Advertisement

ಸ್ವಾವಲಂಬನ ಫ್ರೆಂಡ್ಸ್‌  ಡೊಂಬಿವಲಿ : ಸಾಂಸ್ಕೃತಿಕ ಸಂಜೆ

12:46 PM Nov 15, 2017 | Team Udayavani |

ಡೊಂಬಿವಲಿ: ಸ್ವಾವಲಂಬನ ಫ್ರೆಂಡ್ಸ್‌ ಡೊಂಬಿವಲಿ ವತಿಯಿಂದ ಸಂಸ್ಥೆಯ ಶಿಬಿರದ ಮಕ್ಕಳಿಂದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವು ಇತ್ತೀಚೆಗೆ ಡೊಂಬಿವಲಿ ಪೂರ್ವ ಗಣಪತಿ ಮಂದಿರದ ಓಂಕಾರ್‌ ಸಭಾಗೃಹದಲ್ಲಿ ನಡೆಯಿತು.

Advertisement

ಸ್ವಾವಲಂಬನ ಕೇಂದ್ರದ ವಿದ್ಯಾರ್ಥಿಗಳು, ಪಾಲಕರು, ಸ್ಥಳೀಯ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಹಿರಿಯ ಪತ್ರಕರ್ತ ವಸಂತ ಕಲಕೋಟಿ ಅವರು, ಪ್ರಾಚಾರ್ಯ ವೆಂಕಟೇಶ ಪೈ ಅವರು ಹಾಗೂ ನಾನು ಕನ್ನಡಪರ ಸಾಹಿತ್ಯ ಸೇವೆಯಲ್ಲಿ ಜತೆಜತೆಯಾಗಿ ಸಾಗಿ ಬಂದವರು.

ಪರಿಸರ ಕಾಳಜಿ ಹಾಗೂ ನಿರುದ್ಯೋಗಿಗಳಿಗೆ ಸ್ವಾವಲಂಬನೆ ಕಲಿ
ಸುವ ಸಂಸ್ಥೆಯು ಮುಂಬಯಿಯಲ್ಲಿ ಇದೊಂದೇ  ಆಗಿದೆ. ಅದು ಕನ್ನಡಿಗರದ್ದು ಎನ್ನಲು ಹೆಮ್ಮೆಯಾಗುತ್ತಿದೆ ಎಂದರು.
ಅತಿಥಿಯಾಗಿ ಆಗಮಿಸಿದ ಸೆನ್ಸಾರ್‌ ಬೋರ್ಡ್‌ನ ರಂಗ ಪೂಜಾರಿ ಅವರು ಮಾತನಾಡಿ, ನಗರ ಪರಿಸರದಲ್ಲಿನ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ಉಚಿತವಾಗಿ ಒದಗಿಸುತ್ತಿರುವ ಸ್ವಾವಲಂಬನ ಸಂಸ್ಥೆಗೆ ಇತರರೂ ಸಹಾಯ ಹಸ್ತ ನೀಡುವುದು ಅವಶ್ಯವಾಗಿದೆ ಎಂದು ನುಡಿದರು.

ಆಮಂತ್ರಿತ ಅತಿಥಿಯಾಗಿ ಪಾಲ್ಗೊಂಡ ಉದ್ಯಮಿ ಅನಂತ ಪೈ ಅವರು, ಸ್ವಾವಲಂಬನದ ಉದ್ದೇಶಗಳು ಅನುಕರಣೀಯ. ಬಟ್ಟೆಚೀಲಗಳನ್ನು ಹೊಲಿದು, ಮಾರಾಟ ಮಾಡುವುದರೊಂದಿಗೆ ಪ್ಲಾಸ್ಟಿಕ್‌ ಬಳಸಬೇಡಿ ಎಂಬ ಸಂದೇಶವೂ ಒಳಗೊಂ
ಡಿದೆ. ಇಲ್ಲಿನ ಕಾರ್ಯಕ್ರಮಗಳಿಗೆ ತಾನು ಯಾವತ್ತೂ ಸಹಕರಿಸುತ್ತೇನೆ ಎಂದರು.

