Advertisement

ಜು25ಕ್ಕೆ ಮಠಾಧಿಪತಿಗಳ ಸಮಾವೇಶ : ಯಾವುದೇ ವ್ಯಕ್ತಿ ಕುರಿತು ಸಮಾವೇಶ ಮಾಡ್ತಿಲ್ಲ ಎಂದ ಶ್ರೀಗಳು

06:50 PM Jul 23, 2021 | Team Udayavani |

ಬೆಂಗಳೂರು :  ಮಠಗಳು ಸಮಾಜಕ್ಕೆ ತಮ್ಮದೇ ಕೊಡುಗೆ ಕೊಟ್ಟಿವೆ. ಮಠಾಧಿಪತಿಗಳು ರಾಜ್ಯದಲ್ಲಿ ವಿಶಿಷ್ಟ ಸ್ಥಾನಮಾನ ಹೊಂದಿದ್ದಾರೆ ಸಮಾಜದಲ್ಲಿ‌ ಗೊಂದಲವಾದಾಗ ಜನ ಮಠಕ್ಕೆ ಭೇಟಿ ನೀಡಿ ಮಠಾಧೀಶರ ಸಲಹೆಗಳನ್ನ ಕೇಳ್ತಾರೆ. ಮಠಾಧಿಪತಿಗಳು ಸಮಾಜದ ಅಂಕುಡೊಂಕುಗಳನ್ನು ಸರಿಮಾಡಬೇಕು. ಹೀಗಾಗಿ ಜುಲೈ 25 ರಂದು ಅರಮನೆ ಮೈದಾನದಲ್ಲಿ ಮಠಾಧೀಶರ ಸಭೆ ನಡೆಸುತ್ತಿದ್ದೇವೆ ಎಂದು ತಿಪಟೂರಿನ ರುದ್ರಮುನಿ ‌ಶ್ರೀಗಳು ಹೇಳಿಕೆ ನೀಡಿದ್ದಾರೆ.

Advertisement

ನಗರದಲ್ಲಿ ನಡೆದ ಮಠಾಧೀಪತಿಗಳ ಸಭೆಯಲ್ಲಿ ಮಾತನಾಡಿದ  ಬಾಳೆಹೊಸೂರಿನ ದಿಂಗಾಲೇಶ್ವರ ಶ್ರೀ, ವರ್ತಮಾನದ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಸಮಾವೇಶ ನಡೆಸುತ್ತಿದ್ದೇವೆ.  ಈ ಸಮಾವೇಶ ರಾಜ್ಯದ ಹಿತ ರಕ್ಷಣೆಗಾಗಿ ನಡೆಯುತ್ತಿದೆ. ಮಠಾಧಿಪತಿಗಳ ಕರ್ತವ್ಯ ಕುರಿತು ಚಿಂತನೆ ಮಾಡಲಾಗುತ್ತದೆ. ರಾಜ್ಯದ ಅಗ್ರಗಣ್ಯ ಮಠಾಧಿಪತಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಇದು ಸಾರ್ವಜನಿಕ ಸಭೆಯಲ್ಲ, ಇದು ಮಠಾಧಿಪತಿಗಳ ಸಭೆ ಎಂದು ದಿಂಗಾಲೇಶ್ವರ ಶ್ರೀ ತಿಳಿಸಿದ್ದಾರೆ.

ಇದು ಒಂದು ಸಮಾಜದ ಸಭೆಯಲ್ಲ, ಎಲ್ಲಾ ಸಮಾಜಗಳ ಮಠಾಧೀಶರ ಸಭೆ. ಯಾವುದೇ ವ್ಯಕ್ತಿ ಕುರಿತು ಸಮಾವೇಶ ಮಾಡ್ತಿಲ್ಲ, ಹಲವು ಧ್ಯೇಯೋದ್ದೇಶಗಳನ್ನ ಕುರಿತು ಚರ್ಚಿಸಲಿದ್ದೇವೆ, ರಾಜ್ಯದ ಮಠಾಧಿಪತಿಗಳು ನಾಳೆ ಬೆಂಗಳೂರಿಗೆ ಆಗಮಿಸಬೇಕು. ಎಲ್ಲರಿಗೂ ವಸತಿ, ಊಟದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳುವ ಮೂಲಕ ರಾಜ್ಯದ ಮಠಾಧೀಶರಿಗೆ ದಿಂಗಾಲೇಶ್ವರ ಶ್ರೀಗಳು ಕರೆ ನೀಡಿದ್ದಾರೆ.

ಸಮಗ್ರ ಚಿಂತನೆಯನ್ನ ಇಟ್ಟುಕೊಂಡು ಮಠಾಧಿಪತಿಗಳ ಸಭೆ ಮಾಡುತ್ತಿದ್ದೇವೆ. ಈ ಸಮಾವೇಶದಲ್ಲಿ ರಾಜಕೀಯ ಚಿಂತನೆಯೂ ಇರಲಿದೆ ಎಂದುರು. ಇದೇ ವೇಳೆ ಕೊರೊನಾ ಸಂದರ್ಭದಲ್ಲಿ ಮಠಗಳು ಮುಂದೆ ಬರಲಿಲ್ಲ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಾಕಷ್ಟು ಒಳ್ಳೆಯ ಕೆಲಸ ಮಠಗಳಿಂದ ಆಗಿದೆ. ಕೊರೊನಾ ಸಂದರ್ಭದಲ್ಲಿ ಮಠಗಳು ಕೂಡ ಒಳ್ಳೆಯ ಕೆಲಸ ಮಾಡಿವೆ. ಮಠಾಧೀಶರು ಮಾಡಿಲ್ಲ ಅನ್ನೋದು ಸರಿಯಲ್ಲ ಎಂದರು.

