Advertisement

ಎಚ್‌1ಎನ್‌1: ಕಳೆದ ವಾರದ ಬಲಿ ಸಂಖ್ಯೆ 65; ಈ ವರ್ಷ 377 ಮಂದಿ

11:09 AM Feb 20, 2019 | Team Udayavani |

ಹೊಸದಿಲ್ಲಿ : ಕಳೆದ ವಾರ ದೇಶದಲ್ಲಿ ಎಚ್‌1ಎನ್‌1ಗೆ 65 ಮಂದಿ ಬಲಿಯಾಗಿದ್ದು ಈ ವರ್ಷ ಈ ವ್ಯಾದಿಗೆ ಬಲಿಯಾದವರ ಸಂಖ್ಯೆ 377ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Advertisement

ಇದೇ ವೇಳೆ ದೇಶದಲ್ಲಿ ಎಚ್‌1ಎನ್‌1 ಸೋಂಕಿಗೆ ಒಳಗಾದವರ ಸಂಖ್ಯೆ 12,000 ದಾಟಿದೆ ಎಂದು ಸಚಿವಾಲಯ ತಿಳಿಸಿದೆ.  

ಅತ್ಯಧಿಕ ಎಚ್‌1ಎನ್‌1 ಕೇಸುಗಳು (3,508) ರಾಜಸ್ಥಾನದಿಂದ ವರದಿಯಾಗಿವೆ. ಇಲ್ಲಿ ಎಚ್‌1ಎನ್‌1ಗೆ ಬಲಿಯಾದವರ ಸಂಖ್ಯೆ 127. ಎರಡನೇ ಸ್ಥಾನದಲ್ಲಿ ಗುಜರಾತ್‌ ಇದೆ; ಇಲ್ಲಿ ಮೃತರ ಸಂಖ್ಯೆ 71; ಸೋಂಕು ತಗಲಿದವರ ಸಂಖ್ಯೆ 1,983 ಎಂದು ಸಚಿವಾಲಯ ತಿಳಿಸಿದೆ. 

ದಿಲ್ಲಿಯಲ್ಲಿ ಎಚ್‌1ಎನ್‌1 ಗೆ ಏಳು ಮಂದಿ ಬಲಿಯಾಗಿದ್ದು ಸೋಂಕು ತಗಲಿದವರ ಸಂಖ್ಯೆ 2,278 ಎಂದು ಸಚಿವಾಲಯ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next