Advertisement

ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್ ‌: ಪಿ.ವಿ. ಸಿಂಧು ಫೈನಲ್‌ ಓಟ

07:09 PM Mar 06, 2021 | Team Udayavani |

ಹೊಸದಿಲ್ಲಿ: ವಿಶ್ವ ಚಾಂಪಿಯನ್‌ ಪಿ.ವಿ. ಸಿಂಧು ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಪ್ರಶಸ್ತಿ ಸುತ್ತನ್ನು ಪ್ರವೇಶಿಸಿದ್ದಾರೆ. ಶನಿವಾರದ ಸೆಮಿಫೈನಲ್‌ನಲ್ಲಿ ಅವರು ಡೆನ್ಮಾರ್ಕ್‌ನ ಮಿಯಾ ಬ್ಲಿಶ್‌ಫೆಲ್ಟ್ ವಿರುದ್ಧ 22-20, 21-10 ಅಂತರದ ಗೆಲುವು ಸಾಧಿಸಿದರು.

Advertisement

ಮೊದಲ ಗೇಮ್‌ ಜಿದ್ದಾಜಿದ್ದಿ ಹೋರಾಟಕ್ಕೆ ಸಾಕ್ಷಿಯಾಯಿತು. ಸಿಂಧು 17-12ರ ಮುನ್ನಡೆಯಲ್ಲಿದ್ದರೂ ಬೆನ್ನಟ್ಟಿಕೊಂಡು ಬಂದ ಮಿಯಾ ಸತತ 5 ಅಂಕ ಗಳಿಸಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ಇಲ್ಲಿಂದ ಸ್ಪರ್ಧೆ ತೀವ್ರಗೊಳ್ಳತೊಡಗಿತು. ಆದರೆ ದ್ವಿತೀಯ ಗೇಮ್‌ನಲ್ಲಿ ಮಿಯಾ ಆಟ ನಡೆಯಲಿಲ್ಲ.

ಸಿಂಧು ಅವರಿನ್ನು ಒಲಿಂಪಿಕ್‌ ಚಾಂಪಿಯನ್‌ ಕ್ಯಾರೋಲಿನಾ ಮರಿನ್‌ ಅಥವಾ ಥಾಯ್ಲೆಂಡ್‌ನ‌ ಪೋರ್ಣಪವೀ ಚೊಚುವೋಂಗ್‌ ವಿರುದ್ಧ ಸೆಣಸಲಿದ್ದಾರೆ.

ಇದನ್ನೂ ಓದಿ:ಬಿಜೆಪಿ ಶಾಸಕರೊಬ್ಬರ ಬರ್ತ್ ಡೇ ಪಾರ್ಟಿಯಲ್ಲಿ ಸಂಘರ್ಷ: ಇಬ್ಬರು ಸಾವು

Advertisement

Udayavani is now on Telegram. Click here to join our channel and stay updated with the latest news.

Next