Advertisement

ಕನ್ನಡದ ಮೇಲೆ ಅಭಿಮಾನವಿರಲಿ: ಚಾರುಕೀರ್ತಿ ಶ್ರೀ 

06:00 AM Jun 27, 2018 | Team Udayavani |

ಚನ್ನರಾಯಪಟ್ಟಣ: ಹಳಗನ್ನಡವನ್ನು ಸಾಹಿತ್ಯ ಅಭಿರುಚಿಯಲ್ಲಿಯೇ ಅಧ್ಯಯನ ಮಾಡಬೇ ಕೆಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು. ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಅಖೀಲ ಭಾರತ ಪ್ರಥಮ ಹಳಗನ್ನಡ ಸಾಹಿತ್ಯ ಸಮ್ಮೇಳನದ
ಸಮಾರೋಪ ಭಾಷಣದಲ್ಲಿ ಅವರು ಆಶೀರ್ವಚನ ನೀಡಿದರು. ಕನ್ನಡ ಭಾಷೆ ಬಹಳ ಹಳೆಯದಾಗಿದ್ದು, 4ನೇ ಶತಮಾನಕ್ಕೂ ಮುಂಚಿತವಾಗಿ ಲಿಪಿ ಇರಬಹುದೆಂದು ಚಿಂತಕರು ಸಮ್ಮೇಳನದಲ್ಲಿ ತಿಳಿಸಿದ್ದಾರೆ. ಕನ್ನಡ ಭಾಷೆ ಬಹಳ ಸಮೃದ್ಧವಾಗಿದ್ದು, ಭಾಷೆಯ ಮೇಲೆ ಎಲ್ಲರಿಗೂ ಅಭಿಮಾನ ಹೆಚ್ಚಾಗಿರಬೇಕು ಎಂದರು.

Advertisement

ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಷ.ಶೆಟ್ಟರ್‌, ಹಿಂದಿನ ಕಾಲದ ಕವಿಗಳಿಗಿದ್ದ ಸ್ವಾತಂತ್ರ್ಯ ಈ ಕಾಲದ ಕವಿಗಳಿಗಿಲ್ಲ. ಆಗಿನ ಕವಿಗಳಿಗೆ ಸೆನ್ಸಾರ್‌ಶಿಪ್‌ ಇರಲಿಲ್ಲ. ಈಗ ಏನಾದರೂ ಬರೆದರೆ ಕಲ್ಲು ಇಲ್ಲವೆ ಗನ್ನಿನಿಂದ ಕೊಲ್ಲುತ್ತಾರೆ ಎಂಬ ಭಯದಲ್ಲಿದ್ದೇವೆ. ಹಳಗನ್ನಡದಲ್ಲಿ ನಿರ್ಭೀತಿ ಯಿಂದ ತಮ್ಮ ವಿಚಾರವನ್ನು ಅಂದಿನ ಕವಿಗಳು ಮಂಡಿಸಿದ್ದಾರೆ. ಅಂತಹ ಹಳಗನ್ನಡ ಓದಲು ಈಗ
ಯಾರಿಗೂ ಅಡ್ಡಿ ಇಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌, ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾ ನದ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ 150 ಪುಸ್ತಕಗಳನ್ನು ಅಂತರ್ಜಾಲ 
ದಲ್ಲಿ ಸೇರಿಸಲಾಗುತ್ತದೆ. ಇಂದಿನ ವಿಶ್ವ ವಿದ್ಯಾನಿಲಯಗಳೂ ಹಳಗನ್ನಡದ ಕಾರ್ಯಾಗಾರ ಮಾಡಿದರೆ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗ ನೀಡುವ ಭರವಸೆ ನೀಡಿದರು. 

ಉಪನ್ಯಾಸಕ ಬರಾಳು ಶಿವರಾಮು ರಚಿಸಿರುವ ರಂಗ ವೈಭವ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಸಾಹಿತಿ ದೊಡ್ಡರಂಗೇಗೌಡ, ಎಸ್‌.ಎನ್‌.ಅಶೋಕ್‌ ಕುಮಾರ್‌, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್‌, ಕನ್ನಡ ಸಾಹಿತ್ಯ ಪರಿಷತ್ತಿನ
ಗೌರವ ಕಾರ್ಯದರ್ಶಿ ರಾಜಶೇಖರ ಹತಗುಂದಿ, ಕಸಾಪ ಜಿಲ್ಲಾಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ತಾಲೂಕು ಅಧ್ಯಕ್ಷ ಪ್ರಕಾಶ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ನಡುವೆ ಭಾವನಾತ್ಮಕ ಸಂಬಂಧ ಬೆಳೆಯುವುದು ಕನ್ನಡ ಸಾಹಿತ್ಯದಲ್ಲಿ ಮಾತ್ರ. ಕನ್ನಡದಲ್ಲಿ ಬೋಧನೆ ಮಾಡುವಾಗ ಗುರು-ಶಿಷ್ಯರಲ್ಲಿ ಆತ್ಮೀಯತೆ ಬೆಳೆಯುತ್ತದೆ. ಕನ್ನಡ ಸಾಹಿತ್ಯದ ಪರಿಜ್ಞಾನವಿಲ್ಲದಿದ್ದವರು, ಸಂಸ್ಕೃತಿ, ಸಾಹಿತ್ಯವಿಲ್ಲದವರು ಕನ್ನಡದ ಅತ್ಯುನ್ನತ ಪದವಿಗೇರಿದರೆ ಅನರ್ಥವಾಗುತ್ತದೆ.
● ಸಿದ್ದಲಿಂಗಯ್ಯ ಖ್ಯಾತ ಕವಿ

Advertisement
Advertisement

Udayavani is now on Telegram. Click here to join our channel and stay updated with the latest news.

Next