Advertisement

ಸಿಹಿಸುದ್ದಿ: ಖಾದ್ಯ ತೈಲದ ಬೆಲೆಯಲ್ಲಿ 10-12 ರೂ. ಇಳಿಕೆ?

11:20 AM Aug 06, 2022 | Team Udayavani |

ಹೊಸದಿಲ್ಲಿ: ಬೆಲೆ ಏರಿಕೆಯ ಪೆಟ್ಟು ತಿಂದಿದ್ದ ಭಾರತೀಯರಿಗೆ ಖಾದ್ಯ ತೈಲ ಉತ್ಪಾದಕರು ಸಿಹಿ ಸುದ್ದಿ ನೀಡಲು ಸಿದ್ಧರಾಗಿದ್ದಾರೆ.

Advertisement

ಮುಂಬರುವ ದಿನಗಳಲ್ಲಿ ಖಾದ್ಯ ತೈಲದ ಬೆಲೆಯಲ್ಲಿ ಲೀಟರ್‌ಗೆ 10ರಿಂದ 12 ರೂ ಇಳಿಕೆ ಮಾಡಲು ಚರ್ಚೆ ನಡೆಸುತ್ತಿರುವುದಾಗಿ ಹೇಳಲಾಗಿದೆ.

ಆಹಾರ ಇಲಾಖೆಯ ಕಾರ್ಯ ದರ್ಶಿ ಸುಧಾಂಶು ಪಾಂಡೆ ಅವರು ಇತ್ತೀಚೆಗೆ ಖಾದ್ಯ ತೈಲ ಉತ್ಪಾದಕರ ಜತೆ ಸಭೆ ನಡೆಸಿದ್ದು, ಬೆಲೆ ಇಳಿಕೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಜಾಗತಿಕವಾಗಿ ಖಾದ್ಯ ತೈಲ ಬೆಲೆ ಇಳಿಕೆಯನ್ನು ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿ ಹೇಳಲಾಗಿದೆ.

ಜೂನ್‌ ತಿಂಗಳಲ್ಲಿ ಖಾದ್ಯ ತೈಲ ಉತ್ಪಾದಕರು ತಮ್ಮ ಖಾದ್ಯ ತೈಲಗಳ ಬೆಲೆಯಲ್ಲಿ ಲೀಟರ್‌ಗೆ 10-15 ರೂ. ಇಳಿಕೆ ಮಾಡಿದ್ದರು. ಅದಲ್ಲದೆ ಎಂ ಆರ್‌ ಪಿಯಲ್ಲೂ ಇಳಿಕೆ ಮಾಡಲಾಗಿತ್ತು. ಅದಾನಿ ವಿಲ್ಮರ್‌ ಅವರ ಫಾರ್ಚೂನ್‌ ತೈಲದ ಬೆಲೆಯಲ್ಲಿ 30 ರೂ.ವರೆಗೆ ಇಳಿಕೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next