ಮತ್ತೋರ್ವ ಅತಿಥಿ ಲೇಖಕ ಪಿ. ಆರ್‌. ರವಿ ಶಂಕರ್‌ ಡಹಾಣೂ ಅವರು ಮಾತನಾಡಿ, ಸಂಗೀತ ಅಥವಾ ನಾಟಕದ ಪಾತ್ರಧಾರಿಗಳು ವೇದಿಕೆಯಲ್ಲಿ ಪ್ರದರ್ಶನ ನೀಡುವಾಗ ಉಂಟಾಗುವ ಸವಾಲುಗಳ ಬಗ್ಗೆ ವಿವರಿಸಿ ಸಲಹೆ ನೀಡಿದರು. ಸ್ವಾವಲಂಬನ ಕೇಂದ್ರದ ವಿದ್ಯಾರ್ಥಿಗಳಿಗೆ ಮಾತುಗಾರಿಕೆಯ ಬಗ್ಗೆ ಸಲಹೆ ನೀಡಿ, ಉಚಿತವಾಗಿ ನಡೆಸುವ ಶಿಬಿರಗಳ ಸದುಪಯೋಗವನ್ನು ಎಲರೂ ಪಡೆದುಕೊಳ್ಳುವಂತೆ ವಿನಂತಿಸಿದರು.

Advertisement

ಪ್ರಾಚಾರ್ಯ ವೆಂಕಟೇಶ್‌ ಪೈ ಅವರು ಸ್ವಾವಲಂಬನದ ಚಟುವಟಿಕೆಗಳ ಬಗ್ಗೆ ವಿವರಿಸಿ, ಭವಿಷ್ಯದಲ್ಲಿ ಇಂತಹ ತರಬೇತಿಗಳಿಗೆ ಉಚಿತವಾದ ಸ್ಥಳವೊಂದರ ಅಗತ್ಯವನ್ನು ತಿಳಿಸಿದರು. ಸಂಸ್ಥೆಯಲ್ಲಿ ಆಯೋಜಿಸಿದ್ದ ಗಣೇಶ ಚಿತ್ರಬಿಡಿಸುವ ಹಾಗೂ ಭಜನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕಿಯರಾದ ಸಂಧ್ಯಾ ಸನತ್‌, ಸುನಂದಾ ಎನ್‌. ಶೆಟ್ಟಿ, ಹೇಮಂತ್‌ ಮೆಂಡನ್‌, ಪ್ರತಿಭಾ ವೈದ್ಯ, ಆಶಾ ಉಮೇಶ್‌ ನಾಯಕ್‌, ಕಸ್ತೂರಿ ಐನಾಪುರೆ ಹಾಗೂ ಸ್ಥಳೀಯ ಓಂಕಾರ ಶಾಲೆಯ ಪ್ರಾಧ್ಯಾಪಕಿ ವಿಜಯಲಕ್ಷ್ಮೀ ಮೊದಲಾದವರನ್ನು ಅಭಿನಂದಿಸಲಾಯಿತು.

ಸ್ವಾವಲಂಬನ ಕೇಂದ್ರದಲ್ಲಿ ತಾವು ಕಲಿತ ಭಜನೆ, ಸಂಗೀತ, ಸುಗಮ ಸಂಗೀತ ಮೊದಲಾದ ಶಿಬಿರಗಳ ವಿದ್ಯಾರ್ಥಿಗಳಿಂದ ಸಂಗೀತ ರಸ ಸಂಜೆ ನಡೆಯಿತು. ಪ್ರೀತಂ ಅವರು ಕಾರ್ಯಕ್ರಮ ನಿರ್ವಹಿಸಿದರು. ಕಸ್ತೂರಿ ಐನಾಪೂರೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next