Advertisement
“ಬುಮ್ರಾ ವಿಶ್ವದ ಸರ್ವಶ್ರೇಷ್ಠ ಬೌಲರ್. ಯಾರ್ಕರ್ ಸ್ಪೆಷಲಿಸ್ಟ್. ಅವರ ಎಸೆತಕ್ಕೆ ಸ್ವೀಪ್ ಶಾಟ್ ಹೊಡೆಯುವುದು ನನ್ನ ಕನಸಾಗಿತ್ತು. ಇದರಲ್ಲಿ ನಾನಿಂದು ಯಶಸ್ವಿಯಾದೆ’ ಎಂಬುದಾಗಿ ಅಶುತೋಷ್ ಅತ್ಯಂತ ಖುಷಿಯಿಂದ ಹೇಳಿದರು.
“ನಮಗೆ ಬೆದರಿಕೆಯೊಡ್ಡಿ ಒತ್ತಡವನ್ನು ಹೆಚ್ಚಿಸಿದ ಅಶುತೋಷ್ ಶರ್ಮ ಓರ್ವ ಅಸಾಮಾನ್ಯ ಆಟ ಗಾರ’ ಎಂಬುದಾಗಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಪ್ರಶಂಸಿಸಿದ್ದಾರೆ.
Related Articles
Advertisement
ಗುರುವಾರ ರಾತ್ರಿ ತವರಿನ ಅಂಗಳದಲ್ಲಿ ಮುಂಬೈ ವಿರುದ್ಧ 193 ರನ್ ಗಳಿಸಬೇಕಿದ್ದ ಪಂಜಾಬ್ 14 ರನ್ನಿಗೆ 4 ವಿಕೆಟ್ ಕಳೆದುಕೊಂಡಾಗಲೇ ಸೋಲನ್ನು ಖಾತ್ರಿಗೊಳಿಸಿತ್ತು. ಬಳಿಕ 77ಕ್ಕೆ 6 ವಿಕೆಟ್, 111ಕ್ಕೆ 7 ವಿಕೆಟ್ ಬಿತ್ತು. ಮುಂಬೈ ಗೆಲುವಿನ ಕ್ಷಣಗಣನೆ ಯಲ್ಲಿತ್ತು. ಆದರೆ 8ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಅಶುತೋಷ್ ಶರ್ಮ ಬೇರೆಯೇ ಸ್ಕೆಚ್ ಹಾಕಿಕೊಂಡಂತಿತ್ತು.
ಪಂಜಾಬ್ ಸರದಿ ಯಲ್ಲೇ ಸರ್ವಾಧಿಕ 61 ರನ್ ಮಾಡಿದರು. ಎದುರಿಸಿದ್ದು 28 ಎಸೆತ, ಸಿಡಿಸಿದ್ದು 7 ಸಿಕ್ಸರ್ ಮತ್ತು 2 ಫೋರ್. ಅವರು ಕೊನೆಯ ತನಕ ಕ್ರೀಸ್‌ನಲ್ಲಿದ್ದದ್ದೇ ಆದರೆ ಪಂಜಾಬ್ ರೋಚಕ ಗೆಲುವು ಕಾಣುವುದರಲ್ಲಿ ಅನುಮಾನವೇ ಇರಲಿಲ್ಲ!
ಹಾರ್ದಿಕ್‌ಗೆ 12 ಲಕ್ಷ ರೂ. ದಂಡಪಂಜಾಬ್ ಕಿಂಗ್ಸ್ ವಿರುದ್ಧ 9 ರನ್ ರೋಚಕ ಗೆಲುವು ಸಾಧಿಸಿದ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ಭಾರೀ ದಂಡದ ಬರೆ ಬಿದ್ದಿದೆ. ಓವರ್ ರೇಟ್ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಪ್ರಸಕ್ತ ಸೀಸನ್‌ನಲ್ಲಿ ಮುಂಬೈಗೆ ಬಿದ್ದ ಮೊದಲ ದಂಡದ ಬರೆ ಇದಾಗಿದೆ.