Advertisement

ಮಾರಕ ಹಂದಿಜ್ವರಕ್ಕೆ ಈ ವರ್ಷ ಭಾರತದಲ್ಲಿ 345 ಮಂದಿ ಬಲಿ!

12:11 PM May 12, 2017 | Team Udayavani |

ಹೊಸದಿಲ್ಲಿ: ಪ್ರಸಕ್ತ ವರ್ಷವೊಂದರಲ್ಲೇ ಮಾರಕ ಹಂದಿ ಜ್ವರಕ್ಕೆ ಭಾರತದಲ್ಲಿ ಬರೋಬ್ಬರಿ 345 ಮಂದಿ ಬಲಿಯಾಗಿರುವ ಬಗ್ಗೆ ಕಳವಳಕಾರಿ ಅಂಕಿ ಅಂಶಗಳು ಲಭ್ಯಾವಾಗಿದೆ. 

Advertisement

ಹಿಂದೂಸ್ತಾನ್‌ ಟೈಮ್ಸ್‌ನಲ್ಲಿ ವರದಿಯಾದಂತೆ ಭಾರತ ಹೆಚ್ಚಿನ ರಾಜ್ಯಗಳಲ್ಲಿ ಹಂದಿಜ್ವರದ ಪ್ರಕರಣಗಳು ಕಡಿಮೆ ಸಂಖ್ಯೆಯಲ್ಲಿದ್ದರೆ ಮೃತರ ಪೈಕಿ 55% ಜನರು ಕೇರಳ ಮತ್ತು ತಮಿಳುನಾಡಿನವರಾಗಿದ್ದಾರೆ. 

ಪ್ರಸಕ್ತ ವರ್ಷ ಮೇ 7ರ ವರೆಗೆ 345 ಮಂದಿ ಹಂದಿಜ್ವರಕ್ಕೆ ತುತ್ತಾಗಿ ಸಾವನ್ನಪ್ಪಿದ್ದು, ಕಳೆದ ವರ್ಷ ದೇಶದ ವಿವಿಧೆಡೆಗಳಲ್ಲಿ 265 ಮಂದಿ ಬಲಿಯಾಗಿದ್ದರು. 

ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ 2009-10 ರಲ್ಲಿ ಭಾರತದಲ್ಲಿ 50,000 ಮಂದಿ ಹಂದಿ ಜ್ವರಕ್ಕೆ ತುತ್ತಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next