ಉತ್ತರ ಪ್ರದೇಶ: ಪ್ರೀತಿ ಎನ್ನುವ ಬಾಂಧವ್ಯಕ್ಕೆ ಎಲ್ಲೆ ಇಲ್ಲ, ಬಣ್ಣ-ಭಾಷೆ, ಜಾತಿ-ಧರ್ಮಗಳಷ್ಟೇ ಅಲ್ಲ, ರಾಷ್ಟ್ರೀಯತೆಯನ್ನೂ ಮೀರಿ ಪ್ರೀತಿ ಹುಟ್ಟಬಲ್ಲದು ಎಂಬುದಕ್ಕೆ ಉತ್ತರ ಪ್ರದೇಶದ ಜೋಡಿಯೊಂದು ಸಾಕ್ಷಿಯಾಗಿದೆ. ಫೇಸ್‌ಬುಕ್‌ನಲ್ಲಿ ಪರಿಚಯವಾದ ಭಾರತದ ಯುವಕನನ್ನು, ಸ್ವೀಡನ್‌ನಿಂದ ಬಂದ ಯುವತಿ ವರಿಸುವ ಮೂಲಕ ಪ್ರೀತಿಯ ಹೊಸ ಮಜಲಿಗೆ ಕಾಲಿಟ್ಟಿದ್ದಾರೆ.
ಹೌದು, ಕ್ರಿಸ್ಟನ್ ಲಿಬರ್ಟ್ ಎನ್ನುವ ಸ್ವೀಡನ್‌ನ ಯುವತಿ, ಫೇಸ್‌ಬುಕ್‌ನಲ್ಲಿ ಪರಿಚಯವಾದ ಉತ್ತರ ಪ್ರದೇಶದ ಪವನ್ ಕುಮಾರ್‌ರನ್ನು ಪ್ರೀತಿಸಿದ್ದರು.
2012ರಲ್ಲಿ ಪರಿಚಯವಾಗಿ, ಪ್ರೇಮವಾಗಿದ್ದ ಈ ಜೋಡಿ ಈಗ ಮದುವೆಯಾಗಿದ್ದಾರೆ. ಪ್ರಿಯಕರನಿಗಾಗಿ ಸ್ವೀಡನ್‌ನಿಂದ ಬಂದಿರುವ ಕ್ರಿಸ್ಟನ್, ಹಿಂದೂ ಸಂಪ್ರದಾಯದಂತೆ ಪವನ್ ಅವರ ಕೈಹಿಡಿದಿದ್ದಾರೆ. ಮದುವೆಗೆ ವರನ ಕುಟುಂಬವೂ ಒಪ್ಪಿದ್ದು, ಮಕ್ಕಳ ಖುಷಿಯೇ ಮುಖ್ಯ ಎಂದಿದ್ದಾರೆ. ಪವನ್ ಹಾಗೂ ಕ್ರಿಸ್ಟನ್ ಅವರ ಮದುವೆ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವರು ಈ ಪ್ರೇಮ ಶಾಶ್ವತವಾಗಿರಲಿ ಎಂದೂ ಶುಭಹಾರೈಸಿದ್ದಾರೆ.
ಇದನ್ನೂ ಓದಿ: 1 ಕೋಟಿ ರೂ.ನಲ್ಲಿ ಮಗಳ ಮದುವೆ ಮಾಡಿ! ಪತ್ರ ಬರೆದು ಉದ್ಯಮಿ ದಂಪತಿ ಮಾಡಿದ್ದೇನು ಗೊತ್ತಾ…