ಮಾಗಡಿ: ತಾಲೂಕಿನ ಹಂಚಿಕುಪ್ಪೆ ಗ್ರಾಪಂ ವ್ಯಾಪ್ತಿಯ ಗುಡ್ಡಹಳ್ಳಿಯ ಪ್ರಗತಿಪರ ಕುಂಬಳಕಾಯಿ ಗಂಗಣ್ಣ ತಮ್ಮ ಐದು ಎಕರೆ ಭೂಪ್ರದೇಶದಲ್ಲಿ ಭರ್ಜರಿಯಾಗಿ ಸಿಹಿ ಕುಂಬಳಕಾಯಿ ಬೆಳೆದಿದ್ದಾರೆ. ತಲಾ ಕುಂಬಳಕಾಯಿ 20 ರಿಂದ 25 ಕೆ.ಜಿ ತೂಗುವಷ್ಟರ ಮಟ್ಟಿಗೆ ಗುಣಮಟ್ಟದ ಬೆಳೆ ಬಂದಿದೆ.
Advertisement
ಉತ್ತಮ ಮಳೆಯಾಗಿದೆ. ಮಳೆಯಾಶ್ರಿತ ಪ್ರದೇಶವಾಗಿದ್ದು, ಮಳೆ ನೀರಿನಿಂದಲೇ ಭರ್ಜರಿ ಕುಂಬಳ ಕಾಯಿ ಬೆಳೆದಿದ್ದಾರೆ. ಕಾಡಂಚಿನಲ್ಲಿ ರುವುದರಿಂದ ಕಾಡು ಪ್ರಾಣಿಗಳಿಂದ ಬೆಳೆಯನ್ನು ರಕ್ಷಿಸಲು ಹಗಲು ರಾತ್ರಿ ಜಮೀನಲ್ಲಿಯೇ ಕಾದು ಬೆಳೆಯನ್ನು ರಕ್ಷಿಸಿ ಕೊಂಡಿದ್ದರು. ಕೆಲವೊಂದು ವೇಳೆ ಕಾಡಾನೆ ಕುಂಬಳ ಕಾಯಿಯನ್ನು ತಿಂದು, ತುಳಿದು ನಷ್ಟಸಹ ಮಾಡಿತ್ತು. ಎದೆಗುಂದಲಿಲ್ಲ.
ಎಚ್.ಎಂ.ರೇವಣ್ಣ ಸಹ ಕುಂಬಳಕಾಯಿ ಬೆಳೆದು ಉತ್ತಮ ಇಳುವರಿ ಪಡೆದು ಗಂಗಣ್ಣ ಅವರ ಮಾರ್ಗ ದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
Related Articles
Advertisement
ಕೃಷಿ ಕ್ರಮಗಳನ್ನು ಚಾಚೂ ತಪ್ಪದೇ ಪಾಲನೆ: ಸಿಹಿ ಕುಂಬಳಕಾಯಿ ಬೆಳೆದ ಗಂಗಣ್ಣನಿಗೆ ಅದೃಷ್ಟ ಕುಲಾಯಿಸಲಿಲ್ಲ. ಕೃಷಿಯಲ್ಲಿ ಸದಾ ಏನಾದರೊಂದು ಮಾಡ ಬೇಕೆಂಬ ತುಡಿತದಲ್ಲಿದ್ದ ಗಂಗಣ್ಣ ಅವರು ಕುಂಬಳಕಾಯಿ ಬೀಜವನ್ನು ಬಿತ್ತಿ ಕೃಷಿ ಆರಂಭಿಸಿದ್ದರು. ಇದು ಅಲ್ಪಾವಧಿ ಬೆಳೆ ಯಾದ್ದರಿಂದ ನೋಡಿಯೇ ಬಿಡೋಣ ಎಂದು ಕೃಷಿ ಕ್ರಮಗಳನ್ನು ಚಾಚೂ ತಪ್ಪದೇ ಮಾಡಿದರು. ಈ ಕೃಷಿ ಇವರಿಗೇನು ಹೊಸದಲ್ಲ. ಹಲವು ವರ್ಷಗಳಿಂದಲೂ ಸಿಹಿ ಮತ್ತು ಬೂದ ಕುಂಬಳಕಾಯಿ ಬೆಳೆಯುವ ಪರಿಣಿತರು. ರೈತರಿಗೆ ಮಾದರಿಯಾದ ಗಂಗಣ್ಣ: ಆಯಾಯ ಸಂದರ್ಭಕ್ಕೆ ತಕ್ಕಂತೆ ಯಾವ ಬೆಳೆ ಬೆಳೆದರೆ ಅನು ಕೂಲವಾಗಬಹುದು ಎಂಬುದನ್ನು ಅರಿತು ಅದನ್ನು ಬೆಳೆದು ಆರ್ಥಿಕ ಮಟ್ಟ ಸುಧಾರಿಸಿ ಕೊಳ್ಳಲು ಮುಂದಾಗಬೇಕು ಎಂಬುದನ್ನು ಗುಡ್ಡಹಳ್ಳಿ ಗ್ರಾಮದ ಪ್ರಗತಿ ಪರ ರೈತ ಗಂಗಣ್ಣ ತೋರಿಸಿಕೊಟ್ಟಿದ್ದಾರೆ. ರೈತ ಸಂಘದ ದಿನಾಚರಣೆಯಲ್ಲಿ ಕುಂಬಳಕಾಯಿ ಗಂಗಣ್ಣ ಅವರನ್ನು ಸನ್ಮಾನಿಸಿ ಗೌರವಿಸಿದ್ದೇನೆ. ಕುಂಬಳ ಕಾಯಿ ಗಂಗಣ್ಣ ಅವರಿಗೆ ತೋಟಗಾರಿಕೆ ಇಲಾಖೆ ಪ್ರೋತ್ಸಾಹಿಸ ಬೇಕು. ಕುಂಬಳ ಕಾಯಿ ಗಂಗಣ್ಣ ಕಷ್ಟಪಟ್ಟು ಕುಂಬಳ ಕಾಯಿ ಬೆಳೆದಿದ್ದಾರೆ. ಬೆಲೆ ಸಿಗದೆ ಕಂಗಾಲಾಗಿರುವ ರೈತ ಗಂಗಣ್ಣ ಅವರಿಗೆ ಸರ್ಕಾರದ ನೆರವು ಅಗತ್ಯವಿದೆ.
●ಹೊಸಪಾಳ್ಯದ ಲೋಕೇಶ್,
ತಾ.ರೈತ ಸಂಘದ ಅಧ್ಯಕ್ಷ *ತಿರುಮಲೆ ಶ್ರೀನಿವಾಸ್