ಮುಂಬಯಿ: 1974ರಿಂದ ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯ ಸೇವೆಯಲ್ಲಿ ತೊಡಗಿರುವ ಕೊಂಕಣಿ ಭಾಷಾ ಮಂಡಳ ಕರ್ನಾಟಕ ಇವರು ಮೇ 20ರಂದು ಮಂಗಳೂರಿನ ಕುದು¾ಲ್ ರಂಗ ರಾವ್ ಪುರಭವನದಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಸ್ವರಶ್ರೀ ಗೋವಾ ಕಲಾವಿದರಿಂದ ರಾಮಾಯಣ ಆಧಾರಿತ ಕೊಂಕಣಿ ಶ್ರೀರಾಮ ಗೀತಾ ಸಂಗೀತ ಕಾರ್ಯಕ್ರಮ ನಡೆಯಿತು.
ಕೊಂಕಣಿ ಭಾಷೆಯ ಖ್ಯಾತ ಕವಿ ದಿವಂಗತ ಮನೋಹರ ರಾಯ್ ಸರದೇಸಾಯಿ ಇವರು 50 ವರ್ಷಗಳ ಹಿಂದೆ ಗೋವಾ ಓಪಿನಿಯನ್ ಪೋಲ್‌ನ ಸಂದರ್ಭದಲ್ಲಿ ರಚಿಸಿದ ಗೀತೆಗಳಿಗೆ 17 ಕಲಾವಿದರ ತಂಡ “ಸ್ವರಶ್ರೀ ಗೋವಾ’ ಇವರು ಸಂಗೀತ ನೀಡಿ ವಿನೂತನ ಶೈಲಿಯಲ್ಲಿ ಕಾರ್ಯಕ್ರಮವನ್ನು ನೀಡಿದರು. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಈ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದ್ದೆವೆ ಎಂದು ಸ್ವರಶ್ರೀ ಗೋವಾ ಇದರ ಅಧ್ಯಕ್ಷ ಅಜೀಜ್ ಲೋಬೊ ತಿಳಿಸಿದರು. ಇಂತಹ ವಿನೂತನ ಕಾರ್ಯಕ್ರಮಗಳನ್ನು ನೀಡಿ ಕೊಂಕಣಿ ಹಾಗೂ ಇತರ ಸಂಗೀತ ಪ್ರೇಮಿಗಳಿಗೆ ಸಂಗೀತದ ರಸದೌತಣ ನೀಡಿದ ಕೊಂಕಣಿ ಭಾಷಾ ಮಂಡಳ ಕರ್ನಾಟಕ ಇವರನ್ನು ಮುಖ್ಯ ಅತಿಥಿ ನಂದಗೋಪಾಲ ಶೆಣೈ ಅವರು ಅಭಿನಂದಿಸಿ ಕಲಾವಿದರನ್ನು ಶಾಲು ಹೊದಿಸಿ ಗೌರವಿಸಿದರು.
ಪ್ರಸಿದ್ಧ ಸಿತಾರ್ ವಾದಕ ಉಸ್ತಾದ ರಫೀಕ ಖಾನ್ ಅವರು ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾನು ಹೆಚ್ಚಿನ ಸಮಯ ಗೋವಾದಲ್ಲಿ ಕಳೆದಿದ್ದು, ಗೋವಾ ರಾಜ್ಯದಿಂದ ಅನೇಕ ಸಂಗೀತಗಾರರರು ಹೊರಹೊಮ್ಮಿದ್ದಾರೆ. ಅಂತಹ ನಾಡಿನಿಂದ ಬಂದ ಈ ಕಲಾವಿದರ ಭವಿಷ್ಯ ಉಜ್ವಲವಾಗಲಿ ಎಂದು ಅವರು ಹಾರೈಸಿದರು. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣು ಅವರು ಶುಭಹಾರೈಸಿ, ಕವಿ ದಿವಂಗತ ಮನೋಹರ ರಾಯ್ ಸರದೇಸಾಯಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಕೊಂಕಣಿ ಭಾಷಾ ಮಂಡಳ ಅಧ್ಯಕ್ಷ ವೆಂಕಟೇಶ ಎನ್. ಬಾಳಿಗಾ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ಕೊಂಕಣಿ ಜಾಥಾ ಹಾಗೂ ಪ್ರಥಮ ವಿಶ್ವ ಕೊಂಕಣಿ ಸಮ್ಮೇಳನದಂತಹ ಕಾರ್ಯಕ್ರಮಗಳನ್ನು ಸಂಯೋಜಿ ಸಿದ ಭಾಷಾ ಮಂಡಳವು ಮುಂದಿನ ದಿನಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದು ಎಲ್ಲರು ಸಹಕಾರ ನೀಡಬೇಕು ಎಂದು ವಿನಂತಿಸಿದರು.
ಸಿ. ಡಿ. ಕಾಮತ್, ಗೋಕುಲದಾಸ ಪ್ರಭು, ಡಾ| ಕೆ. ಮೋಹನ ಪೈ, ಸ್ವರಶ್ರೀ ನಿರ್ದೇಶಕ ರಮಾನಂದ ರಾಯಕರ್ ಉಪಸ್ಥಿತರಿದ್ದರು. ಭಾಷಾ ಮಂಡಳದ ಉಪಾಧ್ಯಕ್ಷ ಎಂ. ಆರ್. ಕಾಮತ್, ನಿಕಟಪೂರ್ವ ಅಧ್ಯಕ್ಷೆ ಗೀತಾ ಸಿ. ಕಿಣಿ, ಕಾರ್ಯದರ್ಶಿ ರತ್ನಾಕರ ಕುಡ್ವ, ಕೋಶಾಧಿಕಾರಿ ವಿಠಲ್ ಕುಡ್ವ, ಸಂಚಾಲಕ ವಸಂತ ರಾವ್, ಸಂಪರ್ಕ ಕಾರ್ಯದರ್ಶಿ ಸುರೇಶ ಶೆಣೈ, ಸಹ ಕಾರ್ಯದರ್ಶಿ ಜುಲಿಯೆಟ್ ಫೆರ್ನಾಂಡಿಸ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಪೌಲ್ ಮೋರಾಸ್, ದಿನೇಶ ಶೇs…, ಪ್ರವೀಣ್ ಕಾಮತ್, ಮೀನಾಕ್ಷಿ ಪೈ ಅವರು ಸಹಕರಿಸಿದರು.