ನವದೆಹಲಿ: ವಾರಾಣಸಿಯ ಬನಾರಸಿ ಸ್ವೀಟ್ ಪಾನ್ (ಬೀಡಾ) ಮತ್ತು ಲಾಂಗ್ಡಾ ಮಾವು ಕೊನೆಗೂ ಜಿಐ( ಜಿಯೋಗ್ರಾಫಿಕಲ್ ಇಂಡಿಕೇಷನ್) ಕ್ಲಬ್ ಗೆ ಸೇರಿದೆ. ಒಂದು ಉತ್ಪನ್ನದ ಭೌಗೋಳಿಕ ವಿಶೇಷತೆಯನ್ನು ಮಾನ್ಯ ಮಾಡಲು ಜಿಐ ಟ್ಯಾಗ್ ನೀಡಲಾಗುತ್ತದೆ.
ಇದನ್ನೂ ಓದಿ:ಜಾರ್ಖಂಡ್: ಕುಡಿದ ಅಮಲಿನಲ್ಲಿ ಹಲ್ಲೆಗೈದು, 12ನೇ ಪತ್ನಿಯನ್ನು ಸಾಯಿಸಿದ ಪತಿ
ಇದರೊಂದಿಗೆ ಚೆನ್ನೈನ GI ರಿಜಿಸ್ಟ್ರಿ ಮಾರ್ಚ್ 31ರಂದು ವಾರಾಣಸಿಯ ಇನ್ನೂ ಎರಡು ಉತ್ಪನ್ನಗಳಾದ ರಾಮ್ ನಗರ್ ಭಂಟಾ (ಬದನೆ) ಮತ್ತು ಚಂದೌಸಿಯ ಅದಮ್ ಚಿನಿ ಚಾವಲ್(ಅಕ್ಕಿ)ಗೆ ಜಿಐ ಟ್ಯಾಗ್ ನೀಡಿದೆ.
ಈ ಯೋಜನೆಯಲ್ಲಿ ದೀರ್ಘಕಾಲದಿಂದ ಕೆಲಸ ಮಾಡುತ್ತಿರುವ ಜಿಐ ತಜ್ಞ ಡಾ.ರಜನಿಕಾಂತ್ ಅವರ ಪ್ರಕಾರ, ಎಲ್ಲಾ ನಾಲ್ಕು ಉತ್ಪನ್ನಗಳು ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ್ದಾಗಿದೆ. ಜಿಐ ಟ್ಯಾಗ್ ನೀಡುವ ಪ್ರಕ್ರಿಯೆಯಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಮತ್ತು ಉತ್ತರಪ್ರದೇಶ ಸರ್ಕಾರ ಪ್ರಮುಖ ಪಾತ್ರ ವಹಿಸಿವೆ ಎಂದು ತಿಳಿಸಿದ್ದಾರೆ.
ಪ್ರಮುಖ ನಾಲ್ಕು ಉತ್ಪನ್ನಗಳ ವಹಿವಾಟಿನಲ್ಲಿ 20 ಲಕ್ಷ ಮಂದಿ ಭಾಗಿಯಾಗಿದ್ದು, ವಾರ್ಷಿಕವಾಗಿ ಅಂದಾಜು 25,500 ಕೋಟಿ ರೂಪಾಯಿ ವಹಿವಾಟು ನಡೆಯುತ್ತದೆ ಎಂದು ಡಾ.ರಜನಿಕಾಂತ್ ಮಾಹಿತಿ ನೀಡಿದ್ದಾರೆ. ಸುಮಾರು 20 ಉತ್ಪನ್ನಗಳಿಗೆ ಜಿಐ ಟ್ಯಾಗ್ಸ್ ನೀಡುವಂತೆ ಸರ್ಕಾರ ಮನವಿ ಸಲ್ಲಿಸಿದ್ದು, ಇದರಲ್ಲಿ 11 ಉತ್ಪನ್ನಗಳನ್ನು ಜಿಐ ಕ್ಲಬ್ ಗೆ ಸೇರಿಸಲಾಗಿದೆ.
ಏನಿದು GI ಟ್ಯಾಗ್?:
ಜಿಐ ಟ್ಯಾಗ್ ಅಂದರೆ ಜಿಯೋಗ್ರಾಫಿಕಲ್ ಇಂಡಿಕೇಶನ್ ಎಂಬುದಾಗಿದೆ. ಅಂದರೆ ಭೌಗೋಳಿಕ ವಿಶೇಷತೆಗೆ ಮಾನ್ಯತೆ ನೀಡುವ ಜಿಐ ಟ್ಯಾಗ್ ಒಂದು ಉತ್ಪನ್ನದ ಮೂಲ ಯಾವ ಪ್ರದೇಶದ್ದು ಎಂಬುದನ್ನು ತಿಳಿಸುತ್ತದೆ.
ಉದಾಹರಣೆಗೆ ಬನಾರಸಿ ಸೀರೆ ಎಂಬುದು ಉತ್ತರಪ್ರದೇಶದ ಬನಾರಸ್ ಪ್ರದೇಶಕ್ಕೆ ಸೇರಿದ್ದಾಗಿದೆ. ಇದಕ್ಕೆ ನೀಡಲಾಗಿರುವ ಜಿಐ ಟ್ಯಾಗ್ ನಲ್ಲಿ ಬನಾರಸಿ ಎಂಬುದು ಇರುತ್ತದೆ. ಇದು ಆ ಉತ್ಪನ್ನದ ಪ್ರದೇಶವನ್ನು ಸೂಚಿಸುತ್ತದೆ. ಕಾಂಚೀವರಂ ಸೀರೆ, ಇಳಕಲ್ ಸೀರೆ, ಮಟ್ಟು ಗುಳ್ಳ ಬದನೆ ಹೀಗೆ ನೂರಾರು ಉತ್ಪನ್ನಗಳು ಜಿಐ ಟ್ಯಾಗ್ ನಿಂದ ಗುರುತಿಸಲ್ಪಟ್ಟಿದೆ.