Advertisement

ನೂತನ ಮೇಲ್ಮನೆ ಸದಸ್ಯರಿಂದ ಪ್ರಮಾಣವಚನ ಸ್ವೀಕಾರ

06:05 AM Jun 19, 2018 | |

‌ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ನೂತನ ಸದಸ್ಯರು ಸೋಮವಾರ
ಅಧಿಕಾರ ಹಾಗೂ ಗೌಪ್ಯತೆಯ ಪ್ರತಿಜ್ಞಾವಿಧಿ ಸ್ವೀಕರಿಸಿದರು.

Advertisement

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌.ಶಂಕರ ಮೂರ್ತಿಯವರು ನೂತನ ಸದಸ್ಯರಿಗೆ ಪ್ರಮಾಣವಚನಬೋಧಿಸಿದರು.

ಕಾಂಗ್ರೆಸ್‌ನ ಸಿ.ಎಂ.ಇಬ್ರಾಹಿಂ, ಕೆ.ಗೋವಿಂದರಾಜ್‌, ಅರವಿಂದ ಕುಮಾರ್‌ ಅರಳಿ, ಕೆ.ಹರೀಶ್‌, ಬಿಜೆಪಿಯ
ಡಾ.ತೇಜಸ್ವಿನಿಗೌಡ, ಕೆ.ಪಿ.ನಂಜುಂಡಿ, ರಘುನಾಥ್‌ರಾವ್‌ ಮಲ್ಕಾಪುರೆ, ಎನ್‌.ರವಿ ಕುಮಾರ್‌, ಎಸ್‌. ರುದ್ರೇಗೌಡ
ಹಾಗೂ ಜೆಡಿಎಸ್‌ನ ಬಿ.ಎಂ. ಫಾರುಕ್‌, ಎಸ್‌.ಎಲ್‌ ಧರ್ಮೇಗೌಡ ಅವರು ವಿಧಾನ ಪರಿಷತ್‌ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಬಿಜೆಪಿಯ ಎನ್‌. ರವಿಕುಮಾರ್‌ ಅವರು ಭಾರತಮಾತೆಯ ಹೆಸರಿನಲ್ಲಿ,ಜೆಡಿಎಸ್‌ನ ಬಿ.ಎಂ.ಫಾರೂಕ್‌ ಅಲ್ಲಾನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಉಳಿದ ಸದಸ್ಯರು ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಜೂನ್‌ 17ಕ್ಕೆ ನಿವೃತ್ತಿ ಹೊಂದಿದ ಎಂ. ಆರ್‌.ಸೀತಾರಾಂ, ಮೋಟಮ್ಮ, ಡಿ.ಎಸ್‌.ವೀರಯ್ಯ, ಭಾನು ಪ್ರಕಾಶ್‌ ಮತ್ತು ಬಿ.ಜೆ.ಪುಟ್ಟ ಸ್ವಾಮಿಗೆ ಬೀಳ್ಕೊಡ ಲಾಯಿತು.

ಡಿಸಿಎಂ ಡಾ.ಜಿ. ಪರಮೇಶ್ವರ್‌, ಸಚಿವರಾದ ಕೃಷ್ಣಬೈರೇ ಗೌಡ, ಜಯಮಾಲಾ, ಪ್ರತಿಪಕ್ಷದ ನಾಯಕ ಯಡಿಯೂರಪ್ಪ
ಉಪಸ್ಥಿತರಿದ್ದರು. ಜೂ.21ರಂದು ರಾಮಚಂದ್ರಗೌಡ, ಅಮರನಾಥ ಪಾಟೀಲ್‌, ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌, ರಮೇಶ್‌ ಬಾಬು, ಡಿ.ಎಚ್‌.ಶಂಕರಮೂರ್ತಿ, ಮರಿತಿಬ್ಬೇಗೌಡ ನಿವೃತ್ತಿ ಹೊಂದಲಿದ್ದಾರೆ. ಈ ಸ್ಥಾನಗಳಿಗೆ ಈಗಾಗಲೇ ಚುನಾವಣೆ ನಡೆದು ಮರಿತಿಬ್ಬೇಗೌಡಪುನರಾಯ್ಕೆಗೊಂಡಿದ್ದಾರೆ.

Advertisement

ವೈ.ಎ.ನಾರಾಯಣಸ್ವಾಮಿ, ಡಾ.ಚಂದ್ರಶೇಖರ ಪಾಟೀಲ್‌, ಬೋಜೇಗೌಡ, ಆಯನೂರು ಮಂಜುನಾಥ್‌, ಅ.ದೇವೇಗೌಡ ಹೊಸದಾಗಿ ಆಯ್ಕೆಯಾಗಿದ್ದಾರೆ.

ಸೌಮ್ಯಾ ಪ್ರಮಾಣ: ಜಯನಗರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಸೌಮ್ಯಾರೆಡ್ಡಿ ಅವರು ಸೋಮವಾರ
ಶಾಸಕಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಕೊಠಡಿಯಲ್ಲಿ ಸೋಮವಾರ ಭಗವಂತನ ಹೆಸರಿನಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಅವರಿಗೆ ಸದನದ ನಡಾವಳಿಗಳ ಬಗ್ಗೆ ಸಭಾಧ್ಯಕ್ಷರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತಾಯಿ, ಸಹೋದರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next