Advertisement

ಸಾಸಿವೆ ಜಾತಿಯ ಗಿಡದಿಂದ ಜೆಟ್‌ ಇಂಧನ!

07:38 PM Oct 18, 2021 | Team Udayavani |

ವಾಷಿಂಗ್ಟನ್‌: ಸಾಸಿವೆ ಗಿಡದ ಜಾತಿಗೆ ಸೇರಿದ ಬೇರೊಂದು ಗಿಡವೊಂದರಿಂದ ಉತ್ಪಾದಿಸಲಾಗುವ ಪೆಟ್ರೋಲಿಯಂ ಆಧಾರಿತ ಏವಿಯೇಷನ್‌ ಫ್ಯೂಯೆಲ್‌ (ವೈಮಾನಿಕ ಇಂಧನ, ಜೆಟ್‌ ಇಂಧನ), ಈಗ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿರುವ ಜೆಟ್‌ ಇಂಧನದಿಂದ ಉಂಟಾಗುವ ವಾಯು ಮಾಲಿನ್ಯವನ್ನು ಶೇ.68ರಷ್ಟು ಇಳಿಕೆ ಮಾಡುತ್ತದೆ ಎಂದು ಅಮೆರಿಕದಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತ ಮೂಲದ ಪುನೀತ್‌ ದ್ವಿವೇದಿ ಎಂಬ ತಜ್ಞರೊಬ್ಬರು ಪ್ರತಿಪಾದಿಸಿದ್ದಾರೆ.

Advertisement

ಬ್ರಝಾಲಿಕಾ ಕಾರಿಟಾನಾ ಎಂದು ಕರೆಯಲ್ಪಡುವ ಗಿಡದಿಂದ ಎಣ್ಣೆಯನ್ನು ತೆಗೆದು ಅದನ್ನು ಶುದ್ಧೀಕರಿಸಿ ಅದನ್ನು ಸುಸ್ಥಿರ ವೈಮಾನಿಕ ಇಂಧನವನ್ನಾಗಿ ಪರಿವರ್ತಿಸಲು ಸಾಧ್ಯವಿದೆ. ಈ ಗಿಡಗಳು ದಕ್ಷಿಣ ಅಮೆರಿಕದಲ್ಲಿ ಹೇರಳವಾಗಿ ಬೆಳೆಯುವುದರಿಂದ ಇಲ್ಲಿ ಈ ಇಂಧನವನ್ನು ಯಥೇತ್ಛವಾಗಿ ಉತ್ಪಾದಿಸಬಹುದು. ವಿಶ್ವದ ಒಟ್ಟಾರೆ ವಾಯುಮಾಲಿನ್ಯದ ಶೇ. 2.5ರಷ್ಟು ಮಾಲಿನ್ಯ ಈಗಿರುವ ಜೆಟ್‌ ಇಂಧನ ತಯಾರಕರಿಂದ ಆಗುತ್ತಿದೆ. ಗಿಡಮೂಲಿಕೆ ಇಂಧನದ ಬಳಕೆ ಹೆಚ್ಚಾದರೆ ಮಾಲಿನ್ಯ ಪ್ರಮಾಣ ಕುಗ್ಗುತ್ತದೆ. ಸಾಂಪ್ರದಾಯಿಕ ಜೆಟ್‌ ಇಂಧನಕ್ಕೆ ಹೋಲಿಸಿದರೆ ಇದರ ಉತ್ಪಾದನಾ ವೆಚ್ಚವೂ ಕಡಿಮೆ ಎಂದು ಅವರು ಹೇಳಿದ್ದಾರೆ.

ಜಾರ್ಜಿಯಾ ವಿಶ್ವವಿದ್ಯಾಲಯದ ಭಾಗವಾಗಿರುವ ವಾರ್ನೆಲ್‌ ಸ್ಕೂಲ್‌ ಆಫ್ ಫಾರೆಸ್ಟಿ ಆ್ಯಂಡ್‌ ನ್ಯಾಚುರಲ್‌ ರಿಸೋರ್ಸಸ್‌ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next