಅಡಚಣೆ ಆಗಿತ್ತು. ಈವರೆಗೆ ಸಾಗಿದ್ದು 131 ಓವರ್‌ಗಳ ಆಟ ಮಾತ್ರ. ಮೊದಲು ಬ್ಯಾಟಿಂಗ್‌ ನಡೆಸುತ್ತಿರುವ ಆಸ್ಟ್ರೇಲಿಯ 4 ವಿಕೆಟ್‌ ನಷ್ಟಕ್ಕೆ 475 ರನ್‌ ಗಳಿಸಿದೆ. ಉಸ್ಮಾನ್‌ ಖ್ವಾಜಾ 195 ರನ್‌ ಮಾಡಿ, ದ್ವಿಶತಕದ ಗಡಿಯಲ್ಲಿ ನಿಂತಿದ್ದಾರೆ.

ಇವರೊಂದಿಗೆ 5 ರನ್‌ ಗಳಿಸಿರುವ ಮ್ಯಾಥ್ಯೂ ರೆನ್‌ಶಾ ಕ್ರೀಸ್‌ನಲ್ಲಿದ್ದಾರೆ. 104 ರನ್‌ ಹೊಡೆದ ಸ್ಟೀವನ್‌ ಸ್ಮಿತ್‌ ಮತ್ತೋರ್ವ ಶತಕವೀರ. ಮೊದಲೆರಡು ಟೆಸ್ಟ್‌ ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯ 2-0 ಮುನ್ನಡೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next