ರಾಜಕಾರಣಕ್ಕೆ ಮಠಾಧೀಶರ ಪ್ರವೇಶದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ದಿಂಗಾಲೇಶ್ವರ ಶ್ರೀ, ಮಠಗಳು‌ ಸಮಾಜ ಮುಖಿ ‌ಕೆಲಸ ಮಾಡಬೇಕಿದೆ. ಇದು ಎಲ್ಲರ ಹಿತವಾಗಿದೆ, ಸಮಾಜದ ಹಿತಕ್ಕಾಗಿ ರಾಜಕಾರಣಿಗಳ ಬಳಿ ಬರಬೇಕು. ನಾವು ಯಾವುದೇ ಹೊಸ ಸಂಪ್ರದಾಯ ಮಾಡಿಕೊಂಡಿಲ್ಲ. ಶಿಕ್ಷಣ ಸಂಸ್ಥೆಗಳನ್ನ ಮಠಗಳು ಕಟ್ಟಿವೆ. ಶಿಕ್ಷಣದ ಕೆಲಸಗಳನ್ನ ಮಾಡಿಕೊಳ್ಳಬೇಕಾದರೆ ಬರಬೇಕಾಗುತ್ತದೆ. ಯಾವುದೇ ಪಕ್ಷದ ಪರ ಮಠಗಳು ನಿಂತಿಲ್ಲ. ಅನ್ಯಾಯವಾದಾಗ ಮಠಾಧೀಶರು ಮಧ್ಯಪ್ರವೇಶ ಮಾಡ್ತಾರೆ. ವ್ಯಕ್ತಿಗೆ ಅನ್ಯಾಯವಾದಾಗ ಕೇಳುವುದರಲ್ಲಿ ತಪ್ಪಿಲ್ಲ. ಎಲ್ಲಿ ಅನ್ಯಾಯ ನಡೆಯುತ್ತೆ ಅಲ್ಲಿ‌ ಮಾರ್ಗದರ್ಶನ ಮಾಡಬೇಕಾಗುತ್ತದೆ ಎಂದು ದಿಂಗಾಲೇಶ್ವರ ಶ್ರೀ ಹೇಳಿಕೆ ನೀಡಿದರು.

Advertisement

ಮಠಾಧೀಶರಿಗೆ ಸಿಎಂ ನಿವಾಸದಲ್ಲಿ ಕವರ್ ಕೊಟ್ಟ ವಿಚಾರವಾಗಿ ಮಾತನಾಡಿದ ಅವರು, ಸಚಿವರು ಕಾಗದ ತೋರಿಸಿದ್ದಕ್ಕೆ ಅಷ್ಟು ಸುದ್ದಿಯಾಯ್ತು, ನಂತರ ಅದರಲ್ಲಿರುವುದು ಗೊತ್ತಾದಾಗ ನಂತರ ಸುಮ್ಮನಾದ್ರಿ, ಹಾಗೆ ಮಠಾಧೀಶರಿಗೂ ಪತ್ರ ಕೊಟ್ಟಿದ್ದಾರೆ. ಇದನ್ನೇ ಬೇರೆ ರೀತಿಯಲ್ಲಿ ‌ತೋರಿಸಿದ್ದು ವಿಕೃತಿ ತೋರಿಸುತ್ತದೆ. ಅದನ್ನ ತೋರಿಸುವವರ ಮನಸ್ಸಿನ ವಿಕೃತಿ ತೋರಿಸುತ್ತದೆ. ಮಠಾಧೀಶರು ಹೋದಾಗ ಹಣ್ಣು ಹಂಪಲು ಕೊಡ್ತಾರೆ. ಮನೆಗಳಿಗೆ ಬಂದಾಗ ಭಕ್ತರು ನೀವೇ ಕೊಡ್ತೀರ. ಅದನ್ನೇ ಬೇರೆ ರೀತಿ ತೋರಿಸಿದರೆ ಹೇಗೆ ಮಾಡುವುದು. ಅವರು ಕೊಟ್ಟ ಕವರ್ ನಲ್ಲಿ ಏನೂ ಇರಲಿಲ್ಲ. ಕಾಣಿಕೆ ಕೊಡುವ ಸಂಸ್ಕೃತಿ ಭಕ್ತರಲ್ಲಿದೆ. ಇದಕ್ಕೆ ಬೇರೆ ಅರ್ಥ ಮಾಡಿಕೊಳ್ಳುವುದು ಸರಿಯಲ್ಲ ಎಂದು ಬಾಳೆ ಹೊಸೂರಿನ ದಿಂಗಾಲೇಶ್ವರ ಶ್ರೀಗಳ ಸ್ಪಷ್ಟನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next