ದಾವಣಗೆರೆ: ಏ.1 ರಿಂದ ಅನ್ವಯವಾಗುವಂತೆ ಬಿಎಸ್-3(ಭಾರತ್ ಸ್ಟೇಜ್-3) ಮಾದರಿ ದ್ವಿಚಕ್ರ, ಕಾರು ಮತ್ತಿತರ ವಾಹನಗಳ ನೋಂದಣಿ ನಿಷೇಧಿಸಿ ಸರ್ವೋತ್ಛ ನ್ಯಾಯಾಲಯ ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ ಗುರುವಾರ ದಾವಣಗೆರೆಯ ಬಹುತೇಕ ಷೋರೂಂಗಳಲ್ಲಿ ಬಿಎಸ್-3 ಮಾದರಿ ದ್ವಿಚಕ್ರ, ಕಾರು ಮತ್ತಿತರ ವಾಹನಗಳಿಗೆ ಭಾರೀ ಆಫರ್ ಘೋಷಿಸಿದ್ದರಿಂದ ಜನರು ಮುಗಿಬಿದ್ದ ವಾಹನ ಖರೀದಿ ಮಾಡಿದರು.
ಬಿಎಸ್-3 ಮಾದರಿ ದ್ವಿಚಕ್ರ, ಕಾರು ಮತ್ತಿತರ ವಾಹನಗಳು ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚಿನ ಹೊಗೆ ಹೊರಸೂಸುತ್ತವೆ ಎಂಬ ವಿಚಾರದ ಬಗ್ಗೆ ಸುಧೀರ್ಘ ವಿಚಾರಣೆ ನಡೆಸಿದ ಸರ್ವೋತ್ಛ ನ್ಯಾಯಾಲಯ ಬಿಎಸ್-3 ಮಾದರಿ ದ್ವಿಚಕ್ರ, ಕಾರು ಮತ್ತಿತರ ವಾಹನಗಳನ್ನು ಏ. 1 ರಿಂದ ಯಾವುದೇ ಕಾರಣಕ್ಕೂ ನೋಂದಣಿ ಮಾಡಿಕೊಳ್ಳದಂತೆ ಸಾರಿಗೆ ಇಲಾಖೆಗೆ ಸೂಚಿಸಿ, ಕಟ್ಟುನಿಟ್ಟಿನ ಆದೇಶ ನೀಡಿದೆ.
ಸರ್ವೋತ್ಛ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ತಮ್ಮ ಬಳಿ ದಾಸ್ತಾನಿದ್ದ ವಾಹನಗಳನ್ನು ಖಾಲಿ ಮಾಡಿಕೊಳ್ಳಲು ವಿವಿಧ ಷೋರೂಂಗಳಲ್ಲಿ 5 ರಿಂದ 20 ಸಾವಿರದವರೆಗೆ ದರ ಕಡಿತದ ಆಫರ್ ನೀಡಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಜನರು ತಮ್ಮ ಇಷ್ಟದ ವಾಹನ ಖರೀದಿಗೆ ದೌಡಾಯಿಸಿದರು.
ಬಿಎಸ್-3 ಮಾದರಿ ದ್ವಿಚಕ್ರ, ಕಾರು ಮತ್ತಿತರ ವಾಹನಗಳ ನೋಂದಣಿ ನಿಷೇಧಿಸುವ ವಿಚಾರದ ಚರ್ಚೆ ಬಹಳ ದಿನದಿಂದ ನಡೆಯುತ್ತಿತ್ತು. ಈಚೆಗೆ ಸುಪೀ ಕೋರ್ಟ್ ಆರ್ಡರ್ ಮಾಡಿದೆ. ಹಾಗಾಗಿ ನಮ್ಮಲ್ಲಿರುವ ಸ್ಟಾಕ್ ಖಾಲಿ ಮಾಡಿಕೊಳ್ಳುವುದಕ್ಕಾಗಿಯೇ ಆಫರ್ ನೀಡಲಾಗುತ್ತಿದೆ. ಮಾ. 30, 31 ರಂದು ಟಿಪಿ, ರಿಜಿಸೇಷನ್ ಮಾಡಿಸಿಕೊಳ್ಳಬೇಕು. ಏ. 1 ರಿಂದ ರಿಜಿಸೇಷನ್ ಮಾಡುವುದೇ ಇಲ್ಲ ಎಂದು ಷೋರೂಂ ವ್ಯವಸ್ಥಾಪಕರಲ್ಲೊಬ್ಬರು ಮಾಹಿತಿ ನೀಡಿದರು.
ಈ ವರ್ಷ ಮಳೆ ಕೈ ಕೊಟ್ಟಿದ್ದು, ದಸರಾ, ದೀಪಾವಳಿಯಲ್ಲಿ ನಿರೀಕ್ಷೆ ಮಾಡಿದಂತೆ ವೆಹಿಕಲ್ ಸೇಲ್ ಆಗದೇ ಇರುವುದಕ್ಕಾಗಿ ಬಿಎಸ್ -3 ಮಾಡೆಲ್ ಗಾಡಿ ಉಳಿದುಕೊಂಡಿದೆ. ಈಗಾಗಲೇ ಬಿಎಸ್-4 ಮಾದರಿ ವೆಹಿಕಲ್ ಬಂದಿವೆ. ಕಂಪನಿಯವರು ಆಗುವ ನಷ್ಟ ಭರಿಸುವ ಭರವಸೆಯಿಂದ ಈ ರೀತಿ ಆಫರ್ ನೀಡುತ್ತಿದ್ದೇವೆ. ಕೊಟ್ಟರೆ ಸರಿ. ಇಲ್ಲ ಅಂದರೆ ಲಾಸ್ ಆಗೇ ಆಗುತ್ತದೆ ಎಂದು ತಿಳಿಸಿದರು.