Advertisement
ಫಾಸ್ಟ್ ಫುಡ್ ಆಹಾರಗಳಿಗೆ ಹೆಚ್ಚು ಜನರು ಮಾರು ಹೋಗಿರುವ ಈ ಕಾಲದಲ್ಲಿ ಸಾಂಪ್ರದಾಯಿಕ ಅಡುಗೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಇಂದು ನಿಮಗಾಗಿ ಸಿಹಿ ಗೆಣಸು ಬಳಸಿಕೊಂಡು ಕಟ್ಲೆಟ್ ಮಾಡುವುದು ಹೇಗೆಂದು ತಿಳಿಸುತ್ತೇವೆ.
ಬೇಕಾಗುವ ಸಾಮಗ್ರಿಗಳು
ಬೇಯಿಸಿದ ಸಿಹಿಗೆಣಸು-3,ಈರುಳ್ಳಿ ಸಣ್ಣಗೆ ಹೆಚ್ಚಿದ್ದು-2, ಹಸಿಬಟಾಣಿ-4ಚಮಚ, ತುರಿದ ಕ್ಯಾರೆಟ್-2 ಚಮಚ, ಆಮ್ಚೂರ್ ಪುಡಿ- ಅರ್ಧ ಟೀಸ್ಪೂನ್, ಗರಂ ಮಸಾಲ ಪುಡಿ -ಅರ್ಧ ಟೀಸ್ಪೂನ್, ಹಸಿಮೆಣಸು-2, ಕರಿಬೇವು-ಸ್ವಲ್ಪ, ಕೊತ್ತಂಬರಿ ಸೊಪ್ಪು-ಸ್ವಲ್ಪ, ಅರಿಶಿನ ಪುಡಿ-1/4 ಟೀಸ್ಪೂನ್, ಜೀರಿಗೆ ಪುಡಿ-ಅರ್ಧ ಚಮಚ, ಧನಿಯಾ ಪುಡಿ-ಅರ್ಧ ಚಮಚ, ಪೆಪ್ಪರ್ ಪುಡಿ-1/4 ಟೀಸ್ಪೂನ್, ಮೆಣಸಿನ ಪುಡಿ-2ಚಮಚ, ಎಣ್ಣೆ, ಬ್ರೆಡ್ ಕ್ರಂಬ್ಸ್ ಅಥವಾ ಬಾಂಬೈ ರವೆ-ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.
Related Articles
ಮೊದಲಿಗೆ ಒಂದು ಬೌಲ್ ಗೆ ಬೇಯಿಸಿಟ್ಟ ಸಿಹಿಗೆಣಸಿನ ಸಿಪ್ಪೆ ತೆಗೆದು ಚೆನ್ನಾಗಿ ಹಿಸುಕಿ(ಮ್ಯಾಶ್) ಅದಕ್ಕೆ ಬೇಯಿಸಿದ ಹಸಿಬಟಾಣಿ, ತುರಿದ ಕ್ಯಾರೆಟ್ ಮತ್ತು ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡಿಕೊಳ್ಳಿ.ನಂತರ ಮೆಣಸಿನ ಪುಡಿ,ಅರಿಶಿನ ಪುಡಿ, ಜೀರಿಗೆ, ಪೆಪ್ಪರ್, ಧನಿಯಾ ಪುಡಿ, ಆಮ್ಚೂರ್ ಪುಡಿ, ಗರಂ ಮಸಾಲ, ಸಣ್ಣಗೆ ಹೆಚ್ಚಿದ ಹಸಿಮೆಣಸು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಪುನಃ ಮಿಕ್ಸ್ ಮಾಡಿಕೊಳ್ಳಿ. ತದನಂತರ ಕೊತ್ತಂಬರಿ ಸೊಪ್ಪು ಹಾಗೂ ಕರಿಬೇವಿನ ಎಲೆ ಹಾಕಿ ಸಣ್ಣ-ಸಣ್ಣ ಉಂಡೆ ಕಟ್ಟಿ ತುಸು ಒತ್ತಿ ಚಪ್ಪಟೆ ಮಾಡಿಕೊಳ್ಳಿ. ನಂತರ ಒಲೆಯ ಮೇಲೆ ದೋಸೆ ಕಾವಲಿ ಇಟ್ಟು ಎಣ್ಣೆ ಹಾಕಿ ಕಾದಮೇಲೆ ಮಾಡಿಟ್ಟ ಕಟ್ಲೆಟ್ ನ್ನು ಬಾಂಬೈರವೆ ಅಥವಾ ಬ್ರೆಡ್ ಕ್ರಂಬ್ಸ್ ನಲ್ಲಿ ಹೊರಳಿಸಿ ಕಾವಲಿಗೆ ಹಾಕಿ ಎರಡೂ ಬದಿ ಕಾಯಿಸಿದರೆ ಬಿಸಿ-ಬಿಸಿಯಾದ ಸಿಹಿಗೆಣಸಿನ ಕಟ್ಲೆಟ್ ಟೊಮ್ಯಾಟೋ ಸಾಸ್ ಜೊತೆ ಸವಿಯಿರಿ.
Advertisement