Advertisement

ಶಿರಸಿ: ಏ.15 ರಂದು ಸ್ವರ್ಣವಲ್ಲೀ ರಾಜಗೋಪುರ ಸಮರ್ಪಣೆ

12:06 PM Apr 11, 2022 | Team Udayavani |

ಶಿರಸಿ:  ಸ್ವರ್ಣವಲ್ಲೀ ಮಹಾಸಂಸ್ಥಾನದ ಚರಿತ್ರೆಯ ಪುಟಗಳಲ್ಲಿ ಇನ್ನೊಂದು ದಾಖಲೆ ಕಾರ್ಯಕ್ಕೆ‌ ಏ.15 ರಂದು ಸಾಕ್ಷಿಯಾಗಲಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳ‌ ಮೂಲಕ ಬಹು‌ ನಿರೀಕ್ಷಿತ ಗೋಪುರದ ಸಮರ್ಪಣೆ ಆಗಲಿದೆ‌.

Advertisement

ಸ್ವರ್ಣವಲ್ಲೀ ಮಠಾಧೀಶ  ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಸಂಕಲ್ಪ ಮತ್ತು ಕ್ರಿಯಾಶೀಲತೆಗೆ ಮೇರು ಸಾಕ್ಷಿಯಾಗಿ ದ್ರಾವಿಡ ಶೈಲಿಯಲ್ಲಿ ಉತ್ತರ ದಿಕ್ಕಿನ ಏಳು ಅಂತಸ್ತಿನ ರಾಜಗೋಪುರ, ಮಹಾದ್ವಾರ, ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.

ತಮಿಳುನಾಡಿನ ಶಿಲ್ಪಿ ಕರುಪ್ಪಯ್ಯ ಆಚಾರಿ ಅವರಿಂದ ತಮಿಳುನಾಡಿನ ಸೇಲಂ ಜಿಲ್ಲೆಯ ರಾಶೀಪುರಂ ಊರಿನ ಕಪ್ಪುಕಲ್ಲು ತಂದು 18ಅಡಿ ಎತ್ತರದವರೆಗೆ ಶಿಲ್ಪಕಲಾ ಶಾಸ್ತ್ರ ಪ್ರಕಾರ ನಿರ್ಮಾಣಮಾಡಿ ಅದರ ಮೇಲೆ 44ಅಡಿ ಇಟ್ಟಿಗೆ ಮತ್ತು ಸಿಮೆಂಟಿನಿಂದ ನಿರ್ಮಾಣ ಮಾಡಲಾಗಿದೆ. ಶಿವ ಸಂಬಂಧ ಮೂರ್ತಿಗಳು ವಿಷ್ಣು ಸಂಬಂಧ ಮೂರ್ತಿಗಳು ದೇವಿಯರು ಮತ್ತು ಗಣಪತಿ ಮೂರ್ತಿಗಳನ್ನು ಕೂಡ ಕೆತ್ತಲಾಗಿದೆ. ಈ ಸುಂದರವಾದ ರಾಜಗೋಪುರ ದರ್ಶನೀಯವಾಗಿದೆ.

ಇದರ ಉದ್ಘಾಟನೆ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಉದ್ಘಾಟನಾ ಕಾರ್ಯ ಏ.15 ರ ಬೆಳಿಗ್ಗೆ 11ಕ್ಕೆ ನಡೆಯಲಿದೆ. ನವಕಲಶ ಪ್ರತಿಷ್ಠಾನ್ವಿತ ರಾಜಗೋಪುರ ಸಮರ್ಪಣೆ ಸಮಾರಂಭವು ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಲೋಕಾರ್ಪಣೆಗೊಳಿಸಲಿದ್ದಾರೆ.

ಈ ವೇಳೆ ಹಿರಿಯ ಸಾಮಾಜಿಕ‌ ಮುಂದಾಳು ವಿ.ಟಿ.ಹೆಗಡೆ‌ ಜಾನ್ಮನೆ ಉಪಸ್ಥಿತರಿರಲಿದ್ದಾರೆ. ಮಠದ ಶಿಷ್ಯರು, ಭಕ್ತರು ಈ ವೇಳೆ ಪಾಲ್ಗೊಳ್ಳಲು ಮಠದ ಆಡಳಿತ ಮಂಡಳಿ‌ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ ಮನವಿ‌ ಮಾಡಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next