Advertisement
ಸಾರಜನಕವು ಸಸ್ಯಗಳು ಅತಿ ಹೆಚ್ಚು ಬೇಡುವ ಪೋಷಕಾಂಶಗಳಾಗಿವೆ. ವಾತಾವರಣದಲ್ಲಿ ಸರಿಸುಮಾರು ಶೇ. 78ರಷ್ಟು ಸಾರಜನಕವಿದ್ದು ಅದು ಸಸ್ಯಗಳಿಗೆ ದೊರಕದ ರೀತಿಯಲ್ಲಿ ಇರುವುದರಿಂದ ಬೆಳೆಗಳಿಗೆ ಇದನ್ನು ಗೊಬ್ಬರಗಳ ಮೂಲಕ ನೀಡಬೇಕಾಗುತ್ತದೆ. ವಿವಿಧ ಗೊಬ್ಬರಗಳಾದ ಯೂರಿಯಾ, ಅಮೋನಿಯಂ ಸಲ್ಫೇಟ್, ಅಮೋನಿಯಂ ನೈಟ್ರೇಟ್, ಕ್ಯಾಲ್ಸಿಯಂ ನೈಟ್ರೇಟ್ ಮುಂತಾದವುಗಳ ಮೂಲಕ ಸಾರಜನಕವನ್ನು ಬೆಳೆಗಳಿಗೆ ಒದಗಿಸಬಹುದು. ರೈತರು ಯಾವುದೇ ಗೊಬ್ಬರವನ್ನು ಬಳಸಿದರೂ ಕೂಡ ಸಸ್ಯಗಳು ಸಾರಜನಕವನ್ನು ತಮಗೆ ಬೇಕಾದ ರೂಪದಲ್ಲಿಯೇ ಹೀರಿಕೊಳ್ಳುತ್ತವೆ. ಅಂದರೆ ಭತ್ತವು ಸಾರಜನಕವನ್ನು ಅಮೋನಿಯಂ ರೂಪ ದಲ್ಲಿ ಮತ್ತು ಉಳಿದೆಲ್ಲಾ ಬೆಳೆಗಳು ನೈಟ್ರೇಟ್ ರೂಪದಲ್ಲಿ ಹೀರಿಕೊಳ್ಳುತ್ತವೆ.
Related Articles
Advertisement
2 ಕೂರಿಗೆಯಿಂದ ಬಿತ್ತನೆ ಮಾಡುವುದು.
3 ಯೂರಿಯಾ ಗೊಬ್ಬರವನ್ನು ತೇವಯುಕ್ತ ಮಣ್ಣಿನ ಜತೆ ಮಿಶ್ರಣ ಮಾಡಿ ಬಳಸುವುದು.
4 ದಪ್ಪ ಹರಳಿನ ಯೂರಿಯಾ ಬಳಕೆ ಮಾಡುವುದು.
ನಮ್ಮ ದೇಶದಲ್ಲಿ ದೇಶೀಯ ವಸ್ತುಗಳನ್ನು ಉಪಯೋಗಿಸಿ ನೈಟ್ರಿಫಿಕೇಶನ್ ಕಡಿಮೆಗೊಳಿಸಲು ಭಾರತೀಯ ವಿಜ್ಞಾನಿಗಳು ಸಫಲರಾಗಿದ್ದಾರೆ. ಅದೇನೆಂದರೆ ಯೂರಿಯಾ ಗೊಬ್ಬರವನ್ನು ಬೇವಿನಿಂದ ಲೇಪನ ಮಾಡುವುದು. ಇದರಿಂದ ಸಾರಜನಕವು ಹಂತ ಹಂತವಾಗಿ ಬಿಡುಗಡೆ ಹೊಂದುವುದರಿಂದ ಬೆಳೆಗಳಿಗೆ ದೀರ್ಘಕಾಲದವರೆಗೆ ಮಣ್ಣಿನಲ್ಲಿ ಸಾರಜನಕ ದೊರೆಯುತ್ತದೆ. ಇದರಿಂದ ಬೆಳೆಗಳ ಬೆಳವಣಿಗೆ ಉತ್ತಮಗೊಳ್ಳುವುದಲ್ಲದೆ ಕಾಳುಗಳ ಸಂಖ್ಯೆ ಅಧಿಕಗೊಂಡು ಸದೃಢ ಕಾಳುಗಳು ದೊರೆಯುತ್ತವೆ. ಇದಲ್ಲದೆ ಬೆಳೆಗಳಿಗೆ ಹಾಕಿದ ಯೂರಿಯಾ ಗೊಬ್ಬರದ ನಷ್ಟವನ್ನು ತಡೆಯಬಹುದು. ಬೆಳೆ ನಿಧಾನವಾಗಿ ಬೆಳೆಯುವುದರಿಂದ ರೋಗ ರುಜಿನಗಳು ಕೂಡ ಕಡಿಮೆ.
2015-16ರಲ್ಲಿ ದಾವಣಗೆರೆ ಜಿಲ್ಲೆಯ ಹೊಸ ಬೆಳವನೂರು ಗ್ರಾಮದ ಆಯ್ದ ರೈತರ ಭತ್ತದ ಗದ್ದೆಗಳಲ್ಲಿ ಇದರ ಬಳಕೆಯ ಬಗ್ಗೆ ಕೃಷಿ ವಿಜ್ಞಾನಿಗಳು ಕ್ಷೇತ್ರ ಪ್ರಯೋಗ ನಡೆಸಿದ್ದು ಅವುಗಳ ಫಲಿತಾಂಶ ಇಂತಿದೆ:
1. ಪ್ರಯೋಗದಲ್ಲಿ ಒಂದು ಎಕರೆಗೆ 60 ಕೆ.ಜಿ. ಯೂರಿಯಾವನ್ನು ಎರಡು ಕಂತುಗಳಲ್ಲಿ ನೀಡಲಾಗಿತ್ತು.
2. ಸಾಮಾನ್ಯ ಯೂರಿಯಾ ಬಳಕೆಗಿಂತ ಬೇವು ಲೇಪಿತ ಯೂರಿಯಾ ಬಳಸಿ ಎಕರೆಗೆ ಸುಮಾರು ಒಂದು ಕ್ವಿಂಟಾಲ್ನಷ್ಟು ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ.
– ಜಯಾನಂದ ಅಮೀನ್, ಬನ್ನಂಜೆ