Advertisement

ಸ್ವರ್ಣಗೌರಿ ದೇವಿಗೆ ವಿಶೇಷ ಪೂಜೆ

01:46 PM Aug 22, 2020 | Suhan S |

ಅರಸೀಕೆರೆ: ತಾಲೂಕಿನ ಸುಕ್ಷೇತ್ರ ಮಾಡಾಳು ಗ್ರಾಮದ ಶ್ರೀಸ್ವರ್ಣಗೌರಿ ದೇವಿಯ ಪೂಜಾ ಕೈಕಂರ್ಯವನ್ನು ಕೋವಿಡ್ ಮಹಾಮಾರಿಯ ಸೋಂಕಿನ ಹಿನ್ನೆಲೆಯಲ್ಲಿ ಸರಳವಾಗಿ ಬೆರಳೆಣಿಕೆಯ ಭಕ್ತರು ಪ್ರತಿವರ್ಷದ ಸಂಪ್ರದಾಯದಂತೆ ಅತ್ಯಂತ ಶ್ರದ್ಧಾಭಕ್ತಿಯಿಂದ ಶುಕ್ರವಾರ ನೆರವೇರಿಸಿದರು.

Advertisement

ರಾಜ್ಯದಲ್ಲೆಡೆ ಶ್ರೀಪ್ರಸನ್ನ ಗಣಪತಿ ಉತ್ಸವ ಹಾಗೂ ಮಾಡಾಳು ಶ್ರೀಸ್ವರ್ಣಗೌರಿ ದೇವಿಯ ಉತ್ಸವಕ್ಕೆ ಹೆಸರು ವಾಸಿಯಾಗಿದ್ದು, ಗೌರಿ ಹಬ್ಬದ ನಿಮಿತ್ತಮಾಡಾಳು ಗ್ರಾಮ ನವ ವಧುವಿನಂತೆ ತಳಿರು, ತೋರಣ, ಬಾಳೆ ಗಿಡಗಳಿಂದ ಶೃಂಗರಿಸಲಾಗಿತ್ತು. ಆದರೆ ಕೋವಿಡ್ ಸೋಂಕು ಹರಡುವ ಕಾರಣ ಸ್ವರ್ಣಗೌರಿ ಭಕ್ತ ಮಂಡಲಿ ಜಾತ್ರೆಯು ಇಲ್ಲವೆಂದು ಮೊದಲೇ ವಿನಂತಿಸಿದರೂ ನೂರಾರು ಮಂದಿ ಭಕ್ತರು ಆಗಮಿಸಿ ಶ್ರೀ ಸ್ವರ್ಣಗೌರಿ ದೇವಿ ದರ್ಶನ ಪಡೆದು ದೇವಿ ಕೃಪೆಗೆ ಪಾತ್ರರಾದರು.

ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಶುಕ್ರವಾರ ಬೆಳಗ್ಗೆ ಸ್ವರ್ಣ ಗೌರಿ ಮೂಲ ಸ್ಥಾನವಾದ ಗೌಡರ ಬಾವಿ ಬಳಿ ಲಿಂಗಪೂಜೆ ನೆರವೇರಿಸಿ ನಂತರ ಸ್ವರ್ಣಗೌರಿ ದೇವಿಮೂಲ ಸನ್ನಿಧಿಯಲ್ಲಿ ದೇವಿಗೆ ಮಹಾ ತಪಸ್ವಿಗಳಾದ ಲಿಂಗೈಕ್ಯ ಶಿವಲಿಂಗಸ್ವಾಮೀಜಿ ದೇವಿಗೆ ಆಶೀರ್ವದಿಸಿ ನೀಡಿದ ವಜ್ರದ ಮೂಗುತಿಯನ್ನು ಗೌರಿ ದೇವಿ ನಿರ್ಮಿಸಿದ ಆಚಾರ ಪುಟ್ಟಶಾಮಾಚಾರ್‌ ಅವರಿಗೆ ಸ್ವಾಮೀಜಿ ಆಶೀರ್ವದಿಸಿ ನೀಡಿದ ನಂತರ ಆಚಾರ್‌ ಆವರು ಗೌರಿ ದೇವಿಗೆ ಧರಿಸಿದರು. ಮಧ್ಯಾಹ್ನ 2ಗಂಟೆಗೆ ಗ್ರಾಮದ ಮುಂಭಾಗದಲ್ಲಿರುವ ಕಲ್ಯಾಣಿಯಲ್ಲಿ ಹಾರನಹಳ್ಳಿ ಕೋಡಿಮಠದ ಸ್ವಾಮೀಜಿ ಸಮ್ಮುಖದಲ್ಲಿ ಕರ್ಪೂರಾದರತಿಯೊಡನೆ ಶ್ರೀದೇವಿಯನ್ನು ನೀರಿನಲ್ಲಿ ವಿಸರ್ಜಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next