Advertisement

Arrested: ಮಹಿಳೆಗೆ ಲೈಂಗಿಕ ದೌರ್ಜನ್ಯ; ಪಬ್ಲಿಕ್‌ ಪಾಸಿಕ್ಯೂಟರ್‌ ಸೆರೆ

11:39 AM May 11, 2024 | Team Udayavani |

ಬೆಂಗಳೂರು: ಪ್ರಕರಣವೊಂದರ ಆದೇಶ ಪ್ರತಿ ಕೊಡುವುದಾಗಿ ಕಕ್ಷಿದಾರ ಮಹಿಳೆಗೆ ಲೈಂಗಿಕ ಕಿರುಕುಳ ಕೊಟ್ಟಿರುವ ಆರೋಪದಡಿ ಸರ್ಕಾರಿ ಅಭಿಯೋಜಕನನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಶ್ರೀರಾಮ್‌ ಬಂಧಿತ ಆರೋಪಿ.

Advertisement

ದೂರುದಾರ ಮಹಿಳೆ ನೀಡಿದ್ದ ಪ್ರಕರಣವೊಂದರಲ್ಲಿ ಆರೋಪಿಗಳಿಗೆ ಜಾಮೀನು ಸಿಕ್ಕಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಆ ಮಹಿಳೆ ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸಲು ಆದೇಶ ಪ್ರತಿಯನ್ನು ಶ್ರೀರಾಮ್‌ ಬಳಿ ಕೇಳಿದ್ದಳು. ಮೆಜೆಸ್ಟಿಕ್‌ ಬಳಿ ಇರುವ ಹೋಟೆಲ್‌ ಸಮೀಪ ಪ್ರಾಸಿಕ್ಯೂಟರ್‌ ಆದೇಶ ಪ್ರತಿ ಕೊಡುವುದಾಗಿ ಹೇಳಿದ್ದ ಎನ್ನಲಾಗಿದೆ. ಮಹಿಳೆ ಆತ ಹೇಳಿದ ಜಾಗಕ್ಕೆ ಹೋದಾಗ, ಆತ ಕಾಟನ್‌ಪೇಟೆ ಲಾಡ್ಜ್ವೊಂದಕ್ಕೆ ಬರುವಂತೆ ಸೂಚಿಸಿದ್ದ. ಅಲ್ಲಿಗೆ ಮಹಿಳೆ ತೆರಳಿದಾಗ ಆತ ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾಗಿದೆ.

ಪಬ್ಲಿಕ್‌ ಪ್ರಾಸಿಕ್ಯೂಟರ್‌ ವರ್ತನೆಗೆ ಪ್ರತಿರೋಧ ತೋರಿದ ಮಹಿಳೆಯು ಕೂಡಲೇ ಪತಿಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದಳು. ಈ ವೇಳೆ ಮಹಿಳೆಯ ಪತಿ ಹಾಗೂ ಸ್ನೇಹಿತರು ಅಲ್ಲಿಗೆ ಬಂದು ಶ್ರೀರಾಮ್‌ನನ್ನು ಕಾಟನ್‌ಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾಟನ್‌ ಪೇಟೆ ಪೊಲೀಸರು ಆರೋಪಿ ಶ್ರೀರಾಮ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next