ಕೊಪನ್‌ಹೆಗನ್: ಐರೋಪ್ಯ ಒಕ್ಕೂಟದ ಸ್ವೀಡನ್‌ಗೆ ಮೊದಲ ಮಹಿಳಾ ಪ್ರಧಾನಿಯಾಗಿ ಮ್ಯಾಗ್ಡಲೀನಾ ಆ್ಯಂಡರ್ಸನ್ (54)ಆಯ್ಕೆಯಾಗಿದ್ದಾರೆ.
ವಿತ್ತ ಸಚಿವೆಯಾಗಿದ್ದ ಅವರು ಸಂಸತ್ತಿನಲ್ಲಿ ನಡೆದ ಚುನಾವಣೆಯಲ್ಲಿ ಜಯ ಸಾಧಿಸಿದ್ದು, ಮಾಜಿ ಪ್ರಧಾನಿ ಸ್ಟೇಫನ್ ಲೋಫ್ವೆನ್ ಅವರ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
349 ಸದಸ್ಯರಿರುವ ಸಂಸತ್ತಿನಲ್ಲಿ 117 ಸಂಸದರು ಮ್ಯಾಗ್ಡಲೀನಾ ಪರವಾಗಿ ಮತ ಹಾಕಿದ್ದರೆ, 174 ಸಂಸದರು ಮ್ಯಾಗ್ಡಲೀನಾ ವಿರುದ್ಧವಾಗಿ ಮತ ಹಾಕಿದ್ದಾರೆ. 57 ಮಂದಿ ಮತ ಹಾಕಿಲ್ಲ ಹಾಗೂ ಒಬ್ಬರು ಸಂಸತ್ತಿಗೆ ಹಾಜರಾಗಿರಲಿಲ್ಲ.
ಸ್ವೆಡೆನ್ ಸಂವಿಧಾನದ ಪ್ರಕಾರ 175 ಪ್ರಧಾನಿ ಅಭ್ಯರ್ಥಿ ವಿರುದ್ಧ 175ಕ್ಕಿಂತ ಕಡಿಮೆ ಸಂಸದರು ಅಭ್ಯರ್ಥಿಯ ವಿರುದ್ಧ ಮತ ಹಾಕಿದ್ದರೆ ಅವರು ಪ್ರಧಾನಿಯಾಗಿ ಆಯ್ಕೆಯಾಗುತ್ತಾರೆ. ಅದೇ ಹಿನ್ನೆಲೆಯಲ್ಲಿ ಮಗ್ಧಾಲೆನಾ ಅವರು ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ:ಯುನೈಟೆಡ್ ಕಿಂಗ್‌ಡಮ್ ಸಂಸತ್ತಿನ ಒಳಗೆ ಮಕ್ಕಳಿಗೆ ನಿಷೇಧಕ್ಕೆ ಭಾರೀ ಆಕ್ರೋಶ
ಪ್ರಧಾನಿಯಾದ ಸಂತಸವನ್ನು ಹಂಚಿಕೊಂಡಿರುವ ಮ್ಯಾಗ್ಡಲೀನಾ, “ನಾನು ಪ್ರಧಾನಿಯಾಗಿ ಆಯ್ಕೆಯಾಗಿದ್ದೇನೆ. ಇದು ರಾಷ್ಟ್ರದ ಪ್ರತಿ ಹೆಣ್ಣು ಮಕ್ಕಳಿಗೆ ಎಷ್ಟು ಖುಷಿ ತಂದಿದೆ’ ಎಂದಿದ್ದಾರೆ.